Site icon Vistara News

ಕೋಲಾರದಲ್ಲಿ ಕಲ್ಲು ಕ್ವಾರಿ ಬ್ಲಾಸ್ಟ್‌ ಆಗಿ ಒಬ್ಬ ಮೃತ್ಯು, ಇಬ್ಬರು ಗಂಭೀರ; ಕ್ವಾರಿ ಮಾಲೀಕ ಪರಾರಿ

Stone Quarry

Stone Quarry

ಕೋಲಾರ: ಇಲ್ಲಿನ ಕೆ.ಬಿ.ಹೊಸಹಳ್ಳಿ ಗ್ರಾಮದಲ್ಲಿರುವ ಕಲ್ಲು ಕ್ವಾರಿ ಬ್ಲಾಸ್ಟಿಂಗ್ (Stone Quarry Blass) ವೇಳೆ ಕಾರ್ಮಿಕನೊಬ್ಬ ಮೃತಪಟ್ಟಿರುವ ಘಟನೆ ನಡೆದಿದೆ. ಯಾದಗಿರಿ ಮೂಲದ ಸೋಮಶೇಖರ್ (30) ಮೃತ ದುರ್ದೈವಿ.

ಜೈರಾಮರೆಡ್ಡಿ ಎಂಬುವರಿಗೆ ಸೇರಿದ ಕ್ವಾರಿಯಲ್ಲಿ ಬುಧವಾರ ರಾತ್ರಿ ಬ್ಲಾಸ್ಟಿಂಗ್ ವೇಳೆ ಸೋಮಶೇಖರ್‌ ತೀವ್ರವಾಗಿ ಗಾಯಗೊಂಡಿದ್ದರು. ಕೂಡಲೇ ಆತನನ್ನು ಹೊಸಕೋಟೆಯ ಎಂ.ವಿ.ಜೆ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಕಾರ್ಮಿಕ ಸೋಮಶೇಖರ್‌ ಮೃತಪಟ್ಟಿದ್ದಾರೆ.

ಇನ್ನು ಬಂಡೆ ಸ್ಫೋಟಕದಿಂದ ಇನ್ನೊಬ್ಬರು ಗಂಭೀರ ಗಾಯಗೊಂಡಿದ್ದಾರೆ. ಕ್ವಾರಿಯಲ್ಲಿ ಬಂಡೆ ಸಿಡಿಸಲು ಬಳಸಿದ್ದ ಸ್ಫೋಟಕದಿಂದ ಈ ಅವಘಡ ಸಂಭವಿಸಿದೆ. ಸೋಮಶೇಖರ್ ಮತ್ತು ಇನ್ನೊಬ್ಬ ಟಿಪ್ಪರ್ ಲಾರಿಯಲ್ಲಿ ಕುಳಿತಿದ್ದಾಗ ಬ್ಲಾಸ್ಟ್ ರಭಸಕ್ಕೆ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ. ಮೃತ ಸೋಮಶೇಖರ್ ಪತ್ನಿ ಮತ್ತು ಮೂವರು ಮಕ್ಕಳನ್ನು ಅಗಲಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಇದನ್ನೂ ಓದಿ: Road Accident: ಅಪರಿಚಿತ ವಾಹನ ಡಿಕ್ಕಿಯಾಗಿ ವೃದ್ಧೆ ಸಾವು; ಭೀಕರ ಅಪಘಾತದಲ್ಲಿ ಚಾಲಕ ದುರ್ಮರಣ

ಜಯರಾಮ್ ರೆಡ್ಡಿ ಎಂಬುವವರ ಹೆಸರಿನಲ್ಲಿದ್ದ ಕ್ವಾರಿಯನ್ನು ಅಬ್ದುಲ್ ರೋಷನ್ ಎಂಬಾತನಿಗೆ ಬೋಗ್ಯಕ್ಕೆ ನೀಡಲಾಗಿತ್ತು. ಕ್ವಾರಿಯ ಮೇಲುಸ್ತುವಾರಿಯನ್ನು ಸಂಪತ್ ಕುಮಾರ್ ಎಂಬುವವರು ನಿರ್ವಹಿಸುತ್ತಿದ್ದರು. ಸದ್ಯ ಕ್ವಾರಿ ಮಾಲೀಕ ಪರಾರಿ ಆಗಿದ್ದು, ಮಾಲೀಕರ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ. ವೇಮಗಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪೊಲೀಸ್ ಇಲಾಖೆ ಮತ್ತು ಗಣಿ ಇಲಾಖೆ ಅಧಿಕಾರಿಗಳಿಂದ ತೀವ್ರ ಪರಿಶೀಲನೆ ನಡೆಯುತ್ತಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version