Site icon Vistara News

Teachers Protest : ಬೆಂಗಳೂರು ಚಲೋಗೆ ಕರೆ ಕೊಟ್ಟ ಅಲ್ಪಸಂಖ್ಯಾತ ಶಿಕ್ಷಕರು, ಉಪನ್ಯಾಸಕರು

Teacher jobs

ಬೆಂಗಳೂರು: ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಶಿಕ್ಷಕರ ಸಂಘವು (Teachers Protest ) ಸರ್ಕಾರದ ವಿರುದ್ಧ ಸಮರಕ್ಕೆ ಸಜ್ಜಾಗಿದೆ. ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಕ್ಟೋಬರ್‌ 20ರಂದು ಫ್ರೀಡಂ ಪಾರ್ಕ್‌ನಲ್ಲಿ ಬೆಂಗಳೂರು ಚಲೋ ಮೂಲಕ ಅನಿರ್ದಿಷ್ಟಾವಧಿ ಧರಣಿ ನಡೆಸಲು ಮುಂದಾಗಿದ್ದಾರೆ.

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಶಿಕ್ಷಕರ ಸಂಘ, ಅಲ್ಪಸಂಖ್ಯಾತರ ಉಪನ್ಯಾಸಕರ ಸಂಘ ಜಂಟಿಯಾಗಿ ಪ್ರತಿಭಟಿಸುತ್ತಿದೆ. ಕಳೆದ 13 ವರ್ಷಗಳಿಂದ ನೇಮಕಾತಿ ನಿಯಮ ಪರಿಷ್ಕರಣೆಯಾಗದೆ ಇರುವುದು ಸೇರಿ ಹತ್ತಾರು ಬೇಡಿಕೆಯೊಂದಿಗೆ ಪ್ರತಿಭಟಿಸಲು ಮುಂದಾಗಿದ್ದಾರೆ.

ಇದನ್ನೂ ಓದಿ: Bengaluru News : ಹಿಡಿಯಲು ಬಂದ ಹೆಡ್‌ ಕಾನ್ಸ್‌ಟೇಬಲ್‌ಗೆ ಚಾಕು ಹಾಕಿದ ಕಿರಾತಕ

ಇತರೆ ಬೇಡಿಕೆಗಳೇನು?

-ಸಿ ಆ್ಯಂಡ್‌ ಆರ್ ನಿಯಮ ಇಲ್ಲದೇ ಯಾವುದೇ ವೃಂದಕ್ಕೂ ಮುಂಬಡ್ತಿ ನೀಡಬಾರದು. ಹಾಗೇ ನೀಡುವುದಾದರೆ ಶಿಕ್ಷಕರ ವೃಂದಕ್ಕೂ ಕಾರ್ಯಕಾರಿ ಆದೇಶದ ಮೂಲಕ ಮುಂಬಡ್ತಿ ನೀಡಬೇಕೆಂದು ಒತ್ತಾಯಿಸಿದ್ದಾರೆ.

-2018ರ ವೇತನ ಆಯೋಗದ ಒಂದು ವೇತನ (ಸ್ಟೇಪ್‌ ಅಪ್‌) ತಾರತಮ್ಯವನ್ನು ಕೂಡಲೇ ನಿವಾರಿಸಬೇಕು

-ಎಲ್ಲ ಶಿಕ್ಷಕರಿಗೂ ಅನುಕೂಲವಾಗುವಂತೆ ಗ್ರೇಡಿಯೇಷನ್ ಪಟ್ಟಿ ಬಿಡುಗಡೆ ಮಾಡಬೇಕು

-ನವೋದಯ ಮಾದರಿ ಶಾಲೆಯ ಸ್ನಾತಕೋತ್ತರ ಪದವೀಧರ ಶಿಕ್ಷಕರಿಗೆ ಬಿ ವೃಂದವೆಂದು ಪರಿಗಣಿಸಿ ಉಪನ್ಯಾಸಕರ ವೇತನ ಕೊಡಬೇಕು

-ದೈಹಿಕ ಶಿಕ್ಷಕರಿಗೆ ಉನ್ನತಿಕರೀಸಿದ ಶಾಲೆಗಳಲ್ಲಿ ಉಪನ್ಯಾಸಕ ಹುದ್ದೆ ಸೃಷ್ಟಿಸಿ, ಮುಂಬಡ್ತಿಗೆ ಅವಕಾಶ ನೀಡಬೇಕು.

-ಆರ್ಟ್,ಕ್ರಾಫ್ಟ್ ಶಿಕ್ಷಕರಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಶಿಕ್ಷಕರಷ್ಟೇ ವೇತನ ನೀಡಬೇಕು

-MOD(Master On Duty) ರದ್ದುಪಡಿಸಬೇಕು

-ಉನ್ನತೀಕರಿಸಿದ ಶಾಲೆಯ ಹೆಚ್ಚುವರಿ ಕಾರ್ಯಭಾರ ತೆರವು ಮಾಡಬೇಕು.

-ನೌಕರರ ಕಲ್ಯಾಣ ನಿಧಿ ಸ್ಥಾಪಿಸಬೇಕೆಂದು ಒತ್ತಾಯಿಸಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version