Site icon Vistara News

Students Protest: ಉಪವಾಸ ಸತ್ಯಾಗ್ರಹಕ್ಕೆ ಮುಂದಾಗಿದ್ದ ಅಜೀಂ ಪ್ರೇಮ್‌ಜಿ ವಿವಿ ವಿದ್ಯಾರ್ಥಿ ಸಾವು; ಸೂಕ್ತ ಕ್ರಮಕ್ಕೆ ಎಸ್ಎಫ್ಐ ಆಗ್ರಹ

Azim Premji University student dies while on hunger strike, SFI demands appropriate action

Azim Premji University student dies while on hunger strike, SFI demands appropriate action

ಬೆಂಗಳೂರು: ಕಳೆದ 12 ದಿನಗಳಿಂದ ಅಜೀಂ ಪ್ರೇಮ್‌ ಜಿ ಯೂನಿವರ್ಸಿಟಿ ವಿದ್ಯಾರ್ಥಿಗಳು ಪ್ರತಿಭಟನೆ (Students Protest) ನಡೆಸುತ್ತಿದ್ದು, ಉಪವಾಸ ಸತ್ಯಾಗ್ರಹದಲ್ಲಿ ನಿರತರಾಗಿದ್ದ ವಿದ್ಯಾರ್ಥಿ ಅಭಿಷೇಕ್ ಎಂಬಾತ ಮೃತಪಟ್ಟಿರುವ ಘಟನೆ ನಡೆದಿದೆ.

ಅಜೀಂ ಪ್ರೇಮ್ ಜಿ ಯೂನಿವರ್ಸಿಟಿ ಆಡಳಿತ ಮಂಡಳಿ ವಿರುದ್ಧ ವಿವಿಧ ಬೇಡಿಕೆ ಈಡೇರಿಕೆಗಾಗಿ ಕಳೆದ 12 ದಿನಗಳಿಂದ ಕ್ಯಾಂಪಸ್ ಒಳಗೆ ವಿದ್ಯಾರ್ಥಿಗಳು ಹೋರಾಟ ಮಾಡುತ್ತಿದ್ದಾರೆ. ಆಡಳಿತ ಮಂಡಳಿ ಸೂಕ್ತವಾಗಿ ಸ್ಪಂದಿಸದ ಕಾರಣ ವಿದ್ಯಾರ್ಥಿ ಹೋರಾಟ ಸಮಿತಿ ಕಳೆದ ಮೂರು ದಿನಗಳಿಂದ ಉಪವಾಸ ಸತ್ಯಾಗ್ರಹ ಹೋರಾಟವನ್ನು ಮುಂದುವರೆಸಿದ್ದರು.

ಮೃತಪಟ್ಟ ಅಭಿಷೇಕ್‌

ಆದರೆ ಈ ಉಪವಾಸ ಸತ್ಯಾಗ್ರಹದಲ್ಲಿ ಹೋರಾಟ ನಿರತ ವಿದ್ಯಾರ್ಥಿ ಅಭಿಷೇಕ್ ಶುಕ್ರವಾರ ಪ್ರಜ್ಞೆ ತಪ್ಪಿ ಕುಸಿತು ಬಿದ್ದಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಪ್ರಥಮ ವರ್ಷದ ಎಂಎ ಡೆವಲಪ್ಮೆಂಟ್ ವಿಭಾಗದ ವಿದ್ಯಾರ್ಥಿ ಅಭಿಷೇಕ್ ಸಾವಿಗೆ ಅಜೀಮ್ ಪ್ರೇಮ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ವಿರೋಧಿ ನೀತಿ ಮತ್ತು ಅಸಡ್ಯತೆಯ ನೇರ ಕಾರಣ ಎಂದು ಸ್ಟೂಡೆಂಟ್ಸ್ ಫೆಡರೇಷನ್ ಆಫ್ ಇಂಡಿಯಾ (ಎಸ್ಎಫ್ಐ) ಆಕ್ರೋಶ ಹೊರಹಾಕಿದೆ.

ಪ್ರಯಾಣ ಶುಲ್ಕ ಕಡಿತಕ್ಕೆ ಆಗ್ರಹ

ಅಜೀಂ ಪ್ರೇಮ್ ಜಿ ವಿಶ್ವವಿದ್ಯಾಲಯ ಕ್ಯಾಂಪಸ್‌ನಲ್ಲಿ ದಾಖಲಾತಿ ಪಡೆದಿರುವ ವಿದ್ಯಾರ್ಥಿಗಳಿಗೆ ನೀಡಿರುವ ಹಾಸ್ಟೆಲ್ ಕ್ಯಾಂಪಸ್‌ನಿಂದ ದೂರದಲ್ಲಿದೆ. ಇತ್ತ ವಿವಿಯು ಕಳೆದ ವರ್ಷದ ಶುಲ್ಕ ಸೇರಿ ಎರಡು ವರ್ಷಗಳ ಪ್ರಯಾಣ ಶುಲ್ಕಕ್ಕೆ ಒಟ್ಟು 17,000 ರೂ. ಕಟ್ಟಲು ಪ್ರತಿಯೊಬ್ಬ ವಿದ್ಯಾರ್ಥಿಗೆ ಇಮೇಲ್ ಕಳಿಸಿದೆ.

ಇದರಿಂದ ಆತಂಕಕ್ಕೊಳಗಾದ ವಿದ್ಯಾರ್ಥಿಗಳು ಈ ರೀತಿಯ ಪ್ರಯಾಣ ಶುಲ್ಕ ಕಟ್ಟಬೇಕೆಂದು ದಾಖಲಾತಿ ಸಮಯದಲ್ಲಿ ತಿಳಿಸಿರಲಿಲ್ಲ ಹಾಗೂ ಇದೇ ಮೊದಲ ಸಲ ಏಕಾಏಕಿ ಪ್ರಯಾಣ ಶುಲ್ಕದ ಹೆಸರಿನಲ್ಲಿ ವಸೂಲಿ ಮಾಡಬೇಕೆಂದು ಇಮೇಲ್ ಕಳುಹಿಸಿರುವ ಆದೇಶವನ್ನು ವಾಪಸ್ ಪಡೆದುಕೊಳ್ಳಬೇಕೆಂದು ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.

ವಿದ್ಯಾರ್ಥಿಗಳ ಪ್ರತಿಭಟನೆ

ಇತ್ತ ಮನವಿ ಸ್ವೀಕರಿಸಿದ ಕಾಲೇಜು ಆಡಳಿತ ಮಂಡಳಿ ಬೇಡಿಕೆ ಈಡೇರಿಸುವ ಬದಲು ಹೋರಾಟ ನಿರತ ವಿದ್ಯಾರ್ಥಿಗಳ ಮೇಲೆ ಕ್ರಮ ಕೈಗೊಳ್ಳುವುದಾಗಿ ವಿವಿಯ ಕಲುಪತಿ ಇಮೇಲ್ ಕಳುಹಿಸಿ ಬೆದರಿಸುವ ತಂತ್ರ ಅನುಸರಿಸಿದ್ದಾರೆ. ಇದರಿಂದ ಸಿಟ್ಟಿಗೆದ್ದ ವಿದ್ಯಾರ್ಥಿಗಳು ಪ್ರತಿಭಟನೆಯ ದಾರಿಯನ್ನು ಹಿಡಿದಿದ್ದರು. ಈ ಹೋರಾಟಕ್ಕೆ ಜಗ್ಗದೆ ಇದ್ದಾಗ, ಕಳೆದ ಮೂರು ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸಿದ್ದರು. ಆದರೆ ಫೆ.24ರಂದು ಅಸ್ವಸ್ತರಾಗಿ ವಿದ್ಯಾರ್ಥಿ ಅಭಿಷೇಕ್‌ ಮೃತಪಟ್ಟಿದ್ದಾರೆ.

ಇದನ್ನೂ ಓದಿ:Actor Mohanlal: ಮೋಹನ್‌ ಲಾಲ್‌ ಹೊಸ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳಲಿದ್ದಾರಾ ಅರ್ಜುನ್‌ ಸರ್ಜಾ?

ಈ ಘಟನೆ ಸಂಬಂಧ ಸರ್ಕಾರ ಸಮಗ್ರ ತನಿಖೆಯನ್ನು ನಡೆಸಿ ಅಜೀಂ ಪ್ರೇಮ್ ಜಿ ಯೂನಿವರ್ಸಿಟಿಯ ಆಡಳಿತ ಮಂಡಳಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ವಿದ್ಯಾರ್ಥಿ ಸಂಘಟನೆಗಳು ಆಗ್ರಹಿಸಿವೆ.

ಕರ್ನಾಟಕದ ಇತರೆ ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version