Site icon Vistara News

Essay Competition: ಸಮರ್ಥ ಭಾರತದಿಂದ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಗೆ ಆಹ್ವಾನ

SAMARTHA BHARATA State Level Essay Competition

ಬೆಂಗಳೂರು: ಸ್ವಾಮಿ ವಿವೇಕಾನಂದರ 161ನೇ ಜನ್ಮದಿನಾಚರಣೆ (ರಾಷ್ಟ್ರೀಯ ಯುವ ದಿನ) ಹಿನ್ನೆಲೆಯಲ್ಲಿ ನಗರದ ಸಮರ್ಥ ಭಾರತ (SAMARTHA BHARATA) ವತಿಯಿಂದ 10ನೇ ವರ್ಷದ ಬಿ ಗುಡ್ ಡು ಗುಡ್ ಅಭಿಯಾನವನ್ನು (BE GOOD DO GOOD) ಜನವರಿ 12 ರಿಂದ 26ರವರೆಗ ಹಮ್ಮಿಕೊಂಡಿದ್ದು, ಅಭಿಯಾನದ ಭಾಗವಾಗಿ ಕಾಲೇಜು ವಿದ್ಯಾರ್ಥಿಗಳಿಗಾಗಿ ʼರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆʼ (Essay Competition) ಹಮ್ಮಿಕೊಳ್ಳಲಾಗಿದೆ.

ʼಸ್ವಾಮಿ ವಿವೇಕಾನಂದರ ದೃಷ್ಟಿಯಲ್ಲಿ ಭಾರತʼ (Bharat in Swami Vivekananda’s Perspective) ಎಂಬ ವಿಷಯದ ಕುರಿತು ಪ್ರಬಂಧ ಸ್ಪರ್ಧೆ ನಡೆಯಲಿದೆ. ದಿ ಮಿಥಿಕ್‌ ಸೊಸೈಟಿ ಸಹಯೋಗದಲ್ಲಿ ಬಿ ಗುಡ್ ಡು ಗುಡ್ ಅಭಿಯಾನ ಹಮ್ಮಿಕೊಳ್ಳಲಾಗಿದೆ.

ಪ್ರಬಂಧ ಸ್ಪರ್ಧೆಯ ಮಾರ್ಗಸೂಚಿ

1.ಪದವಿ ಅಥವಾ ತತ್ಸಮಾನ, ಸ್ನಾತಕೋತ್ತರ ವಿದ್ಯಾರ್ಥಿಗಳು ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಬಹುದು.

2.ಬಹುಮಾನ:
ಪ್ರಥಮ: 10,000 ರೂ. ಮತ್ತು ಪ್ರಮಾಣ ಪತ್ರ
ದ್ವಿತೀಯ: 7,500 ರೂ. ಮತ್ತು ಪ್ರಮಾಣ ಪತ್ರ
ತೃತೀಯ: 5,000 ರೂ. ಮತ್ತು ಪ್ರಮಾಣ ಪತ್ರ
ಮತ್ತು ತಲಾ 1,000 ರೂ. ದಂತೆ 20 ಸಮಾಧಾನಕರ ಬಹುಮಾನಗಳು.

3.ಮೇಲೆ ತಿಳಿಸಿದ ವಿಷಯದ ಕುರಿತು, ಕನ್ನಡ ಅಥವಾ ಇಂಗ್ಲಿಷ್ ಭಾಷೆಯಲ್ಲಿ 2500 ಪದಗಳ ಮಿತಿಯಲ್ಲಿ ಪ್ರಬಂಧವನ್ನು ಸ್ವಹಸ್ತಾಕ್ಷರದಲ್ಲಿ ಬರೆದು ಈ ಕೆಳಗಿನ ವಿಳಾಸಕ್ಕೆ 2024ರ ಫೆಬ್ರವರಿ 10ರ ಒಳಗಾಗಿ ಕಳುಹಿಸಬೇಕು.

4.ಕಾಲೇಜಿನ ಪ್ರಾಂಶುಪಾಲರಿಂದ ಅಥವಾ ವಿಭಾಗ ಮುಖ್ಯಸ್ಥರಿಂದ ದೃಢೀಕರಿಸಲ್ಪಟ್ಟ ವ್ಯಾಸಂಗ ಪ್ರಮಾಣ ಪತ್ರ (Study Certificate) ವನ್ನು ಕಡ್ಡಾಯವಾಗಿ ಜತೆಗಿರಿಸಬೇಕು.

5.ವಿಳಾಸ: ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆ, ಮಿಥಿಕ್ ಸೊಸೈಟಿ ನೃಪತುಂಗ ರಸ್ತೆ, ಕೆ.ಆರ್. ವೃತ್ತ ಬಳಿ, ಬೆಂಗಳೂರು 560001. ಹೆಚ್ಚಿನ ಮಾಹಿತಿಗಾಗಿ: 8722552497, 9483150527, 9611260592

    ಇದನ್ನೂ ಓದಿ | Raja Marga Column : ನಿಮ್ಮ ಮೇಲೆ ಯಾರಾದರೂ ಸವಾರಿ ಮಾಡ್ತಿದಾರಾ? ಅದಕ್ಕೆ ಕಾರಣ ನೀವೇ!

    Exit mobile version