Site icon Vistara News

Story Competition | ಉತ್ಥಾನ ವಾರ್ಷಿಕ ಕಥಾ ಸ್ಪರ್ಧೆಗೆ ಆಹ್ವಾನ; ಪ್ರಥಮ ಬಹುಮಾನ ₹15 ಸಾವಿರ

ಅರ್ಜಿ ಆಹ್ವಾನ

ಬೆಂಗಳೂರು: ಉತ್ಥಾನ ಮಾಸಪತ್ರಿಕೆಯು ರಾಜ್ಯ ಮಟ್ಟದ ವಾರ್ಷಿಕ ಕಥಾ ಸ್ಪರ್ಧೆಯನ್ನು (Story Competition) ಆಯೋಜಿಸಿದೆ. ಉತ್ಥಾನ ಮಾಸಪತ್ರಿಕೆಯು ಕಳೆದ 4 ದಶಕಗಳಿಂದ ರಾಜ್ಯ ಮಟ್ಟದ ವಾರ್ಷಿಕ ಕಥಾ ಸ್ಪರ್ಧೆಯನ್ನು ಆಯೋಜಿಸುತ್ತಾ ಬಂದಿದೆ.

ಕಥಾ ಸ್ಪರ್ಧೆಯ ವಿಜೇತರಿಗೆ ನಗದು ಬಹುಮಾನ ಇರಲಿದ್ದು, ಮೊದಲನೆಯ ಬಹುಮಾನ 15,000 ರೂ., ಎರಡನೇ ಬಹುಮಾನ 12,000 ರೂ., ಮೂರನೇ ಬಹುಮಾನ 10,000 ರೂ. ಜತೆಗೆ ಐದು ಮೆಚ್ಚುಗೆಯ ಬಹುಮಾನಕ್ಕೆ ತಲಾ 2000 ರೂ. ನೀಡಲಾಗುತ್ತಿದೆ.

ಸ್ಪರ್ಧೆಗೆ ನಿಯಮಗಳೇನು?

ಕಥೆಯು 3,000 ಪದಗಳ ಮಿತಿಯಲ್ಲಿ ಇರಬೇಕು. ಕಥೆಗಳು ಸ್ವತಂತ್ರವಾಗಿರಬೇಕು, ಭಾಷಾಂತರವಾಗಲಿ, ಅನುಕರಣೆಯಾಗಲಿ ಆಗಿರಕೂಡದು. ಎಲ್ಲೂ ಸ್ವೀಕೃತವಾಗಿರಬಾರದು, ಜತೆಗೆ ಪರಿಶೀಲನೆಗಾಗಿಯೂ ಯಾವುದೇ ಅನ್ಯ ಪತ್ರಿಕೆ, ಸಂಸ್ಥೆಗೆ ಕಳುಹಿಸಿರಬಾರದು. ಸಾಮಾಜಿಕ ಜಾಲತಾಣಗಳಲ್ಲೂ ಪ್ರಕಟವಾಗಿರಬಾರದು. ಒಬ್ಬರು ಒಂದು ಕಥೆಯನ್ನು ಮಾತ್ರ ಕಳುಹಿಸಬಹುದಾಗಿದೆ.

ಬಹುಮಾನಿತ ಕಥೆ ‘ಉತ್ಥಾನ’ದಲ್ಲಿ ಪ್ರಕಟವಾಗುವವರೆಗೂ ಬೇರೆ ಎಲ್ಲೂ ಗ್ರಂಥರೂಪದಲ್ಲಾಗಲಿ, ಸಾಮಾಜಿಕ ಜಾಲತಾಣಗಳಲ್ಲಾಗಲಿ, ಪತ್ರಿಕೆ, ಆಕಾಶವಾಣಿ ಅಥವಾ ದೂರದರ್ಶನದಲ್ಲಾಗಲಿ ಪ್ರಕಟಣೆಗೆ, ಪ್ರಸಾರಕ್ಕೆ ಅವಕಾಶವಿಲ್ಲ. ಕಾಗದದ ಒಂದೇ ಮಗ್ಗುಲಲ್ಲಿ ಸ್ಫುಟವಾಗಿ ಬರೆದಿರಬೇಕು ಅಥವಾ ವಿರಳವಾಗಿ ಬೆರಳಚ್ಚು ಮಾಡಿರಬೇಕು. ಕಾರ್ಬನ್/ಜೆರಾಕ್ಸ್ ಪ್ರತಿಗಳನ್ನು ಪರಿಶೀಲಿಸಲಾಗುವುದಿಲ್ಲ.

ಕಥೆಯನ್ನು ನುಡಿ, ಬರಹ ಅಥವಾ ಯೂನಿಕೋಡ್ ತಂತ್ರಾಂಶದಲ್ಲಿ ಸಿದ್ಧಪಡಿಸಿ (ವರ್ಡ್ ಮತ್ತು ಪಿಡಿಎಫ್ 2 ರೂಪದಲ್ಲಿ) ಇ-ಮೇಲ್ ಮೂಲಕವೂ ಕಳುಹಿಸಬಹುದು. ಇ-ಮೇಲ್ ವಿಳಾಸ: utthanakathaspardhe@gmail.com

ಹಸ್ತಪ್ರತಿಯನ್ನು ಹಿಂದಕ್ಕೆ ಕಳುಹಿಸುವುದಿಲ್ಲ. ಆದ್ದರಿಂದ ಲೇಖಕರು ಮೂಲಕಥೆಯ ಇನ್ನೊಂದು ಪ್ರತಿಯನ್ನು ತಮ್ಮ ಬಳಿ ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು. ಲೇಖಕರು ತಮ್ಮ ಹೆಸರು, ವಿಳಾಸ, ಕಿರುಪರಿಚಯ ಮುಂತಾದ ವಿವರಗಳನ್ನು ಕಥೆಯ ಜತೆಯಲ್ಲಿ ಬರೆಯದೆ, ಪ್ರತ್ಯೇಕ ಪುಟದಲ್ಲಿ ಬರೆದು ಕಳುಹಿಸಬೇಕು. ಜತೆಗೆ ಲೇಖಕರ ಭಾವಚಿತ್ರವೂ ಇರಬೇಕು.

ಬಹುಮಾನಿತ ಕಥೆಗಳನ್ನು ಯಾವುದೇ ರೂಪದಲ್ಲಿ, ಯಾವಾಗ ಬೇಕಾದರೂ ಬಳಸುವ ಸಂಪೂರ್ಣ ಹಕ್ಕು ಉತ್ಥಾನ ಮಾಸಪತ್ರಿಕೆಗೆ ಇರಲಿದೆ. ತೀರ್ಪುಗಾರರ ನಿರ್ಣಯದ ನಂತರ ಫಲಿತಾಂಶವನ್ನು ಉತ್ಥಾನದಲ್ಲಿ ಪ್ರಕಟಿಸಲಾಗುತ್ತದೆ.

ಕಥೆಗಳು ತಲುಪಲು ಕೊನೆಯ ದಿನಾಂಕ: ಅಕ್ಟೋಬರ್ 10, 2022
ವಿಳಾಸ: ಸಂಪಾದಕರು, ಉತ್ಥಾನ ವಾರ್ಷಿಕ ಕಥಾ ಸ್ಪರ್ಧೆ 2022, ಕೇಶವ ಶಿಲ್ಪ, ಕೆಂಪೇಗೌಡನಗರ, ಬೆಂಗಳೂರು 560004 ದೂರವಾಣಿ: 080- 26604673 ಹಾಗೂ 7795441894
utthanakathaspardhe@gmail.com

ಇದನ್ನೂ ಓದಿ | Puneeth Satellite | ನಭಕ್ಕೆ ನೆಗೆಯಲಿರುವ ಪುನೀತ್ ಉಪಗ್ರಹ; ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆ

Exit mobile version