ಧಾರವಾಡ: ನಗರದ ಹೊರವಲಯದ ಕಮಲಾಪುರ ಬಳಿ ಚಾಲಕನ ನಿಯಂತ್ರಣ ತಪ್ಪಿ ಕೆಎಸ್ಆರ್ಟಿಸಿ ಬಸ್ ರಸ್ತೆ ಪಕ್ಕ ಕಾಲುವೆ ಉರುಳಿದ್ದು, ಅದೃಷ್ಟವಶಾತ್ ಯಾವುದೇ ಜೀವ ಹಾನಿ ಸಂಭವಿಸಿಲ್ಲ.
ಧಾರವಾಡದಿಂದ ಉಪ್ಪಿನ ಬೆಟಗೇರಿಗೆ ಹೊರಟಿದ್ದ ಸಾರಿಗೆ ಬಸ್ ಏಕಾಏಕಿ ರಸ್ತೆ ಪಕ್ಕ ಕಾಲುವೆಗೆ ಇಳಿದಿದ್ದರಿಂದ ಒಂದು ಕಡೆ ಬಾಗಿದೆ. ಇದರಿಂದ ಗಾಬರಿಗೊಂಡ ಪ್ರಯಾಣಿಕರು ಬಾಗಿಲು ತೆರೆಯಲು ಆಗದೆ ಕಿಟಿಕಿಯಿಂದ ಹಾರಿ ಹೊರಬಂದಿದ್ದಾರೆ.
ರಸ್ತೆ ಪಕ್ಕ ಬಸ್ ಇಳಿದಿದ್ದು, ಆ ಸ್ಥಳದಲ್ಲೇ ವಿದ್ಯುತ್ ಕಂಬವೊಂದು ಇತ್ತು. ಸ್ವಲ್ಪದರಲ್ಲೇ ಅದರಿಂದ ತಪ್ಪಿಸಿಕೊಂಡಿದ್ದು ಆಗುತ್ತಿದ್ದ ಭಾರಿ ಅನಾಹುತವೊಂದು ತಪ್ಪಿದಂತಾಗಿದೆ. ಸದ್ಯ ಬಸ್ನಲ್ಲಿದ್ದ 30 ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ನಡೆದಿದೆ.
ಇದನ್ನೂ ಓದಿ | ಪರಪ್ಪನ ಅಗ್ರಹಾರ ಜೈಲಿಗೆ ಇನ್ನು ಪಾರ್ಸೆಲ್ ಕಳುಹಿಸುವಂತಿಲ್ಲ: ಹೊಸ ನಿಯಮ ಜಾರಿ