ಹಾಸನ: ರಾಜ್ಯಾದ್ಯಂತ ಜೂನ್ 24 ರಿಂದ ಒಂದು ಸಾವಿರ ಇವಿ ವಿದ್ಯುತ್ ಚಾರ್ಜಿಂಗ್ ಸೆಂಟರ್ ಆರಂಭದ ಅಭಿಯಾನ ಶುರುವಾಗಲಿದೆ ಎಂದು ಇಂಧನ ಸಚಿವ ವಿ ಸುನಿಲ್ ಕುಮಾರ್ ತಿಳಿಸಿದ್ದಾರೆ.
ʼʼರಾಜ್ಯದ ಎಲ್ಲ ಜಿಲ್ಲಾ ಕೇಂದ್ರ, ಪ್ರವಾಸಿ ತಾಣ, ಹೆದ್ದಾರಿ ಮತ್ತು ಸರಕಾರಿ ಕಚೇರಿ ಆವರಣದಲ್ಲಿ ಜೂನ್‌ನೊಳಗೆ ಸಾವಿರ ವಿದ್ಯುತ್ ಚಾರ್ಜಿಂಗ್ ಸೆಂಟರ್ ಮತ್ತು ಮೂರೂವರೆ ಸಾವಿರ ಪ್ಲಗ್ ಅಳವಡಿಸುವ ಅಭಿಯಾನ ಶುರುವಾಗಲಿದೆ. ದೇಶದಲ್ಲಿ ಅತಿ ಹೆಚ್ಚು ಇವಿ ವಿದ್ಯುತ್ ಚಾರ್ಜಿಂಗ್ ಸೆಂಟರ್ ಹೊಂದಿರುವ ರಾಜ್ಯವಾಗಿ ಕರ್ನಾಟಕ ಇರಬೇಕು ಎಂಬ ನಿಟ್ಟಿನಲ್ಲಿ ಯೋಜನೆ ಹಾಕಿಕೊಂಡಿದ್ದೇವೆʼʼ ಎಂದು ಸಚಿವರು ಹೇಳಿದರು.
ಪಠ್ಯ ಪುಸ್ತಕ ವಿವಾದದ ಬಗ್ಗೆ ಹೇಳಿದ್ದೇನು?
ʼʼಪಠ್ಯ ಪುಕ್ತದ ವಿಚಾರದಲ್ಲಿ ಕಾಂಗ್ರೆಸ್ ಹಾಗೂ ಉಳಿದವರು ಅನಗತ್ಯವಾಗಿ ವಿವಾದ ಹುಟ್ಟು ಹಾಕುತ್ತಿದ್ದಾರೆ. ಸಿಎಂ ಮುಕ್ತ ಮನಸ್ಸಿನಿಂದ ಈ ಬಗ್ಗೆ ಮಾತನಾಡಿದ್ದಾರೆ. ಕೆಲವು ಸತ್ಯ ಸಂಗತಿಗಳು ಕೆಲವರಿಗೆ ಕಹಿಯಾಗಿ ಕಾಣುತ್ತವೆ. ಅದಕ್ಕೆ ನಾವು ಏನೂ ಮಾಡಲಾಗದು. ಸತ್ಯ ಮುಚ್ಚಿಡಲು ಸಾಧ್ಯವಿಲ್ಲ, ಯಾವ ಸತ್ಯ ಸಂಗತಿಗಳನ್ನು ಇತಿಹಾಸದಲ್ಲಿ ಮುಚ್ಚಿಡಲಾಗಿತ್ತೊ ಅದನ್ನ ತಿಳಿಸುವ ಪ್ರಯತ್ನವನ್ನು ನಾವು ಮಾಡಿದ್ದೇವೆʼʼ ಎಂದರು.
ಇದನ್ನೂ ಓದಿ| Fast Charging, ದೀರ್ಘ ಬಾಳಿಕೆ ಬ್ಯಾಟರಿಗಳ ಆವಿಷ್ಕಾರ: IISc ಮಹತ್ವದ ಶೋಧ
ʼʼಕೆಲವು ಸಾಲುಗಳಲ್ಲಿ ಲೋಪದೋಷ ಆಗಿರಬಹುದು. ಅದನ್ನ ಸರಿಮಾಡಿಕೊಳ್ಳಲು ಸಿಎಂ ಹೇಳಿದ್ದಾರೆ.
ರಾಜ್ಯದಲ್ಲಿ ಒಳ್ಳೆಯ ಸರ್ಕಾರದ ಆಡಳಿತ ನಡೆಯುತ್ತಿದೆ. ಇಂತಹ ವೇಳೆಯಲ್ಲಿ ಆಡಳಿತದ ಮೇಲೆ ಜನರ ಲಕ್ಷ್ಯ ದೂರಮಾಡಿ ವಿವಾದದ ಮೂಲಕ ತಮ್ಮ ಇರುವಿಕೆ ತೋರಿಸಲು ಕೆಲವರು ಹೊರಟಿದ್ದಾರೆʼʼ ಎಂದವರು ಟೀಕೆ ಮಾಡಿದರು.
ʼʼಇದು ಬಹಳ ದಿನ ನಡೆಯಲು ಸಾದ್ಯವಿಲ್ಲ, ನಾವು ಬಜೆಟ್‌ನಲ್ಲಿ ಘೋಷಣೆ ಮಾಡಿದ ವಿಚಾರಗಳು ಸರ್ಕಾರಿ ಆದೇಶವಾಗಿ ಬರುತ್ತಿವೆ. ಇದು ಜನರ ಮನಸ್ಸಿನಲ್ಲಿ ಇರುವ ಭಾವನೆಯಾಗಿದೆ. ಜನರ ಭಾವನೆ ದೂರ ಮಾಡಲು ಕಾಂಗ್ರೆಸ್ ಯತ್ನಿಸುತ್ತಿದೆʼʼ ಎಂದು ಸಚಿವ ಸುನಿಲ್ ಕುಮಾರ್ ಹೇಳಿದರು.
ಇದನ್ನೂ ಓದಿ| ರಾಜ್ಯದಲ್ಲಿ ಕಲ್ಲಿದ್ದಲು ಕೊರತೆಯಿಲ್ಲ: ಸಚಿವ ಸುನೀಲ್‌ಕುಮಾರ್