ಬೀದರ್: ಬೀದರ್‌ನ ಬ್ರಿಮ್ಸ್ ಆಸ್ಪತ್ರೆ ಆವರಣದಲ್ಲಿರುವ ಎಂಬಿಬಿಎಸ್ (MBBS) ಹಾಸ್ಟೆಲ್‌ನ ಏಳನೇ ಅಂತಸ್ತಿನಿಂದ ಜಿಗಿದು ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ (Suicide Case) ಮಾಡಿಕೊಂಡಿದ್ದಾನೆ. ಚಿಟ್ಟಗುಪ್ಪ ಪಟ್ಟಣದ ನಿವಾಸಿ ಶ್ರೀರಾಮ ಕಾಡಗಿ (22) ಮೃತ ದುರ್ದೈವಿ.
ಎರಡು ದಿನದ ಹಿಂದಷ್ಟೇ ಬೆಂಗಳೂರಿನಲ್ಲಿ ಶಾಲಾ ವಿದ್ಯಾರ್ಥಿನಿಯೊಬ್ಬಳು 10ನೇ ಮಹಡಿಯಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಳು. ಇದು ಮರೆಯಾಗುವ ಮುನ್ನವೇ ಇದೀಗ ಬೀದರ್‌ನಲ್ಲಿ ಎಂಬಿಬಿಎಸ್ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಾನಸಿಕ ಒತ್ತಡದಿಂದ ಹೆದರಿ ಏಳು ಅಂತಸ್ತಿನಿಂದ ಜಿಗಿದಿದ್ದಾನೆ.
ಇದನ್ನೂ ಓದಿ: Crime news: ಹಳೆ ದ್ವೇಷ, ಹಾಡಹಗಲೇ ಯುವಕನ ಬರ್ಬರ ಹತ್ಯೆ
ಎಂಬಿಎಸ್‌ಎಸ್‌ನಲ್ಲಿ ಟಾಪರ್ ಆಗಿದ್ದ ಶ್ರೀರಾಮ ಕಾಡಗಿ ಸಾವಿನ ಸುದ್ದಿ ಕೇಳಿ ಸಹ ವಿದ್ಯಾರ್ಥಿಗಳು ಶಾಕ್ ಆಗಿ ಕಣ್ಣೀರು ಹಾಕುತ್ತಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ನ್ಯೂ ಟೌನ್ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.
ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ