Site icon Vistara News

2024ನೇ ಸಾಲಿನ ಜಯಂತಿಗಳ ಪಟ್ಟಿ ಬಿಡುಗಡೆ ಮಾಡಿದ ರಾಜ್ಯ ಸರ್ಕಾರ

Vidhana soudha

ಬೆಂಗಳೂರು: 2024ನೇ ಸಾಲಿನಲ್ಲಿ ಜನವರಿಯಿಂದ ಡಿಸೆಂಬರ್‌ವರೆಗೆ ಕನ್ನಡ ಮತ್ತು ಸಂಸ್ಕೃತ ಇಲಾಖೆಯಿಂದ ಆಚರಿಸಬೇಕಾದ ಜಯಂತಿಗಳ ದಿನಾಂಕಗಳ ಪಟ್ಟಿಯನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. ಮಾರ್ಗಸೂಚಿಯನ್ವಯ ಜಿಲ್ಲಾ ಕೇಂದ್ರಗಳಲ್ಲಿ ಮಹನೀಯರ ಜಯಂತಿಗಳನ್ನು ಆಚರಣೆ ಮಾಡಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ.

2023-24ನೇ ಸಾಲಿನ ಆರ್ಥಿಕ ವರ್ಷದಲ್ಲಿ ಆಚರಿಸಬೇಕಾದ ಜಯಂತಿಗಳ ವಿವರಗಳನ್ನು ಈ ಹಿಂದೆಯೇ ಕಳುಹಿಸಲಾಗಿತ್ತು. ಆದರೆ, ಆಗ 2024ನೇ ಸಾಲಿನ ಕ್ಯಾಲೆಂಡರ್ ಇಲ್ಲದ ಕಾರಣ ಅದರಲ್ಲಿ ಕೆಲವು ಜಯಂತಿಗಳ ನಿಖರವಾದ ದಿನಾಂಕವನ್ನು ಗುರುತಿಸಲು ಸಾಧ್ಯವಾಗಿಲ್ಲ. ಹೀಗಾಗಿ 2024ನೇ ಸಾಲಿನ ಜಯಂತಿಗಳ ಪರಿಷ್ಕೃತ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

ಇದನ್ನೂ ಓದಿ | CM Siddaramaiah: ನಿಮ್ಮನ್ನು ಒಳಗೆ ಬಿಡದ ದೇವಸ್ಥಾನಗಳಿಗೆ ಹೋಗಬೇಡಿ: ಸಿಎಂ ಸಿದ್ದರಾಮಯ್ಯ ಕರೆ

ಅಂಬೇಡ್ಕರ್‌, ಬುದ್ಧ, ಬಸವರನ್ನು ದೇವರೆಂದರೆ ತಪ್ಪಿಲ್ಲ ಎಂದ ಹೈಕೋರ್ಟ್

ಬೆಂಗಳೂರು: ಜನಪ್ರತಿನಿಧಿಗಳು ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ (Oath Taking) ಸ್ವೀಕರಿಸುವ ಸಂದರ್ಭದಲ್ಲಿ ಅಂಬೇಡ್ಕರ್‌ (Dr BR Ambedkar), ಬುದ್ಧ (Goutama Buddha), ಬಸವೇಶ್ವರರ (Jagajyothi Basaveshwara) ಹೆಸರಿನಲ್ಲಿ ಪ್ರತಿಜ್ಞೆ ಮಾಡಬಹುದೇ ಎಂಬ ಜಿಜ್ಞಾಸೆಗೆ ರಾಜ್ಯ ಹೈಕೋರ್ಟ್‌ (Karnataka High court) ಸ್ಪಷ್ಟನೆಯನ್ನು ನೀಡಿದೆ. ಈ ವ್ಯಕ್ತಿಗಳನ್ನು ದೈವಾಂಶ ಸಂಭೂತರೆಂದು ಗುರುತಿಸುವುದರಲ್ಲಿ ತಪ್ಪಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದೆ ಮತ್ತು ಅವರ ಹೆಸರಿನಲ್ಲಿ ಪ್ರತಿಜ್ಞೆ ಸ್ವೀಕರಿಸಬಹುದು ಎಂದು ಸ್ಪಷ್ಟಪಡಿಸಿದೆ.

ಕರ್ನಾಟಕ ವಿಧಾನಸಭೆಗೆ ಆಯ್ಕೆಯಾಗಿರುವ ನೂತನ ಸದಸ್ಯರು ಸಂವಿಧಾನದ ಮೂರನೇ ಷೆಡ್ಯೂಲ್‌ ಅಡಿ ನಿಬಂಧನೆಗೆ ವಿರುದ್ಧವಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ ಎಂದು ಆಕ್ಷೇಪಿಸಿ ಬೆಳಗಾವಿಯ ಭೀಮಪ್ಪ ಗುಂಡಪ್ಪ ಗಡಾದ್‌ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ವಿಚಾರಣೆಯ ಸಂದರ್ಭ ಈ ವಿಚಾರಗಳು ಚರ್ಚೆಗೆ ಬಂದವು.

ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್.‌ ದೀಕ್ಷಿತ್‌ ಅವರ ನೇತೃತ್ವದ ವಿಭಾಗೀಯ ಪೀಠವು ಗುಂಡಪ್ಪ ಗಡಾದ್‌ ಅವರ ದಾವೆಯನ್ನು ವಜಾ ಮಾಡುವ ವೇಳೆ, ಬುದ್ಧ, ಬಸವೇಶ್ವರ ಮತ್ತು ಅಂಬೇಡ್ಕರ್‌ ಅವರನ್ನು ದೈವ ಸ್ವರೂಪಿಗಳು ಎಂದು ಪರಿಗಣಿಸಲಾಗಿದೆ. ಸಂವಿಧಾನವು ‘ದೇವರು’ ಅನ್ನು ಸೂಚಿಸಲು ಬಳಸಿರುವ ಅರ್ಥ ಅದೇ ಆಗಿದೆ ಎಂದು ಅಭಿಪ್ರಾಯಪಟ್ಟಿದೆ.

“ಕೆಲವು ಸಂದರ್ಭಗಳಲ್ಲಿ ಮೇರು ವ್ಯಕ್ತಿತ್ವಗಳಾದ ಭಗವಾನ್‌ ಬುದ್ದ (ಕ್ರಿ ಪೂ 563-483), ಜಗಜ್ಯೋತಿ ಬಸವೇಶ್ವರ (1131-1196), ಡಾ. ಬಿ ಆರ್‌ ಅಂಬೇಡ್ಕರ್‌ (1891-1956) ಇತರರನ್ನು ‘ದೈವಾಂಶ ಸಂಭೂತರು’ ದೇವರ ಅವತಾರ ಎನ್ನಲಾಗಿದೆ. ಇಂಗ್ಲಿಷ್‌ನಲ್ಲಿ ‘ದೇವರು’ ಎಂದು ಉಲ್ಲೇಖಿಸಲಾಗಿರುವುದರ ಅರ್ಥವು ಇದಕ್ಕೆ ಸಮೀಪದ್ದಾಗಿದೆ” ಎಂದು ನ್ಯಾಯಾಲಯದ ಆದೇಶದಲ್ಲಿ ವಿವರಿಸಲಾಗಿದೆ.

ಮುಂದುವರಿದು, “ಕನ್ನಡದಲ್ಲಿ ದೇವನೊಬ್ಬ, ನಾಮ ಹಲವು” ಎನ್ನಲಾಗುತ್ತದೆ. “ಬೃಹದರಣ್ಯಕ ಉಪನಿಷತ್”ನಲ್ಲಿ ಸತ್ಯ ಒಂದೇ ಆದರೆ ತಿಳಿದವರು ವಿವಿಧ ಹೆಸರಿನಿಂದ ಸಂಬೋಧಿಸುತ್ತಾರೆ ಎಂದು ಹೇಳಲಾಗಿದೆ. ದೇವರ ಹೆಸರಿನಲ್ಲಿ ಅಥವಾ ವಿಧ್ಯುಕ್ತ ರೀತ್ಯಾ ಪ್ರಮಾಣ ಸ್ವೀಕರಿಸಲು ಮೂರನೇ ಷೆಡ್ಯೂಲ್‌ನಲ್ಲಿ ಅನುಮತಿ ಇದೆ ಎಂಬುದನ್ನು ತಿಳಿಯಬಹುದು” ಎಂದು ನ್ಯಾಯಾಲಯ ಹೇಳಿದೆ.

ಇದನ್ನೂ ಓದಿ | Ram Mandir: ರಾಮನನ್ನು ಕೇವಲ ಕಾಲ್ಪನಿಕ ಎಂದಿದ್ದು ನೀವಲ್ಲವೇ? ಕಾಂಗ್ರೆಸ್‌ಗೆ ಬಿಜೆಪಿ ತಿರುಗೇಟು

ಇದೇ ವೇಳೆ ನ್ಯಾಯಾಲಯವು “ದೇವರ ಹೆಸರಿನಲ್ಲಿ ಅಥವಾ ದೇವರ ಹೆಸರು ಉಲ್ಲೇಖಿಸದೆಯೂ ಪ್ರಮಾಣ ವಚನ ಸ್ವೀಕರಿಸಬಹುದಾಗಿದೆ” ಎಂದು ಸ್ಪಷ್ಟಪಡಿಸಿದೆ. ಹೀಗಾಗಿ ಜನಪ್ರತಿನಿಧಿಗಳು ದೇವರ ಹೆಸರಿನಲ್ಲಿ, ದೇವರೆಂದು ಪರಿಗಣಿತವಾದ ಯಾರ ಹೆಸರಿನಲ್ಲೂ ಪ್ರಮಾಣವಚನ ಸ್ವೀಕರಿಸಬಹುದಾಗಿದೆ. ಜತೆಗೆ ದೇವರ ಹೆಸರಿನ ಉಲ್ಲೇಖ ಕಡ್ಡಾಯವೇನೂ ಅಲ್ಲ ಎನ್ನುವುದು ಹೈಕೋರ್ಟ್‌ ಅಭಿಮತ.

Exit mobile version