Site icon Vistara News

SSLC Result 2024: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಮಗನ ಜತೆ ತಾಯಿಯೂ ಪಾಸ್!

Mother passed SSLC exam with her son in Hassan

ಹಾಸನ: ರಾಜ್ಯಾದ್ಯಂತ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ (SSLC Result 2024) ಪ್ರಕಟಗೊಂಡಿದ್ದು, ಹಾಸನ ಜಿಲ್ಲೆಯಲ್ಲಿ ಅಪರೂಪದ ಪ್ರಸಂಗ ನಡೆದಿದೆ. ಎಸ್‌ಎಸ್‌‌ಎಲ್‌ಸಿ ಪರೀಕ್ಷೆಯಲ್ಲಿ ಮಗನ ಜತೆ ತಾಯಿಯೂ ಪಾಸ್ ಆಗಿದ್ದಾರೆ. ಸಕಲೇಶಪುರ ತಾಲೂಕಿನ ಚಿನ್ನಳ್ಳಿ ಗ್ರಾಮದಲ್ಲಿ ಎರಡನೇ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದ 38 ವರ್ಷದ ಜ್ಯೋತಿ ಪಿ.ಆರ್. ಉತ್ತೀರ್ಣರಾಗಿದ್ದಾರೆ.

ಇದನ್ನೂ ಓದಿ: SSLC Result 2024: ಎಸ್‌ಎಸ್‌ಎಲ್‌ಸಿ ‌ಉತ್ತರ ಪತ್ರಿಕೆ ಮರು ಮೌಲ್ಯಮಾಪನ, ಮರುಎಣಿಕೆಗೆ ಅರ್ಜಿ ಸಲ್ಲಿಸಲು ಆನ್‌ಲೈನ್‌ನಲ್ಲಷ್ಟೆ ಅವಕಾಶ

ತಾಯಿ-ಮಗ ಪಾಸ್‌

ಸಕಲೇಶಪುರ ತಾಲೂಕಿನ ಬಾಳ್ಳುಪೇಟೆಯ ಸಿದ್ದಣ್ಯಯ್ಯ ಹೈಸ್ಕೂಲ್‍ನಲ್ಲಿ ಮಗ ನಿತಿನ್ ಸಿ.ಬಿ. ಜತೆ ತಾಯಿ ಜ್ಯೋತಿ ಪಿ.ಆರ್. ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆದಿದ್ದರು. 250 ಅಂಕ ಪಡೆದು ಜ್ಯೋತಿ ಪಿ.ಆರ್. ಉತ್ತಿರ್ಣರಾಗಿದ್ದಾರೆ. ನಿತಿನ್‌ ಸಿ.ಬಿ. 582 ಅಂಕ ಪಡೆದಿದ್ದಾರೆ. ಬಾಳ್ಳುಪೇಟೆಯಲ್ಲಿರುವ ವಿವೇಕ ಕಾನ್ವೆಂಟ್‍ನಲ್ಲಿ ನಿತಿನ್ ಸಿ.ಬಿ. ಓದುತ್ತಿದ್ದಾರೆ.

ಕುಟುಂಬದಲ್ಲಿ ಮನೆ ಮಾಡಿದ ಸಂಭ್ರಮ

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಮಗನ ಜತೆ ತಾಯಿಯೂ ಉತ್ತೀರ್ಣರಾಗಿದ್ದಕ್ಕೆ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ.

SSLC Result 2024: ಎಸ್‌ಎಸ್‌ಎಲ್‌ಸಿ ‌ಉತ್ತರ ಪತ್ರಿಕೆ ಮರು ಮೌಲ್ಯಮಾಪನ, ಮರುಎಣಿಕೆಗೆ ಅರ್ಜಿ ಸಲ್ಲಿಸಲು ಆನ್‌ಲೈನ್‌ನಲ್ಲಷ್ಟೆ ಅವಕಾಶ

ರಾಜ್ಯಾದ್ಯಂತ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ (SSLC Result 2024) ಫಲಿತಾಂಶವು ಮೇ 9ರಂದು ಪ್ರಕಟಿಸಲಾಗಿದೆ. ಇದೀಗ ಪರೀಕ್ಷೆಯ ಉತ್ತರ ಪತ್ರಿಕೆಗಳ ಪ್ರತಿಗಳನ್ನು ವಿದ್ಯಾರ್ಥಿಗಳು ಪಡೆಯಬಹುದಾಗಿದೆ. ಸ್ಕ್ಯಾನ್‌ ಪ್ರತಿ, ಮರು ಎಣಿಕೆ ಮತ್ತು ಮರುಮೌಲ್ಯಮಾಪನಕ್ಕೆ ಮಂಡಳಿಯ ವೆಬ್‌ಸೈಟ್‌ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಇದನ್ನೂ ಓದಿ: Karnataka Weather : ಕೊಡಗು, ಕೊಪ್ಪಳ ಸೇರಿ ಹಲವೆಡೆ ಅಬ್ಬರಿಸುತ್ತಿರುವ ಗಾಳಿ- ಮಳೆ; ನಾಳೆಗೂ ವಾರ್ನಿಂಗ್‌

ಮೇ 9ರಿಂದ 16ರವರೆಗೆ ಉತ್ತರ ಪತ್ರಿಕೆಗಳ ಸ್ಕ್ಯಾನ್‌ ಪ್ರತಿಯನ್ನು ಪಡೆಯಲು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಉತ್ತರ ಪತ್ರಿಕೆಗಳ ಮರುಎಣಿಕೆಗೆ ಮತ್ತು ಮರು ಮೌಲ್ಯಮಾಪನಕ್ಕೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು. ಮೇ 13ರಿಂದ 22ವರೆಗೆ ಅರ್ಜಿ ಸಲ್ಲಿಸಬಹುದು ಜತೆಗೆ ಶುಲ್ಕವನ್ನು ಪಾವತಿಬಹುದಾಗಿದೆ.

ಇನ್ನೂ ನೇರವಾಗಿ ಮರು ಎಣಿಕೆಗಾಗಿ ಭೌತಿಕವಾಗಿ ಅರ್ಜಿ ಸಲ್ಲಿಸುವಂತಿಲ್ಲ. ಬದಲಿಗೆ ಆನ್‌ಲೈನ್‌ ಮೂಲಕವೇ ಅರ್ಜಿಯನ್ನು ಸಲ್ಲಿಸಬೇಕಿದೆ. ಮರು ಎಣಿಕೆ ಬಯಸುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಸಂಬಂಧಪಟ್ಟ ವಿಷಯದ ಉತ್ತರ ಪತ್ರಿಕೆಯ ಸ್ಕ್ಯಾನ್‌ ಪ್ರತಿಯನ್ನು ಪಡೆಯಬೇಕು.

ಸ್ಕ್ಯಾನ್‌ ಪ್ರತಿಯನ್ನು ಪಡೆದ ನಂತರ ಅಂಕಗಳ ಎಣಿಕೆಯಲ್ಲಿ ವ್ಯತ್ಯಾಸವಿದ್ದರೆ, ಅದನ್ನೂ ಖಚಿತಪಡಿಸಿಕೊಂಡ ನಂತರವಷ್ಟೇ ಮರುಎಣಿಕೆಗಾಗಿ ಅರ್ಜಿಯನ್ನು ಸಲ್ಲಿಸಬೇಕು. ಮರುಎಣಿಕೆಗಾಗಿ ಭೌತಿಕವಾಗಿ ಅರ್ಜಿಗಳನ್ನು ಸ್ವೀಕರಿಸುವುದನ್ನು ರದ್ದುಗೊಳಿಸಲಾಗಿದೆ. ಮರುಎಣಿಕೆ ಬಯಸುವ ಅಭ್ಯರ್ಥಿಗಳು ಆನ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸಬೇಕಾಗಿರುತ್ತದೆ.

ಇನ್ನೂ ಮರುಎಣಿಕೆಯು ಉಚಿತವಾಗಿದ್ದು ಪ್ರತ್ಯೇಕ ಶುಲ್ಕವಿರುವುದಿಲ್ಲ. ಮರು ಎಣಿಕೆ ಅಂಕಗಳ ಎಣಿಕೆಯಲ್ಲಿ ವ್ಯತ್ಯಾಸವಿದ್ದಲ್ಲಿ ಪರಿಶೀಲಿಸಿ, ನಂತರ ಪರಿಷ್ಕೃತ ಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತದೆ.

ಇದನ್ನೂ ಓದಿ: Sensex Crash : ಷೇರು ಮಾರುಕಟ್ಟೆಯಲ್ಲಿ ಭಾರೀ ಕುಸಿತ, ಸೆನ್ಸೆಕ್ಸ್​ 1100 ಅಂಕಗಳಷ್ಟು ಪತನ

ಸಹಾಯವಾಣಿಗೆ ಕರೆ ಮಾಡಿ

ಎಸ್‌ಎಸ್‌ಎಲ್‌ಸಿ ಫಲಿತಾಂಶ, ಮೌಲ್ಯಮಾಪನಗೊಂಡ ಉತ್ತರ ಪತ್ರಿಕೆಗಳ ಸ್ಕ್ಯಾನ್‌ ಪಡೆಯುವ ಮತ್ತು ಮರು ಎಣಿಕೆಗೆ ಅರ್ಜಿ ಸಲ್ಲಿಸಲು ಯಾವುದೇ ಮಾಹಿತಿ ಪಡೆಯಬಹುದಾಗಿದೆ. ಹೀಗಾಗಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಸಹಾಯವಾಣಿಯನ್ನು ಆರಂಭವಿಸಿದೆ. ವಿದ್ಯಾರ್ಥಿಗಳು ಸಹಾಯವಾಣಿ ಸಂಖ್ಯೆ 080 23310075, 23310076ಕ್ಕೆ ಕರೆ ಮಾಡಬಹುದು.

Exit mobile version