Site icon Vistara News

ICC World Cup 2023: ಭಾರತ ತಂಡ ಸೋತ ಹಿನ್ನೆಲೆ ಸರ್ಕಾರದ ಎಲ್‌ಇಡಿ ಪರದೆಗೆ ಕಲ್ಲೆಸೆತ

LED screen

ವಿಜಯನಗರ: ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡ ಸೋತ ಹಿನ್ನೆಲೆಯಲ್ಲಿ ಕೋಟ್ಯಂತರ ಭಾರತೀಯ ಅಭಿಮಾನಿಗಳು ದುಃಖದಲ್ಲಿದ್ದಾರೆ. ಈ ನಡುವೆ ಹೊಸಪೇಟೆಯಲ್ಲಿ ಮ್ಯಾಚ್‌ ವೀಕ್ಷಿಸಲು ರಾಜ್ಯ ಸರ್ಕಾರದಿಂದ ವ್ಯವಸ್ಥೆ ಮಾಡಿದ್ದ ಬೃಹತ್‌ ಎಲ್‌ಇಡಿ ಪರದೆಗೆ ಕಲ್ಲೆಸೆದಿರುವುದು ಕಂಡುಬಂದಿದೆ.

ಹೊಸಪೇಟೆ ಜಿಲ್ಲಾ ಕ್ರೀಡಾಂಗಣದಲ್ಲಿ ಘಟನೆ ನಡೆದಿದೆ. ರೋಹಿತ್‌ ಶರ್ಮಾ ಬಳಗದ ಸೋಲನ್ನು ಸಹಿಸಿಕೊಳ್ಳದ ಕೆಲವರು ಪಂದ್ಯದ ಕೊನೆಯ ಓವರ್ ವೇಳೆ ಎಲ್‌ಇಡಿ ಪರದೆಗೆ ಕಲ್ಲು ಎಸೆದಿದ್ದಾರೆ. ಸಾರ್ವಜನಿಕರು ವಿಶ್ವಕಪ್ ಫೈನಲ್ ಮ್ಯಾಚ್ ನೋಡಲೆಂದು ಕ್ರೀಡಾ ಇಲಾಖೆಯಿಂದ ರಾಜ್ಯದ ಎಲ್ಲಾ ಜಿಲ್ಲಾ ಕ್ರೀಡಾಂಗಣದಲ್ಲಿ ಎಲ್‌ಇಡಿ ಪರದೆ ವ್ಯವಸ್ಥೆ ಮಾಡಲಾಗಿತ್ತು.

ದುಃಖದಲ್ಲಿರುವ ನಮ್ಮ ತಂಡದ ಜೊತೆ ನಿಲ್ಲೋಣ ಎಂದ ಸಿದ್ದರಾಮಯ್ಯ

ಫೈನಲ್‌ ಪಂದ್ಯದ ಬಗ್ಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿ, ವಿಶ್ವಕಪ್ ವಿಜೇತ ಆಸ್ಟ್ರೇಲಿಯಾ ತಂಡಕ್ಕೆ ಅಭಿನಂದನೆಗಳು. ಇಡೀ ಪಂದ್ಯಾವಳಿಯಲ್ಲಿ ಭಾರತ ತೋರಿದ ಸಂಘಟಿತ ಪ್ರದರ್ಶನ, ಫೈನಲ್ ಪಂದ್ಯದವರೆಗಿನ ಅಜೇಯ ಅಭಿಯಾನ ಬಹುಕಾಲ ನೆನಪಿನಲ್ಲಿ ಉಳಿಯಲಿದೆ. ಸೋಲು – ಗೆಲುವು ಆಟದ ಅವಿಭಾಜ್ಯ ಅಂಗ. ಸೋಲಿನ ದುಃಖದಲ್ಲಿರುವ ನಮ್ಮ ತಂಡದ ಜೊತೆ ನಿಲ್ಲೋಣ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ | ‘ಕಪ್​ ಗೆಲ್ಲದಿದ್ದರೂ ಹೃದಯ ಗೆದ್ದಿದ್ದೀರಿ’; ಭಾರತ ತಂಡವನ್ನು ಸಂತೈಸಿದ ಮೋದಿ

Exit mobile version