Site icon Vistara News

Suresh Kumar: ಮಕ್ಕಳ ಎಕ್ಸಾಂ ಇದೆ, ಸ್ವಲ್ಪ ಸೌಂಡ್‌ಗೆ ಬ್ರೇಕ್‌ ಹಾಕಿ; ಮಾಜಿ ಸಚಿವ ಸುರೇಶ್‌ ಕುಮಾರ್‌ ಹೇಳಿದ್ದು ಯಾರಿಗೆ?

#image_title

ಬೆಂಗಳೂರು: ಎಕ್ಸಾಂ ಶುರುವಾದರೆ ವಿದ್ಯಾರ್ಥಿಗಳಲ್ಲಿ ಟೆನ್ಷನ್‌ ಶುರುವಾಗುತ್ತದೆ. ವಾರಕ್ಕೂ ಮೊದಲೇ ಪರೀಕ್ಷೆಯ ತಯಾರಿ ಇರುತ್ತಾರೆ. ಈಗಾಗಲೇ ಪಿಯುಸಿ ಪರೀಕ್ಷೆ ನಡ್ತಿದೆ. ಹಗಲು ರಾತ್ರಿ ಎನ್ನದೆ ಪರೀಕ್ಷೆಯ ತಯಾರಿಯಲ್ಲಿ ಇರುವ ವಿದ್ಯಾರ್ಥಿಗಳಿಗೆ ಈಗ ಕಿರಿಕಿರಿ ಶುರುವಾಗಿದೆ. ವಿದ್ಯಾರ್ಥಿಗಳ ಈ ಕಿರಿಕಿರಿಗೆ ಮಾಜಿ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ (Suresh Kumar) ಧ್ವನಿಯಾಗಿದ್ದಾರೆ.

ಅಂದ ಹಾಗೆ, ವಿಧಾನಸಭಾ ಚುನಾವಣೆ ಸಂಬಂಧ ರಾಜಕೀಯ ಪಕ್ಷಗಳು ಚುರುಕುಗೊಂಡಿವೆ. ಮತದಾರರನ್ನು ಸೆಳೆಯಲು ಅನೇಕ ತಂತ್ರಗಳನ್ನು ಹೆಣೆಯುತ್ತಿವೆ. ಈ ನಡುವೆ ಹಲವಾರು ಕಾರ್ಯಕ್ರಮಗಳನ್ನೂ ಆಯೋಜಿಸುತ್ತಿವೆ. ಆದರೆ ಇವುಗಳೇ ಈಗ ಮಕ್ಕಳ ಓದಿಗೆ ತೊಂದರೆಯುನ್ನುಂಟು ಮಾಡುತ್ತಿವೆ. ಹೀಗಾಗಿ ಮಾಜಿ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಈ ಸಂಬಂಧ ಧ್ವನಿ ಎತ್ತಿದ್ದಾರೆ. ರಾಜಕೀಯ ಪಕ್ಷಗಳ ಕಾರ್ಯಕ್ರಮಗಳು ಮಾತ್ರವಲ್ಲದೆ ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳಿಗೂ ಬ್ರೇಕ್‌ ಹಾಕುವಂತೆ ತಾಕೀತು ಮಾಡಿದ್ದಾರೆ.

ಇದೀಗ ದ್ವಿತೀಯ ಪಿಯುಸಿ ಪರೀಕ್ಷೆ, ಸಿಬಿಎಸ್‌ಇ ತರಗತಿಗಳ ಪರೀಕ್ಷೆಗಳು ನಡೆಯುತ್ತಿವೆ. ಇನ್ನು ಕೆಲವೇ ದಿನಗಳಲ್ಲಿ ಎಸ್ಎಸ್ಎಲ್‌ಸಿ ಪರೀಕ್ಷೆ ಪ್ರಾರಂಭವಾಗುತ್ತಿದೆ. ಎಲ್ಲ ಮಕ್ಕಳು ಅವರವರದೇ ಆತಂಕದಿಂದ ಇರುತ್ತಾರೆ. ಪರೀಕ್ಷೆಗಳಿಗೆ ಸಿದ್ಧತೆಯನ್ನು ಬಹಳ ಗಂಭೀರವಾಗಿ ಮಾಡಿಕೊಳ್ಳುತ್ತಿರುತ್ತಾರೆ. ಅವರ ಕನಸುಗಳನ್ನು ನನಸು ಮಾಡಲು ಏನೆಲ್ಲ ಪ್ರಯತ್ನಗಳನ್ನು ಮಾಡುತ್ತಾರೆ. ಹೀಗಿರುವಾಗ ನಮ್ಮೆಲ್ಲರ ಸಹಾನುಭೂತಿ, ಸಹಕಾರ ಮಕ್ಕಳ ಕಡೆಗೂ ಇರಬೇಕು ಎಂದಿದ್ದಾರೆ.

ಸಂಜೆಯ ಹೊತ್ತು ವಿವಿಧ ಸಾರ್ವಜನಿಕ ಕಾರ್ಯಕ್ರಮಗಳಿಂದ ಹಿಡಿದು, ಧಾರ್ಮಿಕ, ರಾಜಕೀಯ ಕಾರ್ಯಕ್ರಮ ಯೋಜಿಸುವವರು, ಆರ್ಕೆಸ್ಟ್ರಾ ಮುಂತಾದ ಮನರಂಜನಾ ಕಾರ್ಯಕ್ರಮ ಮಾಡುವವರು ಮಕ್ಕಳನ್ನು ಮನದಲ್ಲಿಟ್ಟುಕೊಳ್ಳಬೇಕು. ಧ್ವನಿವರ್ಧಕಗಳ ವಿಪರೀತ ಶಬ್ದದ ಕಾರಣಕ್ಕೆ ಮಕ್ಕಳ ಓದಿನ ಏಕಾಗ್ರತೆಗೆ ತೊಂದರೆ ಉಂಟು ಮಾಡುತ್ತದೆ. ಆ ಮಕ್ಕಳ ಪೋಷಕರು ಇದನ್ನು ಗಟ್ಟಿಯಾಗಿ ಹೇಳದೆ ಬಹಳ ಒದ್ದಾಡುತ್ತಿದ್ದಾರೆ ಎಂದು ಮಾಜಿ ಸಚಿವ ಸುರೇಶ್‌ ಕುಮಾರ್‌ ಬೇಸರ ವ್ಯಕ್ತಪಡಿಸಿದ್ದಾರೆ.

ಕಾಳಜಿ ತೋರಿಸಿ ಪ್ಲೀಸ್..‌

ಏನೇ ಕಾರ್ಯಕ್ರಮಗಳನ್ನು ಮಾಡಿದರೂ ಸಮಾಜದ ಬಹುಮುಖ್ಯ ಭಾಗವಾದ ಈ ವಿದ್ಯಾರ್ಥಿಗಳ ಕಡೆಗೆ ನಮ್ಮ ಕಾಳಜಿ ತೋರಿಸೋಣ ಎಂದು ಮನವಿ ಮಾಡಿದ್ದಾರೆ. ರಾತ್ರಿ ತುಂಬಾ ಹೊತ್ತು ಈ ಕಾರ್ಯಕ್ರಮಗಳನ್ನು ನಡೆಸುವುದರಿಂದ ಮಕ್ಕಳಿಗೆ ತೊಂದರೆ ಆಗುತ್ತದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Child Kidnapping case: ನರ್ಸ್‌ ರೂಪದಲ್ಲಿ ಬಂದು ಶಿಶು ಕದ್ದವಳು ಠಾಣೆಯಲ್ಲಿ ಪ್ರತ್ಯಕ್ಷ; ಮಕ್ಕಳಾಗದಿರುವುದೇ ಕಿಡ್ನ್ಯಾಪ್‌ಗೆ ಕಾರಣ

ಧ್ವನಿವರ್ಧಕ ಉಪಯೋಗದಿಂದಲೂ ಮಕ್ಕಳು ಬಹಳ ಕಿರಿಕಿರಿ ಅನುಭವಿಸುತ್ತಿದ್ದಾರೆ. ಆ ಮಕ್ಕಳ ಬಗ್ಗೆ ಕಾಳಜಿ ವಹಿಸುವುದು ನಮ್ಮ ಕರ್ತವ್ಯವಾಗಿದೆ. ಈ ಸಂಬಂಧ ಪೊಲೀಸ್‌ ಇಲಾಖೆ ಗಮನಹರಿಸಬೇಕಾದ ಅಗತ್ಯವಿದೆ ಎಂದು ಸುರೇಶ್‌ ಕುಮಾರ್‌ ಹೇಳಿದ್ದಾರೆ.

ರಾಜ್ಯದ ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version