Site icon Vistara News

Sirsi News: ಸೆ.3 ರಂದು ಶಿರಸಿಯಲ್ಲಿ ರಾಜ್ಯ ಮಟ್ಟದ ಸ್ವರಾಜ್ಯ ಕವಿಗೋಷ್ಠಿ: ರಘುನಂದನ ಭಟ್

Akhila Bharatiya Sahitya Parishad Secretary Raghunandana Bhat pressmeet

ಶಿರಸಿ: ರಾಜ್ಯ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ವತಿಯಿಂದ ಸೆ.3 ರಂದು ಶಿರಸಿಯಲ್ಲಿ (Sirsi) ರಾಜ್ಯ ಮಟ್ಟದ ಸ್ವರಾಜ್ಯ ಕವಿಗೋಷ್ಠಿ (Swarajya kavigoshti) ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಭಾರತೀಯ ಸಾಹಿತ್ಯ ಪರಿಷದ್‌ನ ಪ್ರಧಾನ ಕಾರ್ಯದರ್ಶಿ ರಘುನಂದನ ಭಟ್ ತಿಳಿಸಿದರು.

ಶಿರಸಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಶಿರಸಿ ನಗರದ ಶ್ರೀ ರಾಘವೇಂದ್ರ ಮಠದ ಸಭಾ ಭವನದಲ್ಲಿ ಸೆ.3 ರ ಬೆಳಗ್ಗೆ 10 ಗಂಟೆಯಿಂದ ಸ್ವರಾಜ್ಯ-ಸುರಾಜ್ಯ ವಿಷಯದಡಿ ಸ್ವರಾಜ್ಯ ಕವಿಗೋಷ್ಠಿ ನಡೆಯಲಿದ್ದು, ಅಖಿಲ ಭಾರತೀಯ ಸಾಹಿತ್ಯ ಪರಿಷದ್ ನ ರಾಜ್ಯ ಉಪಾಧ್ಯಕ್ಷರಾದ ಹಾಗೂ ವಿಸ್ತಾರ ನ್ಯೂಸ್ ನ ಪ್ರಧಾನ ಸಂಪಾದಕರಾದ ಹರಿಪ್ರಕಾಶ್ ಕೋಣೆಮನೆ ಅವರು ಕವಿಗೋಷ್ಠಿ ಉದ್ಘಾಟಿಸಲಿದ್ದಾರೆ. ಅಲ್ಲದೆ ದಿಕ್ಸೂಚಿ ಮಾತುಗಳನ್ನ ಆಡಲಿದ್ದಾರೆ. ಸಂಸ್ಕೃತ ಅಧ್ಯಾಪಕರು ಹಾಗೂ ಕವಿಗಳಾದ ರಾಘವೇಂದ್ರ ರಾವ್ ಅಧ್ಯಕ್ಷತೆ ವಹಿಸಲಿದ್ದಾರೆ‌.

ಇದನ್ನೂ ಓದಿ: Asia Cup 2023: ಪಾಕ್‌, ನೇಪಾಳ ವಿರುದ್ಧದ ಪಂದ್ಯಗಳಲ್ಲಿ ಕೆಎಲ್‌ ರಾಹುಲ್‌ ಆಡೊಲ್ಲ: ಏನು ಕಾರಣ?

ರಾಜ್ಯದ ಬಹುತೇಕ ಜಿಲ್ಲಾ ಕೇಂದ್ರದಲ್ಲಿ ಇದೇ ವಿಷಯದಲ್ಲಿ ಕವಿಗೋಷ್ಠಿ ಯಶಸ್ವಿಯಾಗಿ ನಡೆದಿದ್ದು, ಮೂರು ಕವಿಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಕವಿಗೋಷ್ಠಿಯಲ್ಲಿ 25 ಕವಿಗಳಿಗೆ ವಾಚನಕ್ಕೆ ಅವಕಾಶ ಕಲ್ಪಿಸಲಾಗಿದೆ. ವಿಜೇತರಿಗೆ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ರಾಜ್ಯ ಉಪಾಧ್ಯಕ್ಷ. ಹರಿಪ್ರಕಾಶ್ ಕೋಣೆಮನೆ ಅವರು ಬಹುಮಾನ ವಿತರಣೆ ಮಾಡಲಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ: Human Dog: ನನ್ನ ಕನಸು ನನಸಾಗಿದೆ; ಇದು ಮನುಷ್ಯನಿಂದ ಶ್ವಾನವಾಗಿ ಬದಲಾದವನ ಮನದಾಳ

ಸುದ್ದಿಗೋಷ್ಠಿಯಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷದ್‌ನ ಜಗದೀಶ್ ಭಂಡಾರಿ, ಶಂಕರ್ ಭಟ್ ಇದ್ದರು.

Exit mobile version