Site icon Vistara News

Stone Quarry | ಬಿಸಲವಾಡಿಯಲ್ಲಿ ಕಲ್ಲು ಕ್ವಾರಿ ಕುಸಿದು ಸ್ಥಳದಲ್ಲೆ ಇಬ್ಬರ ಸಾವು; ಮತ್ತೊಬ್ಬ ಗಂಭೀರ

Stone Quarry

Stone Quarry

ಚಾಮರಾಜನಗರ: ಇಲ್ಲಿನ ಬಿಸಲವಾಡಿಯಲ್ಲಿ ಕಲ್ಲು ಕ್ವಾರಿ (Stone Quarry) ಕುಸಿದು ಇಬ್ಬರು ಸ್ಥಳದಲ್ಲೆ ಮೃತಪಟ್ಟಿರುವ ಘಟನೆ ನಡೆದಿದೆ. ಮತ್ತೊಬ್ಬ ಕಾರ್ಮಿಕನಿಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ಸೇರಿಸಲಾಗಿದೆ. ಕುಮಾರ್ ಹಾಗೂ ಶಿವರಾಜು ಮೃತ ದುರ್ದೈವಿಗಳು.

ಇವರೆಲ್ಲರೂ ಕಾಗಲವಾಡಿ‌ಯ ಮೊಳೆ ಗ್ರಾಮದವರಾಗಿದ್ದು, ಕ್ವಾರಿಗೆ ಕುಳಿ ಹೊಡೆಯಬೇಕಾದರೆ ಈ ದುರ್ಘಟನೆ ನಡೆದಿದೆ. ಕುಳಿ ಹೊಡೆಯುವ ವೇಳೆ ಬಂಡೆ ಕಲ್ಲುಗಳು ಮೇಲಿನಿಂದ ಬಿದ್ದಿವೆ. ಕಲ್ಲುಗಳು ಬಿದ್ದ ರಭಸಕ್ಕೆ ಅಡಿಯಲ್ಲಿ ಸಿಲುಕಿದ ಕುಮಾರ್‌ ಹಾಗೂ ಶಿವರಾಜು ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಸಿದ್ದರಾಜು ಎಂಬಾತ ಗಂಭೀರವಾಗಿ ಗಾಯಗೊಂಡಿದ್ದಾನೆ.

ಯಾವುದೇ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದಿರುವುದೇ ಈ ಅವಘಡಕ್ಕೆ ಕಾರಣ ಎಂದು ಮೇಲ್ನೋಟಕ್ಕೆ ತಿಳಿದು ಬಂದಿದೆ. ಸ್ಥಳಕ್ಕೆ ಗ್ರಾಮಾಂತರ ಪೊಲೀಸರ ಭೇಟಿ ನೀಡಿದ್ದು, ಮೃತದೇಹಗಳನ್ನು ಹೊರತೆಗೆಯಲು ಹರಸಾಹಸ ಪಡಬೇಕಾಯಿತು. ಕಳೆದ ಮಾರ್ಚ್ 4ರಂದು ಗಣಿ ಕ್ವಾರಿಯಲ್ಲಿ ಸಿಲುಕಿ ಮೂವರು ಕಾರ್ಮಿಕರು ಮೃತಪಟ್ಟಿದ್ದರು.

ಇದನ್ನೂ ಓದಿ | Viral video | ಲಂಡನ್‌ ವ್ಯಕ್ತಿಯ ಭಾರತೀಯ ಅಡುಗೆ ಸರಣಿ, ಮನಗೆದ್ದ ರವೆ ಇಡ್ಲಿ ಸಾಂಬಾರ್!

Exit mobile version