Site icon Vistara News

Free Bus Service : ಗಂಗಾವತಿಯಲ್ಲಿ ಶಕ್ತಿ ಯೋಜನೆ ವಿರೋಧಿಸಿ ವಿದ್ಯಾರ್ಥಿಗಳಿಂದ ಪ್ರತಿಭಟನೆ

Protest by Shakti Yojana students in Gangavati

ಗಂಗಾವತಿ: ರಾಜ್ಯ ಸರ್ಕಾರ ಜಾರಿಗೆ ತಂದಿರುವ ಮಹಿಳೆಯರ ಉಚಿತ ಪ್ರಯಾಣದ (Free Bus Service) ಶಕ್ತಿ (Shakti scheme) ಯೋಜನೆಯನ್ನು ವಿರೋಧಿಸಿ ನಗರದಲ್ಲಿ ಬುಧವಾರ ಎಬಿವಿಪಿ ನೇತೃತ್ವದಲ್ಲಿ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

ಗ್ರಾಮೀಣ ಭಾಗದ ಶಾಲಾ-ಕಾಲೇಜಿನ ಮಕ್ಕಳು ನಿತ್ಯ ನಗರಕ್ಕೆ ಆಗಮಿಸುತ್ತಿದ್ದು, ಸಕಾಲಕ್ಕೆ ಬರಲಾಗದೆ ತೀವ್ರ ಸಮಸ್ಯೆಯಾಗಿದೆ ಎಂದು ಆರೋಪಿಸಿದರು.

ಇಲ್ಲಿನ ಕೇಂದ್ರ ಬಸ್ ನಿಲ್ದಾಣದ ಮುಂದಿರುವ ಶ್ರೀಕೃಷ್ಣದೇವರಾಯ ವೃತ್ತದಲ್ಲಿ ಸೇರಿದ್ದ ನಗರದ ಸುಮಾರು 20ಕ್ಕೂ ಹೆಚ್ಚು ಶಾಲಾ-ಕಾಲೇಜಿನ ವಿದ್ಯಾರ್ಥಿಗಳು ಕೆಲಕಾಲ ರಸ್ತೆ ತಡೆ ನಡೆಸಿದರು. ಪರಿಣಾಮ ವಾಹನಗಳ ಸಂಚಾರಕ್ಕೆ ಕೆಲಕಾಲ ಸಮಸ್ಯೆ ಉಂಟಾಯಿತು.

ಇದನ್ನೂ ಓದಿ: Stock Market : ಮೊಟ್ಟ ಮೊದಲ ಬಾರಿಗೆ ಸೆನ್ಸೆಕ್ಸ್‌ 64,000, ನಿಫ್ಟಿ 19,000ಕ್ಕೆ ಜಿಗಿತ

ಕಂಪ್ಲಿ, ಬೂದಗುಂಪಾ, ಆನೆಗೊಂದಿ, ಕನಕಗಿರಿ, ಕಾರಟಗಿ ಭಾಗದಿಂದ ನಿತ್ಯ ನೂರಾರು ಮಕ್ಕಳು ಶಾಲಾ-ಕಾಲೇಜಿಗೆ ಗಂಗಾವತಿಗೆ ಬರುತ್ತಿದ್ದಾರೆ. ಆದರೆ ಸಾರಿಗೆ ಬಸ್‌ಗಳ ಸಮಸ್ಯೆಯಿಂದಾಗಿ ಸಕಾಲಕ್ಕೆ ಶಾಲಾ-ಕಾಲೇಜಿಗೆ ಹೋಗಲಾಗುತ್ತಿಲ್ಲ

ಇದರಿಂದ ಶೈಕ್ಷಣಿಕವಾಗಿ ನಮಗೆ ಸಮಸ್ಯೆಯಾಗುತ್ತಿದೆ. ಈ ಬಗ್ಗೆ ಸಂಬಂಧಿತರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಹೀಗಾಗಿ ಈ ಕೂಡಲೆ ಕಾರಟಗಿ ಭಾಗಕ್ಕೆ ಎರಡು ಮತ್ತು ಉದ್ದೇಶಿತ ಮಾರ್ಗದಲ್ಲಿ ತಲಾ ಒಂದು ಹೆಚ್ಚುವರಿ ವಾಹನಗಳನ್ನು ಓಡಿಸುವಂತೆ ಧರಣಿ ನಿರತ ವಿದ್ಯಾರ್ಥಿಗಳು ಒತ್ತಾಯಿಸಿದರು.

ಇದನ್ನೂ ಓದಿ: ಮೋದಿ ಸ್ಟೇಡಿಯಂನಲ್ಲಿ ಇಂಡೋ-ಪಾಕ್ ವಿಶ್ವ ಕಪ್​​ ಕದನ; ಹೋಟೆಲ್​ ದರ ಗಗನಕ್ಕೆ

ಪ್ರತಿಭಟನೆಯಲ್ಲಿ ಎಬಿವಿಪಿ ಮುಖಂಡರಾದ ಅಭಿಷೇಕ್ ಹಿರೇಮಠ್, ಅಮಿತ್ ಹಿರೇಮಠ್, ಮದನ್ ಈಡಿಗರ್, ಕಿರಣ್, ಗೌತಮ್, ಕನಕ, ಗಣೇಶ್ ಸೇರಿದಂತೆ ಕಾರ್ಯಕರ್ತರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Exit mobile version