Site icon Vistara News

Chikkamagaluru News | ವೈದ್ಯರ ನಿರ್ಲಕ್ಷ್ಯಕ್ಕೆ ಲಕ್ಷಾಂತರ ರೂ. ಮೌಲ್ಯದ 6 ಎತ್ತುಗಳ ಸಾವು: ಸ್ಥಳೀಯರಿಂದ ಪ್ರತಿಭಟನೆ

Veterinary Hospital The death of bullocks protest

ಚಿಕ್ಕಮಗಳೂರು: ಜಿಲ್ಲೆಯ ತರೀಕೆರೆ ತಾಲೂಕಿನ ಲಿಂಗದಹಳ್ಳಿಯಲ್ಲಿ ವೈದ್ಯರ ನಿರ್ಲಕ್ಷ್ಯದಿಂದಾಗಿ ಲಕ್ಷಾಂತರ ರೂ. ಮೌಲ್ಯದ ಆರು ಎತ್ತುಗಳು ಮೃತಪಟ್ಟಿವೆ. ಪಶು ವೈದ್ಯ ಬಸವರಾಜ್ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿ, ಪಶು ಆಸ್ಪತ್ರೆಯ ಮುಂದೆ ಎತ್ತುಗಳ ಶವಗಳನ್ನಿಟ್ಟು ಪ್ರತಿಭಟನೆ ನಡೆಸಿದರು.

ಉಡೇವಾ ಗ್ರಾಮದ ಶಂಕರ್ ಎಂಬುವರು ತಮ್ಮ ಎತ್ತುಗಳಿಗೆ ಆರೋಗ್ಯ ಸರಿ ಇಲ್ಲವೆಂದು ಪಶು ಆಸ್ಪತ್ರೆಗೆ ಒಯ್ದಿದ್ದರು. ಪಶುವೈದ್ಯ ಬಸವರಾಜ್ ಎತ್ತುಗಳ ತಪಾಸಣೆ ಮಾಡಿ ಗಂಟಲು ಬೇನೆಯಾಗಿದೆ, ಇಂಜೆಕ್ಷನ್‌ ನೀಡುತ್ತೇನೆ ಎಂದು ಹೇಳಿ ಎಲ್ಲ ಎತ್ತುಗಳಿಗೂ ಇಂಜೆಕ್ಷನ್‌ ನೀಡಿದರು.

ವೈದ್ಯರು ಇಂಜೆಕ್ಷನ್ ನೀಡಿದ ಮರುದಿನವೇ ಆರು ಎತ್ತುಗಳು ಮೃತಪಟ್ಟಿವೆ. ಇದರಿಂದ ಆಕ್ರೋಶಗೊಂಡ ಸ್ಥಳೀಯರು ಪಶು ಆಸ್ಪತ್ರೆಯ ಮುಂದೆ ಎತ್ತುಗಳ ಶವಗಳನ್ನಿಟ್ಟು ಪ್ರತಿಭಟನೆ ನಡೆಸಿ ಸೂಕ್ತ ನ್ಯಾಯ ಒದಗಿಸುವಂತೆ ಆಗ್ರಹಿಸಿದರು.

ಇದನ್ನೂ ಓದಿ | Murugha seer case | ಶ್ರೀಗಳ ವಿರುದ್ಧ ಸುಳ್ಳು ಕೇಸಿಗೆ ಪಿತೂರಿ ಆರೋಪ: ಎಸ್‌.ಕೆ. ಬಸವರಾಜನ್‌ಗೆ ಹೈಕೋರ್ಟ್‌ ಜಾಮೀನು

Exit mobile version