Site icon Vistara News

Lingayat Samavesh: ಮತ್ತೆ ಮುನ್ನೆಲೆಗೆ ಬಂದ‌ ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟ; ಫೆ.26ಕ್ಕೆ ಸಾಣೆಹಳ್ಳಿ ಮಠದಲ್ಲಿ ಸಮಾವೇಶ

Lingayat Samavesh lingayath-politics-congress lingayath leaders meeting

#image_title

ಬೆಂಗಳೂರು: ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟ ಮತ್ತೆ ಮುನ್ನೆಲೆಗೆ ಬಂದಿದೆ. ಬಸವಾದಿ ಶರಣರ ಅನುಯಾಯಿಗಳು ಸಾಂವಿಧಾನಿಕ ಹೋರಾಟಕ್ಕೆ ಸಜ್ಜಾಗಿದ್ದು, ಲಿಂಗಾಯತ ಧರ್ಮದ ಕುರಿತು ಜಾಗೃತಿ ಮೂಡಿಸಲು ಫೆ.26ರಂದು ಚಿತ್ರದುರ್ಗ ಜಿಲ್ಲೆ ಸಾಣೆಹಳ್ಳಿ ಮಠದ ಆವರಣದಲ್ಲಿ ಡಾ. ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ಲಿಂಗಾಯತ ಧರ್ಮ ಸಮಾವೇಶ-2023 (Lingayat Samavesh) ಅನ್ನು ಆಯೋಜಿಸಲಾಗಿದೆ.

ಬೆಂಗಳೂರಿನ ರಾಷ್ಟ್ರೀಯ ಬಸವ ಪ್ರತಿಷ್ಠಾನ ಹಾಗೂ ರಾಷ್ಟ್ರೀಯ ಬಸವ ತತ್ವ ಪರಿಷತ್‌ ವತಿಯಿಂದ ಆಯೋಜಿಸಿರುವ ಒಂದು ದಿನದ ಸಮಾವೇಶ ಪೆ.26ರಂದು ಬೆಳಗ್ಗೆ 8ರಿಂದ ಸಂಜೆ 5ರವರೆಗೆ ನಡೆಯಲಿದೆ. ಸಮಾವೇಶದಲ್ಲಿ ಎರಡು ಗೋಷ್ಠಿ ನಡೆಯಲಿವೆ. ಗೋಷ್ಠಿಗೂ ಮುನ್ನ ಇಷ್ಟಲಿಂಗ ದೀಕ್ಷೆ ಹಾಗೂ ಸಾಮೂಹಿಕ ಲಿಂಗಪೂಜೆ ನಡೆಯಲಿದೆ. ಈ ಹಿಂದೆ ಪ್ರತ್ಯೇಕ ಲಿಂಗಾಯತ ಧರ್ಮಕ್ಕಾಗಿ ಹೋರಾಡಿದ ಮುಖಂಡರು, ಶರಣರು ಭಾಗಿಯಾಗಲಿದ್ದಾರೆ.

ಲಿಂಗಾಯತ ಧರ್ಮ ಜಾತಿಯಲ್ಲ, ಅದು ಸ್ವತಂತ್ರ ಧರ್ಮ. ಬಸವಣ್ಣ ಧರ್ಮ ಗುರುವಾಗಿದ್ದಾರೆ. ಲಿಂಗಾಯತ ಧರ್ಮ ಅಲ್ಪಸಂಖ್ಯಾತವಾದುದು. ಕರ್ನಾಟಕದಲ್ಲಿ ಹುಟ್ಟಿದ ಧರ್ಮವೇ ಲಿಂಗಾಯತ ಧರ್ಮವಾಗಿದೆ ಎಂದು ಪ್ರತಿಪಾದಿಸಿರುವ ಆಯೋಜಕರು, ಲಿಂಗಾಯತ ಧರ್ಮ ಒಪ್ಪಿ ಬರುವ ಆಸಕ್ತರ ನೋಂದಣಿಗೆ ಮುಂದಾಗಿದ್ದಾರೆ. ಸಮಾವೇಶದಲ್ಲಿ ಕಾನೂನು ಹೋರಾಟದ ಬಗ್ಗೆ ಚರ್ಚೆ ಮಾಡಲಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ | Vishnuvardhan : ವಿಷ್ಣುವರ್ಧನ್‌ಗೆ ಕರ್ನಾಟಕ ರತ್ನ ಪ್ರಶಸ್ತಿ: ಸಿಎಂ ಬಸವರಾಜ ಬೊಮ್ಮಾಯಿ ಸಕಾರಾತ್ಮಕ ಸ್ಪಂದನೆ

ವಚನ ಸಾಹಿತ್ಯ ಧರ್ಮ‌ ಗ್ರಂಥ ಮೂರು ಅಂಶ ಒಪ್ಪಿ ಬರುವವರಿಗೆ ಸಮಾವೇಶಕ್ಕೆ ಆಯೋಜಕರು ಆಹ್ವಾನ ನೀಡಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ, ಬಿ.ಎಸ್.ಯಡಿಯೂರಪ್ಪ, ಮಾಜಿ ಸಚಿವರಾದ ಎಂ.ಬಿ. ಪಾಟೀಲ್, ಬಸವರಾಜ್ ಹೊರಟ್ಟಿ ಮತ್ತಿತರರಿಗೆ ಪಕ್ಷಾತೀತವಾಗಿ ಆಹ್ವಾನ ನೀಡಲಾಗಿದೆ. ಬೃಹತ್ ಸಮಾವೇಶದಲ್ಲಿ 20 ಸಾವಿರಕ್ಕೂ ಹೆಚ್ಚು ಜನ ಭಾಗವಹಿಸುವ ನಿರೀಕ್ಷೆ ಇದೆ.

Exit mobile version