ಬೆಳಗಾವಿ: ಜಿಲ್ಲೆಯ ಕಿತ್ತೂರು ತಾಲೂಕಿನಲ್ಲಿ ಮಳೆಯಿಂದ ಹಾನಿಗೊಂಡ ಮನೆಗಳ ಸಂಖ್ಯೆ 30ಕ್ಕೇರಿದೆ. ತಾಲೂಕಿನಲ್ಲಿ ಭಾರಿ ಮಳೆಯಿಂದ ಭಾನವಾರದ ವೇಳೆಗೆ ತಾಲೂಕಿನಲ್ಲಿ 20 ಮನೆಗಳಿಗೆ ಹಾನಿಯಾಗಿತ್ತು. ಸೋಮವಾರ ತಿಗಡೊಳ್ಳಿ ಗ್ರಾಮದಲ್ಲಿ ಸೆದೆಪ್ಪ ಕ್ಯಾತನವರ ಮತ್ತು ಮಲ್ಲೇಶಪ್ಪ ಮಲಶೆಟ್ಟಿ ಅವರ ಮನೆಗಳು ಸೇರಿ ತಾಲೂಕಿನ ವಿವಿಧೆಡೆ 10 ಮನೆಗಳಿಗೆ ಹಾನಿಯಾಗಿದೆ.
ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಕಿತ್ತೂರು ಸೇರಿ ತಾಲೂಕಿನ ಕತ್ರಿದಡ್ಡಿ, ದಿಂಡಲಕೊಪ್ಪ, ಗಲಗಿನಮಡಾ, ನಿಚ್ಚಣಕಿ, ದೇಗಾಂವ, ಚಿಕ್ಕನಂದಿಹಳ್ಳಿ, ತಿಗಡೊಳ್ಳಿ ಹಾಗೂ ಬೈಲೂರು ಗ್ರಾಮಗಳಲ್ಲಿ 20 ಮನೆಗಳು, ಮನೆ ಗೋಡೆಗಳು ಭಾಗಶಃ ಕುಸಿದಿವೆ. ಕತ್ರಿದಡ್ಡಿಯ ಬಸವರಾಜ ಕುರಬರ, ತುಳಜಾ ಹಟ್ಟಿಹೊಳಿ, ದಿಂಡಲಕೊಪ್ಪದಲ್ಲಿ ಬಂಗಾರೆವ್ವ ಎಮ್ಮಿ, ಲಕ್ಷ್ಮಿ ಬೆಣಚಮರಡಿ, ಗಲಗಿನಮಡದಲ್ಲಿ ಪರಶುರಾಮ ಬೂದಿಹಾಳ, ಯಲ್ಲವ್ವ ಬುಡ್ಡಾಗೋಳ ಮತ್ತು ಮಲವ್ವ ಸಣ್ಣನಾಯ್ಕರ ಮನೆ ಗೋಡೆಗಳು ಕುಸಿದಿವೆ.
ಹಲವೆಡೆ ಮನೆ ಗೋಡೆ ಕುಸಿದಿರುವುದರಿಂದ ಪ್ಲಾಸ್ಟಿಕ್ ಚೀಲ ಕಟ್ಟಿಕೊಂಡು ಜನರು ಜೀವನ ಸಾಗಿಸುತ್ತಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಘಟನಾ ಸ್ಥಳಗಳಿಗೆ ಕಿತ್ತೂರು ಕಂದಾಯ ಇಲಾಖೆ ಅಧಿಕಾರಿಗಳು, ಗ್ರಾಪಂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮಳೆ ಕುರಿತ ಇಂದಿನ ಅಪ್ಡೇಟ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
೧. Rain News | ಮುಂದುವರಿದ ಮಳೆಯ ಪಿರಿಪಿರಿ, ರೈತರಿಗೆ ಮುಳುವಾದ ಎತ್ತಿನಹೊಳೆ ಕಾಮಗಾರಿ
೨. ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ವರುಣಾರ್ಭಟ, ಜುಲೈ 15ರವರೆಗೆ ಭಾರಿ ಮಳೆ ಸಾಧ್ಯತೆ
೩. Rain News | ಜೋಯಿಡಾದ ಅಣಶಿ ಘಟ್ಟದಲ್ಲಿ ಮತ್ತೆ ಭೂಕುಸಿತ, ಪರ್ಯಾಯ ಮಾರ್ಗ ಬಳಸಲು ಸೂಚನೆ
೪. Rain News | ಹಾಸನದ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಮತ್ತೆ ಭೂಕುಸಿತ; ವಾಹನ ಸಂಚಾರಕ್ಕೆ ಅಡಚಣೆ