Site icon Vistara News

Traffic Fine: ಶೇ.50 ಡಿಸ್ಕೌಂಟ್‌ನೊಂದಿಗೆ ಟ್ರಾಫಿಕ್ ದಂಡ ಕಟ್ಟಲು ಸೆ.9 ಕೊನೆಯ ದಿನ

traffic police

ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆಯ ಬಾಕಿ ದಂಡವನ್ನು ಶೇ.50 ರಿಯಾಯಿತಿಯೊಂದಿಗೆ ಪಾವತಿಸಲು ಸೆ.9 ಕೊನೆಯ ದಿನವಾಗಿದೆ. ಈ ಹಿಂದೆ ರಾಜ್ಯಾಂದ್ಯಂತ ಬಾಕಿ ದಂಡ ಪಾವತಿಸಲು ಸವಾರರಿಗೆ ಸಂಚಾರ ಪೊಲೀಸ್‌ ವಿಭಾಗವು, ಎರಡು ಬಾರಿ ಶೇ.50 ರಿಯಾಯಿತಿ ಘೋಷಿಸಿತ್ತು. ಇದಾದ ನಂತರ ಮತ್ತೊಮ್ಮೆ ಅರ್ಧದಷ್ಟು ರಿಯಾಯಿತಿಯೊಂದಿಗೆ ಜುಲ್ಮಾನೆ (Traffic Fine) ಕಟ್ಟಲು ಜುಲೈ 6ರಿಂದ ಅನುಮತಿ ನೀಡಲಾಗಿತ್ತು. ಇದರಿಂದ ಎರಡೂವರೆ ತಿಂಗಳಲ್ಲಿ ಭಾರಿ ಮೊತ್ತದ ಹಣ ಸಂಗ್ರಹವಾಗಿರುವುದೆ.

ಜುಲೈ 6ರಿಂದ ಈವರೆಗೆ 2,53,519 ಪ್ರಕರಣಗಳಲ್ಲಿ 8.7 ಕೋಟಿ ರೂಪಾಯಿ ದಂಡ ಸಂಗ್ರಹವಾಗಿದೆ. ಶೇ.50 ರಿಯಾಯಿತಿಯೊಂದಿಗೆ ಪಾವತಿಸಲು ಸೆ.9 ಕೊನೆಯ ದಿನವಾಗಿದ್ದು, ನಂತರ ಪೂರ್ಣ ಪ್ರಮಾಣದಲ್ಲಿ ಸವಾರರು ದಂಡ ಪಾವತಿಸಬೇಕಾಗುತ್ತದೆ. ಫೆಬ್ರವರಿ 11ರೊಳಗಿನ ಪ್ರಕರಣಗಳಿಗೆ ಮಾತ್ರ ಶೇ.50 ರಿಯಾಯಿತಿ ಅನ್ವಯವಾಗಲಿದೆ.

ರಾಜ್ಯಾದ್ಯಂತ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ್ದ ವಾಹನ ಸವಾರರಿಗೆ ಸರ್ಕಾರ ದಂಡ ಪಾವತಿ ಮಾಡಲು ಈ ಹಿಂದೆ ಎರಡು ಬಾರಿ ರಿಯಾಯಿತಿ ನೀಡಿತ್ತು. ರಾಜ್ಯ ಹೈಕೋರ್ಟ್‌ನ ನ್ಯಾಯಮೂರ್ತಿಗಳಾಗಿದ್ದ ವೀರಪ್ಪ ಗೌಡ (Justice Veerappa gowda) ಅವರ ಸಲಹೆಯ ಮೇರೆಗೆ ಸರ್ಕಾರ ಮಾಡಿದ್ದ ಈ ಕ್ರಮದಿಂದ ಬಹುತೇಕ ಜನರು ತಮ್ಮ ಹಳೆ ಬಾಕಿಗಳನ್ನು ತೀರಿಸಿ ನಿರಾಳರಾಗಿದ್ದರು. ರಾಜ್ಯದ ಬೊಕ್ಕಸಕ್ಕೆ 120 ಕೋಟಿ ರೂ. ಜಮಾ ಆಗಿತ್ತು. ಅಷ್ಟಾದರೂ ಇನ್ನೂ ಲಕ್ಷಾಂತರ ಕೇಸ್ ಗಳು ಹಾಗೂ ಕೋಟ್ಯಂತರ ರೂ. ದಂಡ ಬಾಕಿ ಇದ್ದ ಹಿನ್ನೆಲೆಯಲ್ಲಿ ಸರ್ಕಾರ ಮತ್ತೆ ಜುಲೈ 6ರಿಂದ ರಿಯಾಯಿತಿಯನ್ನು ಪ್ರಕಟಿಸಿತ್ತು.

ಇದನ್ನೂ ಓದಿ | Cauvery Water Dispute: ತಮಿಳುನಾಡಿಗೆ ನೀರು ನಿಲ್ಲಿಸದಿದ್ರೆ, ಸೆ.12ರ ನಂತರ ಕಾವೇರಿ ರಕ್ಷಣಾ ಯಾತ್ರೆ: ಬಸವರಾಜ ಬೊಮ್ಮಾಯಿ

ಯಾವುದಕ್ಕೆ ಈ ರಿಯಾಯಿತಿ ಅನ್ವಯ?

ಇದರಲ್ಲಿ ಕೇವಲ ಸಿಗ್ನಲ್ ಜಂಪ್, ವಿತೌಟ್ ಹೆಲ್ಮೆಟ್, ಡ್ರಿಂಕ್ ಅಂಡ್ ಡ್ರೈವ್, ನೋ ಪಾರ್ಕಿಂಗ್, ಒನ್ ವೇ ಸೇರಿದಂತೆ ದಂಡ ಪಾವತಿಸಿದರೆ ಇತ್ಯರ್ಥವಾಗುವ ಕೇಸ್‌ಗಳಿಗೆ ಮಾತ್ರ ವಿನಾಯಿತಿ ನೀಡಲಾಗಿದೆ.

Exit mobile version