Site icon Vistara News

Teacher Transfer | ಮೊದಲು ಬಡ್ತಿ ನೀಡಿ ನಂತರ ವರ್ಗಾವಣೆ ಪ್ರಕ್ರಿಯೆ ನಡೆಸಿ: ಶಿಕ್ಷಕರ ಸಂಘ ಒತ್ತಾಯ

government to restarting the transfer process shortly

ಬೆಂಗಳೂರು: ಈಗಾಗಲೇ ಬಡ್ತಿ ಪ್ರಕ್ರಿಯೆಗೆ ಇರುವ ಎಲ್ಲ ಆಡಳಿತಾತ್ಮಕ ತೊಂದರೆಗಳು ನಿವಾರಣೆಯಾಗಿದ್ದು, ಈ ಪ್ರಕ್ರಿಯೆ ಪೂರ್ಣಗೊಳಿಸಿಯೇ ಹೆಚ್ಚುವರಿ ಶಿಕ್ಷಕರನ್ನು ಗುರುತಿಸುವ ಪ್ರಕ್ರಿಯೆ ಮುಂದುವರಿಸಬೇಕೆಂದು (Teacher Transfer) ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಮತ್ತೆ ಒತ್ತಾಯಿಸಿದೆ.

ಶುಕ್ರವಾರ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಶಂಭುಲಿಂಗನಗೌಡ ಪಾಟೀಲ ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ಹಾಗೂ ಪದಾಧಿಕಾರಿಗಳು ವರ್ಗಾವಣಾ ನೊಡಲ್ ಅಧಿಕಾರಿ ಭೈಯಪ್ಪ ರೆಡ್ಡಿ ಅವರನ್ನು ಭೇಟಿ ಮಾಡಿ ಈ ಕುರಿತು ಚರ್ಚಿಸಿದ್ದಾರೆ.

ಹೆಚ್ಚುವರಿ ಪಟ್ಟಿಯಲ್ಲಿರುವ ಶಿಕ್ಷಕರ ಆತಂಕ ಕಡಿಮೆಮಾಡಲು ವಿಷಯವಾರು ಹೆಚ್ಚುವರಿ ಶಿಕ್ಷಕರನ್ನು ಗುರುತಿಸುವ ಪ್ರಕ್ರಿಯೆ ಕೈಬಿಟ್ಟು ಶಾಲೆಯಲ್ಲಿ ಮಂಜೂರಾದ ಮತ್ತು ಕಾರ್ಯನಿರ್ವಹಿಸುತ್ತಿರುವ ಹುದ್ದೆಗಳಿಗೆ ಅನುಗುಣವಾಗಿ ಹೆಚ್ಚುವರಿ ಶಿಕ್ಷಕರನ್ನು ಗುರುತಿಸುವ ಪ್ರಕ್ರಿಯೆ ಕೈಗೊಳ್ಳಲು ಸಂಘ ವಿನಂತಿಸಿದೆ.

ಈ ಸಂದರ್ಭದಲ್ಲಿ ರಾಯಚೂರು ಜಿಲ್ಲಾ ಶಿಕ್ಷಕ ಸಂಘದ ಕಾರ್ಯದರ್ಶಿ ಸಿದ್ಲಿಂಗಪ್ಪ, ರಾಯಚೂರಿನ ಪದಾಧಿಕಾರಿ ಮಲ್ಲೇಶ್ ಕರಿಗಾರ್, ಮಾಗಡಿ ತಾಲೂಕಿನ ಶಿಕ್ಷಕ ಸಂಘದ ಪದಾಧಿಕಾರಿ ಮೂರ್ತಿ, ವಿಜಯ ಹಾಗೂ ಸಿಂಧನೂರು ತಾಲುಕಿನ ಶಿಕ್ಷಕರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಶಿಕ್ಷಕರಲ್ಲಿ ಮನವಿ
ಈಗಾಗಲೇ ಬಿಇಒ ಲಾಗಿನ್‌ನಲ್ಲಿ ಪ್ರಕಟಿಸಿರುವ ಹೆಚ್ಚುವರಿ ಪಟ್ಟಿಗೆ ಆನ್‌ಲೈನ್‌ನಲ್ಲಿ ಕೊಟ್ಟಿರುವ ಅವಕಾಶಗಳ ಆಧಾರದ ಮೇಲೆ ಆಕ್ಷೇಪಣೆ ಸಲ್ಲಿಸುವುದರ ಜೊತೆಗೆ ಲಿಖಿತವಾಗಿ ಸಲ್ಲಿಸಬೇಕಾದ ವಿಷಯಗಳಿಗೆ ಅನುಗುಣವಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಲಿಖಿತವಾಗಿ ಆಕ್ಷೇಪಣೆಗಳನ್ನು ಸಲ್ಲಿಸಬೇಕೆಂದು ಶಿಕ್ಷಕರಲ್ಲಿ ಶಿಕ್ಷಕರ ಸಂಘವು ಮನವಿ ಮಾಡಿದೆ.

ಹೆಚ್ಚುವರಿ ಶಿಕ್ಷಕರ ಗುರುತಿಸುವ ಮತ್ತು ಬಡ್ತಿ ಪ್ರಕ್ರಿಯೆ ಸೇರಿದಂತೆ ಶಿಕ್ಷಕರಿಗೆ ಸಂಬಂಧಿಸಿದ ಎಲ್ಲ ವಿಷಯಗಳಲ್ಲಿಯೂ ಯಾರಿಗೂ ತೊಂದರೆಯಾಗದಂಥೆ ಎಲ್ಲರ ಸ್ನೇಹಿಯಾಗಿ ಈ ಪ್ರಕ್ರಿಯೆಗಳು ನಡೆಯುವಂತೆ ರಾಜ್ಯ ಶಿಕ್ಷಕರ ಸಂಘಟನೆ ನಿರಂತರವಾಗಿ ಪ್ರಯತ್ನ ಮಾಡುತ್ತಿದೆ.ಈ ಸಂಬಂಧ ಶಿಕ್ಷಣ ಸಚಿವರೊಂದಿಗೆ, ಇಲಾಖೆಯ ಹಿರಿಯ ಅಧಿಕಾರಿ ಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಶಂಭುಲಿಂಗನಗೌಡ ಪಾಟೀಲ ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ | Teacher Transfer | ಶಿಕ್ಷಕರ ವರ್ಗಾವಣೆಗೆ ಅಂತಿಮ ಅಧಿಸೂಚನೆ; ವೇಳಾಪಟ್ಟಿ ಕೂಡ ಪ್ರಕಟ

Exit mobile version