Site icon Vistara News

Vistara News Launch | ವಿಸ್ತಾರ ನ್ಯೂಸ್‌ ಸಕಾರಾತ್ಮಕ ಬದಲಾವಣೆ ತರಲಿ, ಸುತ್ತೂರು ಶ್ರೀಗಳಿಂದ ಆಶೀರ್ವಚನ

Sutturu Shri

ಬೆಂಗಳೂರು: ಸಕಾರಾತ್ಮಕ ಮನೋಭಾವನೆಯಿಂದ ಆರಂಭವಾಗುತ್ತಿರುವ ವಿಸ್ತಾರ ನ್ಯೂಸ್‌ ಚಾನೆಲ್‌ (Vistara News Launch) ಸಮಾಜದಲ್ಲಿ ಮಹತ್ತರ ಬದಲಾವಣೆ ತರಲಿ. ಇದು ಸಕಾರಾತ್ಮಕ ಬದಲಾವಣೆಗೆ ಮುನ್ನುಡಿ ಬರೆಯಲಿ ಎಂದು ಶ್ರೀಮದ್ ಸುತ್ತೂರು ವೀರ ಸಿಂಹಾಸನ ಮಠದ ಪೀಠಾಧ್ಯಕ್ಷರಾದ ಶ್ರೀ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹಾರೈಸಿದರು.

ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುತ್ತಿರುವ ವಿಸ್ತಾರ ನ್ಯೂಸ್‌ ಚಾನೆಲ್‌ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು. ಇಂದು ದೃಶ್ಯ ಮಾಧ್ಯಮ ಜಗತ್ತಿನಾದ್ಯಂತ ವಿಸ್ತಾರವಾಗಿ ಬೆಳೆದಿದೆ. ಜನರ ನಿರೀಕ್ಷೆಗೂ ಮೀರಿ ಹೊಸ ಹೊಸ ಚಾನೆಲ್‌ಗಳು ಆರಂಭವಾಗುತ್ತಿವೆ. ದೃಶ್ಯ ಮಾಧ್ಯಮಗಳು ಹಾಗೂ ಮುದ್ರಣ ಮಾಧ್ಯಮಗಳು ಜನರ ವಿಶ್ವಾಸ ಗಳಿಸುವ, ಸಮಾಜದ ಏಳಿಗೆಗೆ ಕಾರಣವಾಗುವ ಸುದ್ದಿಗಳನ್ನು ಪ್ರಸಾರ ಮಾಡಿದರೆ ಅದು ಸಮಾಜಕ್ಕೆ ಅನುಕೂಲವಾಗಲಿದೆ. ಇದನ್ನು ವಿಸ್ತಾರ ನ್ಯೂಸ್‌ ಮಾಡಲಿದೆ ಎಂಬ ವಿಶ್ವಾಸವಿದೆ” ಎಂದು ತಿಳಿಸಿದರು.

“ನಮ್ಮ ದೇಶದ ಪರಂಪರೆ ಅದ್ಭುತವಾಗಿದೆ. ಸಂಗೀತ, ನೃತ್ಯ, ಕಲೆಯು ಸಿರಿವಂತಿಕೆಯಿಂದ ಕೂಡಿದೆ. ಇಂತಹ ಸಿರಿವಂತಿಕೆಯನ್ನು ಮಾಧ್ಯಮಗಳು ಜನರಿಗೆ ತಲುಪಿಸಬೇಕು. ಇಂತಹ ದೃಶ್ಯಗಳು, ಸುದ್ದಿಗಳು ಸಾಮಾನ್ಯ ಜನರ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಯಾವುದೇ ಮಾಧ್ಯಮವು ಜನರ ಮನಸ್ಸಿನಲ್ಲಿ ಸಕಾರಾತ್ಮಕ ಮನೋಭಾವ ಮೂಡಿಸುವ, ಬದುಕಿನ ವಿಕಾಸಕ್ಕೆ ಕಾರಣವಾಗುವಂತಹ ಸುದ್ದಿಗಳನ್ನು ಪ್ರಸಾರ ಮಾಡಬೇಕು. ಇದು ದೇಶ ಹಾಗೂ ಜನಸಮುದಾಯಕ್ಕೆ ಸಕಾರಾತ್ಮಕ ಬದಲಾವಣೆಗೆ ಕಾರಣವಾಗಿದೆ. ಹರಿಪ್ರಕಾಶ್‌ ಕೋಣೆಮನೆ ಹಾಗೂ ಎಚ್‌.ವಿ.ಧರ್ಮೇಶ್‌ ಅವರ ತಂಡವು ಈ ಕೆಲಸ ಮಾಡಲಿದೆ. ಎಲ್ಲರಿಗೂ ಶುಭವಾಗಲಿ” ಎಂದು ಆಶೀರ್ವಾದ ಮಾಡಿದರು.

ಇದನ್ನೂ ಓದಿ | Vistara News Launch | ಪ್ರಪಂಚ ಮುನ್ನಡೆಸುವ ಹೊಣೆಗಾರಿಕೆ ಮಾಧ್ಯಮ ಕ್ಷೇತ್ರಕ್ಕಿದೆ: ಮಾದಾರ ಚೆನ್ನಯ್ಯ ಶ್ರೀ

Exit mobile version