Site icon Vistara News

Team Bharavase: ಸರ್ಕಾರಿ ಶಾಲೆಗಳಲ್ಲಿ ಗುಣಾತ್ಮಕ ಶಿಕ್ಷಣಕ್ಕೆ ʼಭರವಸೆʼ ತಂಡ ಸಹಕಾರ

The Bharavase team painted on the walls of the school

#image_title

ಬೆಂಗಳೂರು: ರಾಜ್ಯ ಸರ್ಕಾರ “ಗುಣಾತ್ಮಕ ಶಿಕ್ಷಣ” ಎಂಬ ಧ್ಯೇಯದೊಂದಿಗೆ 2023-24ನೇ ಶೈಕ್ಷಣಿಕ ವರ್ಷ ಆರಂಭಿಸಿದೆ. ಈ ನಿಟ್ಟಿನಲ್ಲಿ ಸರ್ಕಾರಿ ಶಾಲೆಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸಲು ಭರವಸೆ ತಂಡವು (Team Bharavase) ತನ್ನಿಂದಾದ ಸಹಕಾರ ನೀಡುವ ಮೂಲಕ ಧ್ಯೇಯ ವಾಕ್ಯಕ್ಕೆ ಪೂರಕವಾಗುವ ವಾತಾವರಣ ಸೃಷ್ಟಿಸಲು ಮುಂದಾಗಿದೆ.

ನಮ್ಮ ನಡೆ ಸರ್ಕಾರಿ ಶಾಲೆಗಳ ಕಡೆ ಅಭಿಯಾನದ ಅಂಗವಾಗಿ ಭರವಸೆ ತಂಡವು, ಶಾಲೆಯ ಮಕ್ಕಳಿಗೆ ಕಲಿಕೆಗೆ ಸಹಾಯಕವಾಗುವ ಪರಿಸರ ಸೃಷ್ಟಿಸಿ ಕೊಡಲು ಶಾಲೆಗಳಿಗೆ ಬಣ್ಣ ಹಚ್ಚಿ ಕಲಿಕೆಯ ನಿಟ್ಟಿನಲ್ಲಿ ಉಪಯುಕ್ತ ಚಿತ್ತಾರಗಳ ಸೃಷ್ಟಿಸಿ, ಮಕ್ಕಳಿಗೆ ಕಲಿಯಲು ಉತ್ತಮ ಅಂಗಳ ದೊರಕಿಸಲು ಪ್ರಯತ್ನಿಸುತ್ತಿದೆ.

ಕಳೆದ ವಾರ ಬೆಂಗಳೂರಿನ ಶ್ರೀರಾಮಪುರದ ಸರ್ಕಾರಿ ಶಾಲೆ ಹಾಗೂ ಈ ವಾರ ಕುಣಿಗಲ್‌ನ ದಾಸನಪುರದ ಸರ್ಕಾರಿ ಶಾಲೆಗೆ ಬಣ್ಣ ಹಚ್ಚಿ, ಶಿಕ್ಷಣ ಸಂಬಂಧಿತ ಚಿತ್ರಗಳನ್ನು ಮೂಡಿಸಿತು. ಇದರ ಜತೆಗೆ ಮಕ್ಕಳಿಗೆ ನೋಟ್ ಪುಸ್ತಕ ಹಾಗೂ‌ ಲೇಖನ ಸಾಮಗ್ರಿ ವಿತರಿಸಿತು.

ಭರವಸೆ ತಂಡದ ಸುನೀಲ್, ಮಂಜೇಶ, ಹರ್ಷಿತಾ, ಸಂಜಯ್, ಪೂಜಾ, ಹರ್ಷವರ್ಧನಿ, ಸಾಯಿ ಆಶ್ರಿತ, ರಾಘವ, ಅಕ್ಷತಾ, ಮನೀಶ್, ಯೋಗೇಶ್, ಪ್ರಮೋದ್, ನಿಖಿಲ್, ಪೃಥ್ವಿ, ಶಮತ, ಧನುಶ, ಪ್ರಣವ್, ತೇಜಸ್ ಮುಂತಾದವರು ಕುಣಿಗಲ್‌ನ ದಾಸನಪುರದ ಶಾಲೆಗೆ ಬಣ್ಣ ಹಚ್ಚಿ ಮಕ್ಕಲ್ಲಲ್ಲಿ ಹಾಗೂ ಗ್ರಾಮದ ಜನತೆಯಲ್ಲಿ ಖುಷಿ ಬಿತ್ತಿದರು.

ತಮ್ಮ ಸ್ವಂತ ದುಡಿಮೆಯಲ್ಲಿ ಬಂದ ಹಣದಲ್ಲಿ ಈ ರೀತಿ ಸಮಾಜಕ್ಕೆ ಸಹಕಾರಿಯಾಗಿ ಬೇರೆಯವರಿಗೂ ಮಾದರಿಯಾಗುವ ಕೆಲಸಕ್ಕೆ ಭರವಸೆ ತಂಡ ಮುಂದಾಗಿದೆ. ಸರ್ಕಾರಿ ಶಾಲೆಗಳು ಆರಂಭವಾಗಿ ದಿನಗಳೇ ಕಳೆದರೂ ಪೂರಕ ವ್ಯವಸ್ಥೆಗಳು ವಿದ್ಯಾರ್ಥಿಗಳಿಗೆ ದೊರಕದೆ ಇರುವುದು ವಿಪರ್ಯಾಸ ಎಂಬುವುದು ತಂಡದ ಅಭಿಪ್ರಾಯವಾಗಿದೆ.

ಇದನ್ನೂ ಓದಿ | Eklavya Recruitment: ಕೇಂದ್ರದಿಂದ ಬಂಪರ್‌ ಜಾಬ್ಸ್;‌ ಶೀಘ್ರವೇ ಏಕಲವ್ಯ ಶಾಲೆಗಳಿಗೆ 38 ಸಾವಿರ ಶಿಕ್ಷಕರ ನೇಮಕ

ಭರವಸೆ ತಂಡದ ಸದಸ್ಯರು.
Exit mobile version