Site icon Vistara News

Essay Competition: ಸ್ವಹಸ್ತಾಕ್ಷರದಲ್ಲೇ ಬರೆಯಿರಿ, 10 ಸಾವಿರ ರೂಪಾಯಿ ಪಡೆಯಿರಿ!

ಬೆಂಗಳೂರು: ಸ್ವಾತಂತ್ರ್ಯೋತ್ಸವ 75ನೇ ವರ್ಷದ ಸಂದರ್ಭದಲ್ಲಿ My BHARAT ಅಭಿಯಾನ-2022 ರ ಅಂಗವಾಗಿ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯನ್ನು (State level Essay Competition) ಆಯೋಜಿಸಲಾಗಿದ್ದು, ಪ್ರಬಂಧವನ್ನು ಕಳುಹಿಸಿಕೊಡಲು ಆಗಸ್ಟ್‌ ೧೫ ಕೊನೇ ದಿನವಾಗಿದೆ.

ಸ್ವರಾಜ್ಯ ಆಂದೋಲನ ಮತ್ತು ರಾಷ್ಟ್ರಭಾವ ಜಾಗರಣ (Swarajya Movement and Rise of Nationalism) ವಿಷಯದ ಕುರಿತು ಕನ್ನಡ ಮತ್ತು ಇಂಗ್ಲಿಷ್‌ ಭಾಷೆಯಲ್ಲಿ ಪ್ರಬಂಧವನ್ನು ಆಹ್ವಾನಿಸಲಾಗಿದೆ. ಸ್ವಹಸ್ತಾಕ್ಷರದಲ್ಲೇ ಪ್ರಬಂಧ ಇರಬೇಕಿದ್ದು, 2500 ಪದಗಳ ಮಿತಿಯನ್ನು ನಿಗದಿಪಡಿಸಲಾಗಿದೆ.

ನಿಯಮಗಳು:
ವಿವಿಧ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ಪ್ರಬಂಧ ಸ್ಪರ್ಧೆಯು ಕರ್ನಾಟಕ ರಾಜ್ಯಮಟ್ಟದ ವ್ಯಾಪ್ತಿಯಲ್ಲಿ ನಡೆಯುತ್ತಿರುವುದರಿಂದ ಕರ್ನಾಟಕದ ಶಾಲಾ-ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ಇರಲಿದೆ. ಎರಡು ವಿಭಾಗಗಳಲ್ಲಿ ಸ್ಪರ್ಧೆಯು ನಡೆಯಲಿದ್ದು, ವಿಭಾಗ 1ರಲ್ಲಿ 9, 10ನೇ ತರಗತಿ ಹಾಗೂ ಪ್ರಥಮ/ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಅವಕಾಶವಿದೆ. ಇನ್ನು ವಿಭಾಗ 2ರಲ್ಲಿ ಪದವಿ ಯಾ ತತ್ಸಮಾನ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಅವಕಾಶವನ್ನು ನೀಡಲಾಗಿದೆ.

ಬಹುಮಾನಗಳು ಪ್ರತಿ ವಿಭಾಗಗಳಲ್ಲಿ:
ಪ್ರಥಮ:
ರೂ. 10,000 ಮತ್ತು ಪ್ರಮಾಣ ಪತ್ರ
ದ್ವಿತೀಯ: ರೂ. 7,500 ಮತ್ತು ಪ್ರಮಾಣ ಪತ್ರ
ತೃತೀಯ: ರೂ. 5,000 ಮತ್ತು ಪ್ರಮಾಣ ಪತ್ರ ಮತ್ತು ತಲಾ ರೂ. 1,000 ದಂತೆ 10 ಸಮಾಧಾನಕರ ಬಹುಮಾನಗಳುನ್ನು ನೀಡಲಾಗುವುದು.

ಈ ವಿಳಾಸಕ್ಕೆ ಕಳುಹಿಸಿ

ಸ್ವವಿಳಾಸದ ವಿವರದೊಂದಿಗೆ ವಯಸ್ಸಿನ ದೃಢೀಕರಣಕ್ಕಾಗಿ ಆಧಾರ್‌ ಕಾರ್ಡ್‌ ಪ್ರತಿಯನ್ನು ಕಡ್ಡಾಯವಾಗಿ ಲಗತ್ತಿಸಬೇಕಿದೆ. ವಿಳಾಸ: ನಂ.63, ಬಿಇಎಲ್ ಲೇಔಟ್ ಸಮೀಪ, ಮಾಗಡಿ ಮುಖ್ಯ ರಸ್ತೆ ಎದುರು, ವಿಶ್ವನೀಡಂ ಅಂಚೆ, ಅಂಜನಾನಗರ, ಬೆಂಗಳೂರು – 560091.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9483150527, 9945201546, 9945426967

ಇದನ್ನೂ ಓದಿ| 75ನೇ ಸ್ವಾತಂತ್ರ್ಯೋತ್ಸವಕ್ಕೆ ಪಕ್ಷಾತೀತ ಸ್ವಾತಂತ್ರ್ಯ ನಡಿಗೆ: ಡಿ.ಕೆ. ಶಿವಕುಮಾರ್

Exit mobile version