ಗಂಗಾವತಿ: ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಪ್ರಮುಖ ಧಾರ್ಮಿಕ ತಾಣ ಅಂಜನಾದ್ರಿ ದೇಗುಲದ ಕಾಣಿಕೆ ಹುಂಡಿ ಎಣಿಕೆ ಕಾರ್ಯ ಮಂಗಳವಾರ ನೂತನ ತಹಸೀಲ್ದಾರ್ ಮಂಜುನಾಥ ಹಿರೇಮಠ ಅವರ ನೇತೃತ್ವದಲ್ಲಿ ನಡೆಯಿತು. 28 ದಿನದಲ್ಲಿ ಕಾಣಿಕೆ ಹುಂಡಿಯಲ್ಲಿ ಒಟ್ಟು 11.79 ಲಕ್ಷ ಮೊತ್ತದ ನಿಧಿ ಸಂಗ್ರಹವಾಗಿದೆ.
ಭಾರತದ ನೆರೆ-ಹೊರೆಯ ದೇಶಗಳಾದ ನೇಪಾಳ, ಬಾಂಗ್ಲಾದ ವಿವಿಧ ಮುಖಬೆಲೆಯ ಮೂರು ನೋಟುಗಳು ಹಾಗೂ ಕುವೈತ್, ಬಾಂಗ್ಲಾ, ನೇಪಾಳದ ವಿವಿಧ ಮೌಲ್ಯದ ಆರು ನಾಣ್ಯಗಳು ಹುಂಡಿ ಎಣಿಕೆಯ ಸಂದರ್ಭದಲ್ಲಿ ಪತ್ತೆಯಾಗಿವೆ.
ಜನವರಿ 31ರಂದು ನಡೆದಿದ್ದ ಎಣಿಕೆ ಸಂದರ್ಭದಲ್ಲಿ 26.22 ಲಕ್ಷ ಮೊತ್ತ ಕಾಣಿಕೆ ಹಣ ಸಂಗ್ರಹವಾಗಿತ್ತು. ಇದೇ ಮೊದಲ ಬಾರಿಗೆ ಆದಾಯದಲ್ಲಿ ಕುಸಿತವಾಗಿದೆ.
ಇದನ್ನೂ ಓದಿ : Kidnaping Case: ಮೈಸೂರಿನಲ್ಲಿ ಉದ್ಯಮಿ ಕಿಡ್ನಾಪ್ ಮಾಡುವುದಕ್ಕೆ ದೇವರಿಗೆ ಹರಕೆ, ಬಂದ ಹಣದಲ್ಲಿ ಹುಂಡಿಗೆ ಕಾಣಿಕೆ!