ಬೆಂಗಳೂರು: ಇಲ್ಲಿನ ಕಂಠೀರವ ಸ್ಟೇಡಿಯಂನಲ್ಲಿ ಟಿಸಿಎಸ್ ವರ್ಲ್ಡ್ 10K ಮ್ಯಾರಥಾನ್ (TCS World 10K Bengaluru) ನಡೆಯಲಿದೆ. ಮೇ 21ರ ಬೆಳಗ್ಗೆ 5.30 ರಿಂದ 9 ಗಂಟೆವರೆಗೆ ಮ್ಯಾರಥಾನ್ ನಡೆಯಲಿದ್ದು, ಈ ವೇಳೆ ವಾಹನಗಳ ಓಡಾಟಕ್ಕೆ ನಿರ್ಬಂಧ ಹೇರಲಾಗಿದೆ. ಸಾರ್ವಜನಿಕರ ವಾಹನಗಳ ಓಡಾಟಕ್ಕೆ ಅಡಚಣೆಯಾಗದಂತೆ ತಾತ್ಕಾಲಿಕವಾಗಿ ಸಂಚಾರ ಮಾರ್ಗ ಬದಲಾವಣೆ ಹಾಗೂ ನಿರ್ಬಂಧ ಮಾಡಲಾಗಿದೆ.
ಈ ಭಾಗದಲ್ಲಿ ಸಂಚಾರ ಮಾರ್ಗ ಬದಲಾವಣೆ
*ಜೆ.ಸಿ ರಸ್ತೆ ಕಡೆಯಿಂದ ವಿಧಾನಸೌಧ, ಶಿವಾಜಿನಗರ ಮತ್ತು ರಾಜಭವನ ರಸ್ತೆ ಕಡೆಗೆ ಹೋಗುವವರು, ಪೊಲೀಸ್ ಕಾರ್ನರ್ ಕೆ.ಜಿ ರಸ್ತೆ, ಹಳೆ ಅಂಚೆ ಕಛೇರಿ ರಸ್ತೆ ಮುಖಾಂತರ ಕೆ.ಆರ್. ವೃತ್ತಕ್ಕೆ ಅಥವಾ ಪ್ಯಾಲೇಸ್ ರಸ್ತೆ ಮಾರ್ಗವಾಗಿ ಬಸವೇಶ್ವರ ವೃತ್ತದ ಕಡೆಗೆ ಸಂಚರಿಸಬಹುದಾಗಿದೆ.
*ಜೆ.ಸಿ. ರಸ್ತೆ ಕಡೆಯಿಂದ ಹಳೇ ಮದ್ರಾಸ್ ರಸ್ತೆ ಎಂ.ಜಿ ರಸ್ತೆ, ಹಲಸೂರು, ಮಾರತ್ತಹಳ್ಳಿ ಕಡೆಗೆ ಹೋಗುವವರು ಭರತ್ ಜಂಕ್ಷನ್ ಬಳಿ ಬಲಕ್ಕೆ ತಿರುವು ಪಡೆದು ಎಚ್.ಸಿದ್ದಯ್ಯ ರಸ್ತೆ ಜಂಕ್ಷನ್ -ಕೆ.ಎಚ್. ಜಂಕ್ಷನ್‌ನಿಂದ ರಿಚ್‌ಮಂಡ್ ಮೇಲ್ಸೇತುವೆ, ರೆಸಿಡೆನ್ಸಿ ರಸ್ತೆಯಲ್ಲಿ, ಕ್ಯಾಪ್ ಫಾರ್ಮಸಿ, ಅಪೇರಾ ಜಂಕ್ಷನ್, ಮೊಯೋಹಾಲ್, ಕಮಿಷನರೇಟ್ ರಸ್ತೆ, ಗರುಡಾ ಮಾಲ್, ಆಸ್ಪತ್ರೆ ಮೂಲಕ ಮುಂದೆ ಹೋಗಬಹುದಾಗಿದೆ.
*ಸಿಟಿ ಮಾರ್ಕೆಟ್ ಮತ್ತು ಟೌನ್ ಹಾಲ್ ಕಡೆಯಿಂದ ಹಳೆ ಮದ್ರಾಸ್ ರಸ್ತೆ – ಎಂ.ಜಿ ರಸ್ತೆ, ಹಲಸೂರು, ಮಾರತ್‌ಹಳ್ಳಿ ಕಡೆಗೆ ಹೋಗುವವರು ಎನ್.ಆರ್. ಜಂಕ್ಷನ್ ಪಿ.ಕಾಳಿಂಗರಾವ್ ರಸ್ತೆ, ಮಿಷನ್ ರಸ್ತೆ, ರಿಚ್‌ಮಂಡ್ ಮೇಲ್ಸೇತುವೆ, ರೆಸಿಡೆನ್ಸಿ ರಸ್ತೆಯಲ್ಲಿ, ಕ್ಯಾಪ್ ಫಾರ್ಮಸಿ, ಅಪೇರಾ ಜಂಕ್ಷನ್, ಮೊಯೋಹಾಲ್, ಕಮೀಷನರೇಟ್ ರಸ್ತೆ, ಗರುಡಾ ಮಾಲ್, ಹಾಸ್‌ಮ್ಯಾಟ್ ಆಸ್ಪತ್ರೆ ಮೂಲಕ ಮುಂದೆ ಹೋಗಬಹುದಾಗಿದೆ.
*ನೃಪತುಂಗಾ ರಸ್ತೆ ಕಡೆಯಿಂದ ಹಳೆ ಮದ್ರಾಸ್ ರಸ್ತೆ – ಎಂ.ಜಿ ರಸ್ತೆ, ಹಲಸೂರು, ಮಾರತ್ತಹಳ್ಳಿ ಕಡೆಗೆ ಹೋಗುವವರು ಹಡ್ಸನ್ ವೃತ್ತದಲ್ಲಿ ಕಡ್ಡಾಯವಾಗಿ ಬಲ ತಿರುವು ಪಡೆದು ದೇವಾಂಗ ರಸ್ತೆ – ದೇವಾಂಗ ಜಂಕ್ಷನ್ ಮಿಷನ್ ರಸ್ತೆ, ರಿಚ್‌ಮಂಡ್ ಮೇಲ್ಸೇತುವೆ, ರೆಸಿಡೆನ್ಸಿ ರಸ್ತೆಯಲ್ಲಿ, ಕ್ಯಾಷ್ ಫಾರ್ಮಸಿ, ಅಪೇರಾ ಜಂಕ್ಷನ್, ಮೊಯೋಹಾಲ್, ಕಮೀಷನರೇಟ್, ರಸ್ತೆ, ಗರುಡ ಮಾಲ್ ಹಾಸ್ ಮ್ಯಾಟ್ ಆಸ್ಪತ್ರೆ ಮೂಲಕ ಮುಂದೆ ಸಾಗುವುದು.
*ಕ್ವೀನ್ಸ್ ರಸ್ತೆ ಮತ್ತು ಶಿವಾಜಿನಗರ ಕಡೆಯಿಂದ ಬರುವ ವಾಹನಗಳು, ಬಾಳೆಕುಂದ್ರಿ ವೃತ್ತದ ಮೂಲಕ ಕನ್ನಿಂಗ್ ಹ್ಯಾಂ ರಸ್ತೆ ಚಂದ್ರಿಕಾ, ಜಂಕ್ಷನ್, ಎಲ್.ಆರ್‌ಡಿ.ಇ ಜಂಕ್ಷನ್ ಬಸವೇಶ್ವರ ವೃತ್ತದ ಮೂಲಕ ಹೋಗಬಹುದು.
ವಾಹನ ನಿಲುಗಡೆ ಸ್ಥಳಗಳು
ಪಾಸ್ ಹೊಂದಿರುವ ಓಟಗಾರರು ಯು.ಬಿ ಸಿಟಿಯಲ್ಲಿ ತಮ್ಮ ವಾಹನವನ್ನು ಪಾರ್ಕಿಂಗ್ ಮಾಡಬಹುದು. ಕ್ಯಾಬ್‌ಗಳ ಪಿಕ್ ಅಪ್ ಮತ್ತು ಡ್ರಾಪ್ ಆಫ್ ಪಾಯಿಂಟ್ ಸ್ಥಳಗಳು ಹೀಗಿವೆ. ಆರ್.ಆರ್.ಎಂ.ಆರ್. ರಸ್ತೆ, ಕೆ.ಜಿ.ರಸ್ತೆ, ಪೊಲೀಸ್ ಕಾರ್ನರ್ ಬಳಿ, ಸೆಂಟ್ ಮಾರ್ಕ್ ರಸ್ತೆ, ಎಸ್.ಬಿ.ಐ.ವೃತ್ತ, ಕ್ವೀನ್ಸ್ ವೃತ್ತ
ಇದನ್ನೂ ಓದಿ: E khata: ಬಿ ಖಾತೆಯಿಂದ ಎ ಖಾತೆಗೆ ಬದಲು; ಅಕ್ರಮ ಕಂಡುಬಂದರೆ ಅಧಿಕಾರಿಗಳ ಸಹಿತ ಭೂ ಮಾಲೀಕರಿಗೆ ಶಿಕ್ಷೆ ಫಿಕ್ಸ್!
ವಾಹನಗಳ ನಿಲುಗಡೆ ನಿಷೇಧ
ಕಸ್ತೂರಿಬಾ ರಸ್ತೆ, ಹಡ್ಗನ್ ವೃತ್ತ, ಕ್ವೀನ್ಸ್ ವೃತ್ತ, ಎಂ.ಜಿ.ರಸ್ತೆ, ವೆಬ್ಸ್ ಜಂಕ್ಷನ್, ಹಲಸೂರು ರಸ್ತೆವರೆಗೆ ಹಾಗೂ ಮಣಿಪಾಲ್ ಸೆಂಟರ್‌ನಿಂದ ಸಿಟಿ.ಒ ವೃತ್ತದವರೆಗೆ ವಾಹನಗಳ ನಿಲುಗಡೆಯನ್ನು ನಿಷೇಧ ಮಾಡಲಾಗಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ