Site icon Vistara News

Stone Mining: ಹೊಸನಗರ ಮಾರಿಗುಡ್ಡದಲ್ಲಿ ಕಲ್ಲು ಗಣಿಗಾರಿಕೆ ತಾತ್ಕಾಲಿಕ ಸ್ಥಗಿತಕ್ಕೆ ಆದೇಶ

Stone Mining Hosanagara Marigudda

#image_title

ಹೊಸನಗರ: “ಶಿವಮೊಗ್ಗ ಜಿಲ್ಲೆಯ ಹೊಸನಗರ ಪಟ್ಟಣದ ಮಾರಿಗುಡ್ಡ ಸಮೀಪದಲ್ಲಿರುವ ಸರ್ವೆ ನಂಬರ್ 12ರಲ್ಲಿ ಕಲ್ಲು ಗಣಿಗಾರಿಕೆ (Stone Mining) ನಡೆಯುತ್ತಿದ್ದು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಅಂತಿಮ ತೀರ್ಪು ಬರುವವರೆಗೆ ಕೆಲಸವನ್ನು ತಾತ್ಕಾಲಿಕ ಸ್ಥಗಿತ ಮಾಡಬೇಕು” ಎಂದು ಭೂ ವಿಜ್ಞಾನ ಇಲಾಖೆಯ ವಲಯ ಭೂ ವಿಜ್ಞಾನಿ ವಿಂಧ್ಯಾ ಸೂಚಿಸಿದ್ದಾರೆ.

ಮಾರಿಗುಡ್ಡದ ಸಾರ್ವಜನಿಕರ ಮನೆಗಳಿಗೆ, ತೋಟ, ಗದ್ದೆಗಳಿಗೆ, ದನಕರುಗಳಿಗೆ ತೊಂದರೆಯಾಗುತ್ತಿದೆ. ಪಟ್ಟಣ ಪಂಚಾಯಿತಿ ವ್ಯಾಪ್ತಿ ಸಮೀಪವಿರುವುದರಿಂದ ಪಟ್ಟಣ ಪಂಚಾಯಿತಿಯ ಅಧೀನದ ಕುಡಿಯುವ ನೀರಿನ ಟ್ಯಾಂಕ್, ನ್ಯಾಯಾಲಯ, ಪೊಲೀಸ್ ವಸತಿ ಗೃಹ, ಬಡವರ ಮನೆಗಳಿಗೆ ಹಾಗೂ ಸಮೀಪ ಶಾಲೆಗಳಿರುವುದರಿಂದ ತೊಂದರೆಯಾಗುತ್ತಿದೆ. ಬಾವಿಗಳು ಬತ್ತಿ ಹೋಗುತ್ತಿದೆ ಹೊಳೆಯ ನೀರು ಬತ್ತಿ ಹೋಗುತ್ತಿದೆ. ಸಮೀಪ ಹಿಂದು ರುದ್ರ ಭೂಮಿಯಿದೆ. ಸಾರ್ವಜನಿಕರು ಓಡಾಟ ನಡೆಸುವ ಸೇತುವೆ ಕುಸಿದಿದ್ದು , ಹೊಸ ಸೇತುವೆ ನಿರ್ಮಾಣ ಮಾಡಲಾಗಿದೆ. ಆದರೂ ಇವರು ಮಾಡುವ ಬ್ಲಾಸ್ಟಿಂಗ್‌ಗೆ ಆ ಸೇತುವೆಯು ಕುಸಿಯುತ್ತಿದೆ ಎಂದು ಹೊಸನಗರ ತಹಶೀಲ್ದಾರ್‌ ಅವರಿಗೆ, ಶಿವಮೊಗ್ಗ ಜಿಲ್ಲಾಧಿಕಾರಿಗಳಿಗೆ ಹಾಗೂ ಶಿವಮೊಗ್ಗ ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳಿಗೆ ಕೃಷಿಕ ರತ್ನಾಕರ್ ಹಾಗೂ ಮಾರಿಗುಡ್ಡದ ಗ್ರಾಮಸ್ಥರು ಲಿಖಿತ ದೂರು ನೀಡಿದ್ದರು. ದೂರಿಗೆ ಸ್ಪಂದಿಸಿದ ಭೂ ವಿಜ್ಞಾನ ಇಲಾಖೆಯ ವಲಯ ಭೂ ವಿಜ್ಞಾನಿ ವಿಂಧ್ಯಾ ಮತ್ತವರ ಅಧಿಕಾರಿಗಳ ತಂಡ ಹೊಸನಗರಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲಿಸಿ ತನಿಖೆ ಮುಗಿಯುವವರೆಗೆ ಯಾವುದೇ ಕಲ್ಲು ಗಣಿಗಾರಿಕೆ ನಡೆಸದಂತೆ ಕಲ್ಲು ಗಣಿಗಾರಿಕೆ ಮಾಲೀಕರಿಗೆ ಮೌಖಿಕವಾಗಿ ಹೇಳಿದ್ದು ನಂತರ ಲಿಖಿತ ನೋಟಿಸ್ ನೀಡುತ್ತೇವೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Viral Video: ಅಮೆರಿಕ ಅಧ್ಯಕ್ಷ ಬೈಡೆನ್​ ಎನ್ನುವ ಬದಲು ಅಧ್ಯಕ್ಷ ಒಬಾಮಾ ಎಂದ ವೈಟ್​ಹೌಸ್​​ ಮಾಧ್ಯಮ ಕಾರ್ಯದರ್ಶಿ

ವಲಯ ಭೂ ವಿಜ್ಞಾನಿ ವಿಂಧ್ಯಾ ಅವರು ಮಾಧ್ಯಮದವರೊಂದಿಗೆ ಮಾತನಾಡಿ, “ಈ ಕಲ್ಲುಗಣಿಗಾರಿಕೆ ನಡೆಸಲು 2018 ರಲ್ಲಿ 25 ವರ್ಷಕ್ಕೆ ನಡೆಸಲು ಅನುಮತಿ ನೀಡಲಾಗಿದೆ ನಾವು ಏಕಾಏಕಿ ನಿಲ್ಲಿಸಲು ಸಾಧ್ಯವಿಲ್ಲ ನೀವು ಹೇಳುವ ಪ್ರಕಾರ ಕಲ್ಲು ಗಣಿಗಾರಿಕೆ ನಡೆಸುವ ಸಂದರ್ಭದಲ್ಲಿ ಬ್ಲಾಸ್ಟ್ ಮಾಡುವ ಬಗ್ಗೆ ಮುಂಜಾಗ್ರತೆ ತೆಗೆದುಕೊಳ್ಳುತ್ತಿಲ್ಲ ಎಂದು ದೂರು ನೀಡಿದ್ದಿರಿ ಬ್ಲಾಸ್ಟ್ ಮಾಡುವಾಗ ಮನೆಗಳಿಗೆ, ತೋಟ, ಗದ್ದೆಗಳಿಗೆ ಹಾನಿಯಾಗುತ್ತಿದೆ ಎಂದು ದೂರು ನೀಡಿರುವುದರಿಂದ ನಿಮಗೆ ಆಗುತ್ತಿರುವ ತೊಂದರೆಯ ಬಗ್ಗೆ ದೂರು ನೀಡಿದ್ದೀರಿ. ಕಲ್ಲು ಗಣಿಗಾರಿಕೆ ಸ್ಥಗಿತ ಮಾಡಲು ದೂರಿನಲ್ಲಿ ತಿಳಿಸಿದ್ದೀರಿ ಶಿವಮೊಗ್ಗ ಜಿಲ್ಲಾಧಿಕಾರಿ ಸಮಿತಿಯ ಮುಂದೆ ದೂರನ್ನು ತರುತ್ತೇವೆ” ಎಂದು ಹೇಳಿದರು.

ಇದನ್ನೂ ಓದಿ: Shivamogga Airport : ಈ ವಿಮಾನ ನಿಲ್ದಾಣ ವಾಣಿಜ್ಯ, ಸಂಪರ್ಕ, ಪ್ರವಾಸೋದ್ಯಮಕ್ಕೆ ಬೂಸ್ಟ್‌ ಎಂದ ಮೋದಿ

“ಕಲ್ಲು ಗಣಿಗಾರಿಕೆಯಿಂದ ಅಗುತ್ತಿರುವ ತೊಂದರೆಗಳ ಬಗ್ಗೆ ವಿವರಿಸುತ್ತೇವೆ ಮುಂದೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆಯುವ ಸಮಿತಿಯು ಕಾರ್ಯನಿರ್ವಹಿಸುತ್ತದೆ. ಕಲ್ಲು ಗಣಿಗಾರಿಕೆಯ ಲೈಸನ್ಸ್ ರದ್ದು ಮಾಡುವ ಅಧಿಕಾರ ನಮಗಿಲ್ಲ” ಎಂದರು.

ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ಮಾನಸಾ, ಕಿರಿಯ ಸಹಾಯಕ ಅಭಿಯಂತರಾದ ಸೌಂದರ್ಯ, ಸಬ್‌ಇನ್ಸ್‌ ಪೆಕ್ಟರ್ ನೀಲಾರಾಜ್ ಗ್ರಾಮ ಲೆಕ್ಕಾಧಿಕಾರಿ ಕೌಶಿಕ್, ಪೊಲೀಸ್ ಸಿಬ್ಬಂದಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ಇದನ್ನೂ ಓದಿ: IND VS AUS: ಮೂರನೇ ಟೆಸ್ಟ್​ ಪಂದ್ಯದಿಂದ ಹೊರಗುಳಿದ ಪ್ಯಾಟ್​ ಕಮಿನ್ಸ್​; ಸ್ಟೀವನ್​ ಸ್ಮಿತ್​ಗೆ​ ನಾಯಕತ್ವ

Exit mobile version