Site icon Vistara News

My Bharat | ದಿಶಾ ಭಾರತ್‌ ಸಂಸ್ಥೆಯಿಂದ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆ

My Bharat

ಬೆಂಗಳೂರು: ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ದಿಶಾ ಭಾರತ್‌ ಸಂಸ್ಥೆ ವತಿಯಿಂದ ನನ್ನ ಭಾರತ ಅಭಿಯಾನದ(My Bharat-ಆ.1ರಿಂದ ಆ.15) ಭಾಗವಾಗಿ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ. ʼಸ್ವರಾಜ್ಯ ಆಂದೋಲನ ಮತ್ತು ರಾಷ್ಟ್ರಭಾವ ಜಾಗರಣʼ ಪ್ರಬಂಧ ವಿಷಯವಾಗಿದ್ದು, ಆ.15ರೊಳಗೆ ವಿದ್ಯಾರ್ಥಿಗಳು ಸ್ವಹಸ್ತಾಕ್ಷರದಲ್ಲಿ ಬರೆದ ಪ್ರಬಂಧವನ್ನು ಕಳುಹಿಸಬಹುದಾಗಿದೆ.

ಪ್ರಬಂಧ ಸ್ಪರ್ಧೆ ಎರಡು ವಿಭಾಗಗಳಲ್ಲಿ ನಡೆಯಲಿದೆ. ವಿಭಾಗ-1ರಲ್ಲಿ 9, 10ನೇ ತರಗತಿ, ಪ್ರಥಮ/ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಹಾಗೂ ವಿಭಾಗ-2ರಲ್ಲಿ ಪದವಿ/ತತ್ಸಮಾನ, ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಅವಕಾಶವಿದೆ. ಪ್ರತಿ ವಿಭಾಗದಲ್ಲೂ ಪ್ರಥಮ ಬಹುಮಾನಕ್ಕೆ 10,000 ರೂ., ದ್ವಿತೀಯ ಬಹುಮಾನಕ್ಕೆ 7,500 ರೂ. ಮತ್ತು ತೃತೀಯ ಬಹುಮಾನಕ್ಕೆ 5,000 ರೂ. ನಗದು ಮತ್ತು ಪ್ರಮಾಣ ಪತ್ರ ನೀಡಲಾಗುತ್ತದೆ. ತಲಾ 1,000 ರೂ.ಗಳಂತೆ 10 ಸಮಾಧಾನಕರ ಬಹುಮಾನಗಳು ಇರಲಿವೆ.

ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ
ರಾಜ್ಯದ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ಮಾತ್ರ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿದೆ. ಮೇಲೆ ತಿಳಿಸಿದ ವಿಷಯದ ಕುರಿತು ಕನ್ನಡ ಅಥವಾ ಇಂಗ್ಲಿಷ್‌ನಲ್ಲಿ 1500 ಪದಗಳ ಮಿತಿಯಲ್ಲಿ ಪ್ರಬಂಧವನ್ನು ಸ್ವಹಸ್ತಾಕ್ಷರದಲ್ಲಿ ಬರೆದು, ಸ್ವವಿಳಾಸದ ವಿವರದೊಂದಿಗೆ ವಯಸ್ಸಿನ ದೃಢೀಕರಣಕ್ಕಾಗಿ ಆಧಾರ್‌ಕಾರ್ಡ್‌ ಪ್ರತಿಯನ್ನು ʼಈಸ್ಟ್‌ ವೆಸ್ಟ್‌ ಇನ್‌ಸ್ಟಿಟ್ಯೂಟ್ ಆಫ್‌ ಟೆಕ್ನಾಲಜಿ, ನಂ.63, ಬಿಇಎಲ್‌ ಲೇಔಟ್‌ ಹತ್ತಿರ, ಮಾಗಡಿ ಮುಖ್ಯ ರಸ್ತೆ ಎದುರು, ಅಂಜನಾ ನಗರ, ಬೆಂಗಳೂರು-560091 ಇಲ್ಲಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ 9483150527, 9945201546, 9945426967 ಸಂಪರ್ಕಿಸಬಹುದು.

ನನ್ನ ಭಾರತ ಅಭಿಯಾನದ ಭಾಗವಾಗಿ ಆ.1ರಿಂದ ಆ.15ವರೆಗೆ ಪ್ರತಿನಿತ್ಯ ವಿವಿಧ ಕಾರ್ಯಕ್ರಮಗಳನ್ನು ಆನ್‌ಲೈನ್ ಮೂಲಕ ಆಯೋಜಿಸಲಾಗಿದ್ದು, ದಿಶಾ ಭಾರತ್ ಫೇಸ್‌ಬುಕ್ (www.facebook.com/DishaBharat) ಮೂಲಕ ನೇರ ಪ್ರಸಾರವಾಗಲಿದೆ.

ಇದನ್ನೂ ಓದಿ | ಆಗಸ್ಟ್ 1ರಿಂದ My Bharat ರಾಷ್ಟ್ರಮಟ್ಟದ ಯುವ ಅಭಿಯಾನ, ಇಲ್ಲಿವೆ 20 ವಿಭಿನ್ನ ಕಾರ್ಯಕ್ರಮಗಳು

Exit mobile version