ಬಾಗಲಕೋಟೆ: ಅದಮ್ಯ ಚೇತನ ಫೌಂಡೇಶನ್ ಅಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್ (Tejaswini Ananth Kumar) ಅವರಿಗೆ ಬಸವ ಧರ್ಮ ಪೀಠದಿಂದ “ಬಸವಾತ್ಮಜೆ” ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಕೂಡಲಸಂಗಮ ಕ್ಷೇತ್ರದಲ್ಲಿ ಬಸವ ಧರ್ಮ ಪೀಠದಿಂದ ಶುಕ್ರವಾರ ಆಯೋಜಿಸಿದ್ದ 36ನೇ ಶರಣ ಮೇಳದಲ್ಲಿ ಪ್ರಶಸ್ತಿ ನೀಡಿದ್ದು, ಇದು 50 ಸಾವಿರ ರೂಪಾಯಿ, ಪಾರಿತೋಷಕ ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ.
ಬಿಜೆಪಿ ಮಾಜಿ ಸಚಿವ ಅನಂತಕುಮಾರ್ ಅವರ ಪತ್ನಿ ತೇಜಸ್ವಿನಿ ಅನಂತಕುಮಾರ್ ಅವರು ಅದಮ್ಯ ಚೇತನ ಫೌಂಡೇಶನ್ ಮೂಲಕ ಹಲವು ಸಮಾಜ ಸೇವಾ ಕಾರ್ಯಗಳನ್ನು ಮಾಡುತ್ತಿದ್ದಾರೆ. ಇದನ್ನು ಪರಿಗಣಿಸಿ ಬಸವ ಧರ್ಮ ಪೀಠದಿಂದ “ಬಸವಾತ್ಮಜೆ” ಪ್ರಶಸ್ತಿ ನೀಡಲಾಗಿದೆ.
ಶರಣಮೇಳದಲ್ಲಿ ಬಸವಧರ್ಮ ಪೀಠದ ಜಗದ್ಗುರು ಮಾತೆ ಗಂಗಾದೇವಿ, ಸಾಣೆಹಳ್ಳಿ ಸಿರಿಗೆರೆ ಮಠದ ಪಂಡಿತಾರಾಧ್ಯ ಶಿವಾಚಾರ್ಯರು, ಕೂಡಲಸಂಗಮ ಬಸವಧರ್ಮ ಪೀಠದ ಮಾದೇಶ್ವರ ಸ್ವಾಮೀಜಿ, ಮಾಜಿ ಸಚಿವ ಈಶ್ವರಪ್ಪ, ಡಾ.ಎಂ.ಎಸ್.ಜಾಮದಾರ, ಚಿತ್ರನಟ ವಿಜಯ ರಾಘವೇಂದ್ರ ಮತ್ತಿತರರು ಇದ್ದರು.
ಇದನ್ನೂ ಓದಿ | Vivekananda Jayanti | ಸರ್ಕಾರಿ ಶಾಲೆಗಳನ್ನು ದತ್ತು ಪಡೆಯುವ ವಿಸ್ತಾರ ನ್ಯೂಸ್ ಅಭಿಯಾನ ಶ್ಲಾಘನೀಯ: ಶಿಕ್ಷಣ ಸಚಿವ ಬಿ.ಸಿ. ನಾಗೇಶ್