ಬೆಂಗಳೂರು: ಇಲ್ಲಿನ ರಿಚ್ಮಂಡ್ ಸರ್ಕಲ್ ಬಳಿ ಅನುಮಾನಾಸ್ಪದವಾದ ಪೊಟ್ಟಣ ಪತ್ತೆ ಆಗಿದ್ದು, ಕೆಲ ಕಾಲ ಭಯದ ವಾತಾವರಣ ಸೃಷ್ಟಿಯಾಗಿತ್ತು. ಆ ಪೊಟ್ಟಣದಲ್ಲಿ ಲೈಟ್‌ವೊಂದು ಬ್ಲಿಂಕ್ ಆಗುತ್ತಿದ್ದ ಕಾರಣ ಆತಂಕ ಹೆಚ್ಚಿಸಿತ್ತು. ಆದರೆ, ಅದು ಡೆಕೋರೇಷನ್‌ಗೆ ಬಳಸುವ ಬಲ್ಬ್ ಎಂದು ಬಳಿಕ ಗೊತ್ತಾಗಿದೆ.
ಏನಿದು ಪ್ರಕರಣ?
ರಿಚ್ಮಂಡ್ ಸರ್ಕಲ್ ಬಳಿ ಅನುಮಾನಾಸ್ಪದವಾದ ಪೊಟ್ಟಣವೊಂದು ಪತ್ತೆಯಾಗಿತ್ತು. ಇದರಲ್ಲಿ ಬೆಳಕು ಬರುತ್ತಿರುವುದನ್ನು ಗಮನಿಸಿದ ವ್ಯಕ್ತಿಯೊಬ್ಬರು. ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಅಷ್ಟರಲ್ಲಿ ಸ್ಥಳದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಶೋಕ್ ನಗರ ಪೊಲೀಸರು ದೌಡಾಯಿಸಿದ್ದಾರೆ. ಸ್ಥಳಕ್ಕೆ ಡಿಸಿಪಿ ಶ್ರೀನಿವಾಸ್ ಗೌಡ ಸಹ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಪೊಟ್ಟಣವನ್ನು ಪೊಲೀಸ್ ಸಿಬ್ಬಂದಿ ಪರಿಶೀಲನೆ ನಡೆಸಿದಾಗ ಬ್ಯಾಗ್‌ನಲ್ಲಿ ವೇಸ್ಟ್ ಪೇಪರ್, ವೇಸ್ಟ್ ಕವರ್ ಹಾಗೂ ಡೆಕೋರೇಷನ್‌ಗೆ ಬಳಸುವ ಬಲ್ಬ್, ಬಲೂನ್ ಪತ್ತೆಯಾಗಿದೆ. ಬಳಿಕ ಎಲ್ಲರೂ ನಿರಾಳರಾಗಿದ್ದಾರೆ.
ಸದ್ಯ ಪೊಟ್ಟಣವನ್ನು ಯಾರು ಇಟ್ಟಿದ್ದಾರೆ ಎಂಬುದರ ಬಗ್ಗೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದು, ಸುತ್ತಮುತ್ತ ವಿಚಾರಣೆ ಕೈಗೊಂಡಿದ್ದಾರೆ.
ಇದನ್ನೂ ಓದಿ | Suicide case | ಜನ್ಮದಿನವೇ ಆತ್ಮಹತ್ಯೆ ಮಾಡಿಕೊಂಡ ಕಾಲೇಜು ಉಪನ್ಯಾಸಕಿ