ತಾಳಗುಪ್ಪ: ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕು ಸೊರಬ ವಿಧಾನ ಸಭಾ ಕ್ಷೇತ್ರದ ತಾಳಗುಪ್ಪ (Talaguppa News) ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಾರ್ಡ್ 03ರಲ್ಲಿ ಅನಾದಿ ಕಾಲದಿಂದ ವಾಸವಿರುವ ಮಡಿವಾಳ ಮತ್ತು ಒಕ್ಕಲಿಗ ಸಮುದಾಯದವರ ಮೇಲೆ ತಾಳಗುಪ್ಪ ಕೂಡ್ಲಿ ಮಠವು ದೌರ್ಜನ್ಯ ನಡೆಸಿ, ಒಕ್ಕಲೆಬ್ಬಿಸುತ್ತಿದೆ ಎಂದು ಆರೋಪಿಸಿ ಸೋಮವಾರ (ಡಿ.19) ಬೃಹತ್ ಪಾದಯಾತ್ರೆ ನಡೆಸಲಾಯಿತು.
ಸಾಗರ ರೈತ ಸಂಘದ (ಡಾ. ಎಚ್. ಗಣಪತಪ್ಪ ) ಅಧ್ಯಕ್ಷ ದಿನೇಶ್ ಶಿರವಾಳ ಹಾಗೂ ಹಲವು ಸಂಘಟನೆಗಳ ಸದಸ್ಯರು ತಾಳಗುಪ್ಪದಿಂದ ಸಾಗರದವರೆಗೆ ಬೃಹತ್ ಪಾದಯಾತ್ರೆ ನಡೆಸಿ, ಮಡಿವಾಳ ಮತ್ತು ಒಕ್ಕಲಿಗ ಸಮುದಾಯದ ಸಂತ್ರಸ್ತರಿಗೆ ಸರ್ಕಾರ ಸೂಕ್ತ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿದರು.
ತಾಳಗುಪ್ಪ ಕೂಡ್ಲಿ ಮಠವು ಸಾರ್ವಜನಿಕ ತೆರಿಗೆಯ ಹಣ ಬಳಸಿ ನಿರ್ಮಿಸಿದ ಕಾಮಗಾರಿಯನ್ನು ಧ್ವಂಸ ಮಾಡಿದ್ದು, ಪಿಡಬ್ಲ್ಯುಡಿ ಚರಂಡಿಯನ್ನೂ ಮುಚ್ಚಿದೆ. ಕಳೆದ ದಿನಗಳ ಹಿಂದೆ ಸುರಿದ ಬಾರಿ ಮಳೆಗೆ ರಭಸವಾಗಿ ಹರಿದ ಚರಂಡಿ ನೀರು ನಿವಾಸಿಗಳ ಮನೆಗೆ ನುಗ್ಗಿ ಅಪಾರ ನಷ್ಟ ಉಂಟಾಗಿದೆ. ಕಾಮಗಾರಿಯನ್ನು ನಾಶ ಮಾಡಿ, ಪಿಡಬ್ಲ್ಯುಡಿ ನಿರ್ಮಾಣ ಮಾಡಿದ್ದ ಚರಂಡಿಯನ್ನು ಮುಚ್ಚಿದ ಮಠದ ವಿರುದ್ಧ ಸೂಕ್ತ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಇದನ್ನೂ ಓದಿ | DK Shivakumar | ಡಿಕೆಶಿ ಮಾಲೀಕತ್ವದ ಶಿಕ್ಷಣ ಸಂಸ್ಥೆಗಳ ಮೇಲೆ ಸಿಬಿಐ ದಾಳಿ: ದಾಖಲೆಗಳ ಪರಿಶೀಲನೆ