Site icon Vistara News

Stone Mining: ಗೇರುಪುರ ಗ್ರಾಮದಲ್ಲಿ ಕಲ್ಲು ಗಣಿಗಾರಿಕೆಗೆ ಅನುಮತಿ ಬೇಡ; ತಹಸೀಲ್ದಾರ್‌ಗೆ ಮನವಿ

Stone Mining Gerupur village hosanagara

#image_title

ಹೊಸನಗರ: ತಾಲೂಕಿನ ಕಸಬಾ ಹೋಬಳಿ ಗೇರುಪುರ ಗ್ರಾಮದ ಸರ್ವೆ ನಂಬರ್ 9ರಲ್ಲಿ ಕಲ್ಲುಗಣಿಗಾರಿಕೆಗೆ (Stone Mining) ಅನುಮತಿ ನೀಡಬಾರದೆಂದು ಗ್ರಾಮಸ್ಥರು ತಹಸೀಲ್ದಾರ್ ವಿ.ಎಸ್. ರಾಜೀವ್‌ ಅವರಿಗೆ ಮನವಿ ಸಲ್ಲಿಸಿದರು.

“ಸರ್ವೇ ನಂಬರ್‌ 9ರಲ್ಲಿ ಈಗಾಗಲೇ 2 ಕ್ವಾರೆಗಳಿಂದ ಗ್ರಾಮಸ್ಥರಿಗೆ ತೊಂದರೆ ಉಂಟಾಗುತ್ತಿದೆ. ಅಲ್ಲದೆ, ಮನೆಗಳಿಗೆ ಹಾನಿಯುಂಟಾಗಿದೆ. ಕಲ್ಲು ಕ್ವಾರೆಗಳು ನಡೆಯುತ್ತಿರುವ ಪ್ರದೇಶದಿಂದ ಬೇರೆ ಊರುಗಳಿಗೆ ಓಡಾಡುವ ರಸ್ತೆಯಿದ್ದು ಇದರಿಂದ ಸಾರ್ವಜನಿಕರಿಗೆ ಮತ್ತು ಶಾಲಾ ಮಕ್ಕಳಿಗೆ ತೊಂದರೆ ಉಂಟಾಗುತ್ತಿದೆ. ನಮ್ಮ ಸುತ್ತಮುತ್ತಲಿನ ಪರಿಸರ ನಾಶದಿಂದ ಮಕ್ಕಳಿಗೆ ಕಾಯಿಲೆಗಳು ಬರುತ್ತಿದ್ದು, ಕಲ್ಲು ಕ್ವಾರೆಯಲ್ಲಿ ಬ್ಲಾಸ್ಟಿಂಗ್ ನಡೆಸುತ್ತಿರುವುದರಿಂದ ಮನೆಯ ಗೋಡೆಗಳಿಗೂ ಹಾನಿಯಾಗುತ್ತಿದೆ. ನಮ್ಮ ಸುತ್ತಮುತ್ತ ಧೂಳಿನ ಮಯವಾಗಿದೆ. ಧೂಳಿನಿಂದಾಗಿ ಕುಡಿಯುವ ನೀರಿಗೂ ತೊಂದರೆಯಾಗುತ್ತಿದೆ. ಬ್ಲಾಸ್ಟ್ ಆದ ಕಲ್ಲುಗಳು ಮನೆಯ ಮೇಲೆ ಬೀಳುತ್ತಿರುವುದರಿಂದ ಮುಂದೆ ತೊಂದರೆಯಾಗುವ ಸಂಭವವಿದ್ದು ತಕ್ಷಣವೇ ಸ್ಥಳ ತನಿಖೆ ನಡೆಸುವುದರ ಜತೆಗೆ ಕಲ್ಲು ಕ್ವಾರೆಯನ್ನು ನಿಲ್ಲಿಸಲು ಆದೇಶ ಮಾಡಬೇಕು” ಎಂದು ಮನವಿ ಪತ್ರದಲ್ಲಿ ವಿನಂತಿಸಲಾಗಿದೆ.

ಇದನ್ನೂ ಓದಿ: Akshay Kumar: ಬೈಕಾಟ್ ಗ್ಯಾಂಗ್​ನ ಟ್ರೋಲ್ ಮಾಡಿದ ಅಕ್ಷಯ್‌ ಕುಮಾರ್‌: ಸೆಲ್ಫಿ ಸಿನಿಮಾ ಫೆ.24ಕ್ಕೆ ತೆರೆಗೆ

ಈ ಸಂದರ್ಭದಲ್ಲಿ ಗೇರುಪುರ ಪ್ರಶಾಂತ್, ರಾಘವೇಂದ್ರ, ಆನಂದ, ಅಣ್ಣಪ್ಪ, ಕುಮಾರ, ರಾಜು, ಶೇಲಾ, ವೀರೇಂದ್ರ, ಅನಿತಾ, ಮೋಹನ್ ರಾಜ್, ಆಶಾ, ಸುಜಾತಾ, ಚಂದ್ರ, ರಾಜೇಶ ಇನ್ನೂ ಅನೇಕ ಗ್ರಾಮಸ್ಥರು ಉಪಸ್ಥಿತರಿದ್ದರು.

ಇದನ್ನೂ ಓದಿ: MS Dhoni: ನಟ ಯೋಗಿ ಬಾಬುಗೆ ವಿಶೇಷ ಉಡುಗೊರೆ ನೀಡಿದ ಮಹೇಂದ್ರ ಸಿಂಗ್​ ಧೋನಿ

Exit mobile version