Site icon Vistara News

Kichcha Sudeep: ನಿಮ್ಗೆ ದರ್ಶನ್‌, ಯಶ್‌ ಮಾತ್ರ ಕಾಣೋದಾ? ಧ್ರುವ ಪರ ನಿಂತ ಸುದೀಪ್‌!

sudeep and darshan

ಬೆಂಗಳೂರು: ನಟ ದರ್ಶನ್ ಹಾಗೂ ಸುದೀಪ್ ಇಬ್ಬರ ನಡುವೆ ಮನಸ್ತಾಪ ಇರುವುದು ಎಲ್ಲರಿಗೂ ತಿಳಿದಿರುವ ವಿಷಯ. ಆದರೆ, ಈ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಇಬ್ಬರು ಸ್ಟಾರ್‌ ನಟರ ಮಧ್ಯೆ ಎಲ್ಲವೂ ಸರಿಯಿಲ್ಲ ಎಂಬುವುದು ಮತ್ತೊಮ್ಮೆ ಬಹಿರಂಗವಾಗಿದ್ದು, ಇದಕ್ಕೆ ಕಾರಣ ಕಿಚ್ಚ ಸುದೀಪ್‌ ಅವರು ನೀಡಿರುವ ಹೇಳಿಕೆ.

ಹೌದು, ಕೆಸಿಸಿ ಕ್ರಿಕೆಟ್‌ ಕಪ್‌ ಕುರಿತ ಸುದ್ದಿಗೋಷ್ಠಿಯಲ್ಲಿ ನಟ ಕಿಚ್ಚ ಸುದೀಪ್‌ ಅವರು ಆಡಿರುವ ಮಾತುಗಳು ಕುತೂಹಲಕ್ಕೆ ಕಾರಣವಾಗಿದೆ. ಇತ್ತೀಚೆಗೆ ಕಾವೇರಿ ನೀರಿಗಾಗಿ ನಡೆದ ಪ್ರತಿಭಟನೆ ವೇಳೆ ದರ್ಶನ್‌ ಮತ್ತು ಧ್ರುವ ಸರ್ಜಾ ಪರಸ್ಪರ ಮಾತನಾಡದ ವಿಚಾರ ಚರ್ಚೆಗೆ ಗ್ರಾಸವಾಗಿತ್ತು. ನಂತರ ದರ್ಶನ್‌ ಜತೆ ಮನಸ್ತಾಪ ಇರುವುದು ನಿಜ ಎಂದು ಧ್ರುವ ಹೇಳಿದ್ದರು. ಹೀಗಾಗಿ ಧ್ರುವ ಸರ್ಜಾರನ್ನು ಸಾಮಾಜಿಕ ಜಾಲತಾಣಗಳಲ್ಲಿ ದರ್ಶನ್‌ ಅಭಿಮಾನಿಗಳು ಟ್ರೋಲ್‌ ಮಾಡಿದ್ದರು.

ಇದನ್ನೂ ಓದಿ | ಸ್ಪೆಷಲ್​ ಆಗಿರಲಿದೆ ಈ ಬಾರಿಯ ಕೆಸಿಸಿ ಸೀಸನ್ 4; ಮಾಹಿತಿ ನೀಡಿದ ಕಿಚ್ಚ ಸುದೀಪ್​

ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ವರದಿಗಾರರೊಬ್ಬರು ಕೆಸಿಸಿ ಪಂದ್ಯಗಳಿಗೆ ದರ್ಶನ್, ಯಶ್, ರಿಷಬ್‌ ಶೆಟ್ಟಿ, ರಕ್ಷಿತ್‌ ಶೆಟ್ಟಿ, ರಾಜ್‌ ಬಿ ಶೆಟ್ಟಿ ಅವರನ್ನು ಕರೆದಿದ್ದೀರಾ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಕಿಚ್ಚ ಸುದೀಪ್‌ ಅವರು, ದರ್ಶನ್ ಹಾಗೂ ಯಶ್ ಇಬ್ಬರಿಗೂ ಆಹ್ವಾನ ಕೊಟ್ಟಿದ್ದೇವೆ. ನಾವು ಯಾರನ್ನೂ ಆಡಬೇಡಿ ಅಂತ ಹೇಳುತ್ತಿಲ್ಲ. ಕೆಲವರು ಆಡಲು ಇಷ್ಟವಿಲ್ಲ ಬಂದು ಹೋಗುತ್ತೇವೆ ಎನ್ನುತ್ತಾರೆ.

ಇಷ್ಟಕ್ಕೂ “ಧ್ರುವ ಅವರನ್ನು ಯಾಕೆ ಕೇಳಲಿಲ್ಲ ನೀವು. ಅವರು ಆರ್ಟಿಸ್ಟ್ ಅಲ್ಲವೇ? ನಿಮ್ಮ ಕಣ್ಣಿಗೆ ಅವರು ಕಾಣಿಸಲೇ ಇಲ್ವಾ? ನಿಮಗೆ ರಕ್ಷಿತ್, ರಾಜ್, ರಿಷಬ್, ದರ್ಶನ್, ಯಶ್ ಕಾಣಿಸಿದರು, ಆದರೆ, ಧ್ರುವ ಯಾಕೆ ಕಾಣಿಸಲಿಲ್ಲ. ಇದು ವಿವಾದವಾಗಲ್ಲವೇ? ನಾವು ಏನು ನೋಡುತ್ತೇವೆಯೋ ಅದು ಮಾತ್ರ ಕಣ್ಣಿಗೆ ಕಾಣಿಸುತ್ತೆ. ಅದು ಬಿಟ್ಟು ಕೆಲವು ಸತ್ಯಗಳು ಇರುತ್ತವೆ. ಧ್ರುವ ಅವರು ಲಾಸ್ಟ್ ಟೈಮ್ ಇದ್ದರು. ಅವರೇ ಫೋನ್ ಮಾಡಿ ಪ್ರೇಮ್ ಜತೆ ಕೆಡಿ ಸಿನಿಮಾ ಮಾಡುತ್ತಿದ್ದೇನೆ. ಕ್ರಿಕೆಟ್‌ಗೆ ಎಲ್ಲಿಂದ ಬರಲಿ ಅಂತ ಕೇಳಿದ್ದರು. ಅವರು ಮ್ಯಾಚ್‌ಗೆ ಬಂದು ಹೋಗ್ತಾರೆ. ಎಲ್ಲರಿಗೂ ಕರೆದಿದ್ದೇವೆ. ಈ ಮುಖದಲ್ಲಿ ದ್ವೇಷ ಕಾಣುತ್ತಾ ಸರ್.” ಎಂದು ವರದಿಗಾರರನ್ನು ಕಿಚ್ಚ ಸುದೀಪ್ ಕೇಳಿದ್ದಾರೆ.

ಕನ್ನಡ ಚಿತ್ರರಂಗದ ಎಲ್ಲರನ್ನೂ ಕೂಡ ಕರೆಯುತ್ತೇವೆ. ಆದರೆ ಕೆಲವರು ನನಗೆ ಆಡಲು ಇಷ್ಟವಿಲ್ಲ, ಆದರೆ ಬಂದು ಹೋಗ್ತೀವಿ ಅಂತಾರೆ. ಕೆಸಿಸಿ ಬಲವಂತ ಅಲ್ಲ, ಕೆಸಿಸಿ ಗೋಡೆ ಅಲ್ಲ, ಕೆಸಿಸಿ ಗೇಟು ಅಲ್ಲ, ಕೆಸಿಸಿ ಕಾರ್ಪೇಟು ಅಲ್ಲ. ಎಲ್ಲದ್ದಕ್ಕಿಂತ ಹೆಚ್ಚಾಗಿ ಕೆಸಿಸಿ ಹಾಸಿಗೆ ಅಲ್ಲವೇ ಅಲ್ಲ. ಕೆಸಿಸಿ ಒಂದು ಗೌರವ ಅಷ್ಟೇ… ಎಂದು ಸುದೀಪ್ ಹೇಳಿದ್ದಾರೆ.

ಡಿ. 23ರಿಂದ 25ರವರೆಗೆ ಕೆಸಿಸಿ ಕಪ್‌-4

ಬೆಂಗಳೂರು: ಚಿತ್ರರಂಗದ ಗಣ್ಯರ ಕ್ರಿಕೆಟ್‌ ಪಂದ್ಯಾಟ ಸರಣಿ ಕೆಸಿಸಿ ಕಪ್‌ ಸೀಸನ್‌ 4ರ (KCC 4- Kannada Chalanachitra Cup) ಪಂದ್ಯಾವಳಿಗಳು ಡಿಸೆಂಬರ್ 23,24, 25 ರಂದು ನಡೆಯಲಿದೆ. ಇದರ ಭಾಗವಾಗಿ ಬುಧವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಕಿಚ್ಚ ಸುದೀಪ್​ ಅವರು ಟೂರ್ನಿಯ ವಿಶೇಷತೆಗಳನ್ನು ಪ್ರಕಟಿಸಿದ್ದಾರೆ.

ಇದನ್ನೂ ಓದಿ | Kannada New Movie: ʻಓ ನನ್ನ ಚೇತನʼ ಟ್ರೈಲರ್‌ ವೇಳೆ ʻಶಾಂತಿ ಕ್ರಾಂತಿ’ ನೆನೆದ ರವಿಮಾಮ

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಿಚ್ಚ, ಈ ಸಲದ ಟೂರ್ನಿಯನ್ನು ವಿಭಿನ್ನವಾದ ಕಾರ್ಯಕ್ರಮದ ಮೂಲಕ ಮಾಡಲುಎಲ್ಲ ಯೋಜನೆಗಳನ್ನು ರೂಪಿಸಿದ್ದೇವೆ. ಇತ್ತೀಗೆ ನಡೆದ ಆಟಗಾರರ ಹರಾಜಿನ ಬಳಿಕ ಎಲ್ಲ ಆರು ತಂಡಗಳು ಅತ್ಯಂತ ಬಲಿಷ್ಠವಾಗಿದೆ. ತಂಡದ ಆರು ನಾಯಕರ ಜತೆ 6 ಜನ ಮೆಂಟರ್ಸ್ ಕೂಡ ಇರಲಿದ್ದಾರೆ. ಕೆಸಿಸಿ ಎನ್ನುವುದು ನಮ್ಮವರಿಗೂ ಎರಡನೇ ಮನೆ ಇದ್ದಂತೆ ಎಂದು ಸುದೀಪ್​ ಹೇಳಿದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version