Site icon Vistara News

Theerthahalli News: ಮೇಲಿನ ಕುರುವಳ್ಳಿ ಗ್ರಾಪಂ ಅಧ್ಯಕ್ಷರ ವಿರುದ್ಧ ಗ್ರಾಮಸ್ಥರ ಬೃಹತ್ ಪ್ರತಿಭಟನೆ

Theerthahalli Melina Kuruvalli protest

#image_title

ತೀರ್ಥಹಳ್ಳಿ: ತಾಲೂಕಿನ ಮೇಲಿನ ಕುರುವಳ್ಳಿ (Theerthahalli News) ಗ್ರಾಮ ಪಂಚಾಯಿತಿ ಅಧ್ಯಕ್ಷರ ವಿರುದ್ಧ ಗ್ರಾಮಸ್ಥರು ಮಂಗಳವಾರ (ಫೆ.೧೪) ಬೆಳಗ್ಗೆಯಿಂದ ಅಹೋರಾತ್ರಿ ಪ್ರತಿಭಟನೆಯನ್ನು ನಡೆಸಿದ್ದಾರೆ.

ಅಧ್ಯಕ್ಷೆ ಭವ್ಯ ರಾಘವೇಂದ್ರ, ಕಳೆದ ವರ್ಷದ ಮೇ ತಿಂಗಳಿನಿಂದ ಇಲ್ಲಿಯವರೆಗೆ ಸಮರ್ಪಕವಾಗಿ ಕಾರ್ಯನಿರ್ವಹಿಸದೆ ಬೇಜವಾಬ್ದಾರಿಯಿಂದ ನುಣುಚಿಕೊಂಡಿರುವುದಲ್ಲದೇ ಜನ ಪರವಾಗಿ ಕಾರ್ಯ ನಿರ್ವಹಿಸುತ್ತಿರುವ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸರಿತಾ ವಿರುದ್ಧ ಕಾನೂನು ಬಾಹಿರವಾದ ಆರೋಪ ಮಾಡುತ್ತಾ ಜನತೆಯ ಹಿತಾಸಕ್ತಿಯನ್ನು ಕಡೆಗಣಿಸಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎಚ್.ವಿ. ಅನಿಲ್, “ಅಧ್ಯಕ್ಷರು ಸಂಪೂರ್ಣ ಸ್ವಹಿತಾಸಕ್ತಿಗೆ ಒಳಗಾಗಿದ್ದಾರೆ. ಪಿಡಿಒ ಸಮರ್ಪಕವಾಗಿ ಕಾರ್ಯ ನಿರ್ವಹಿಸಿಲ್ಲ ಎಂದರೆ ಸಾಮಾನ್ಯ ಸಭೆ ನಡೆಸಿ ಅವರ ವಿರುದ್ಧ ಜನಾಭಿಪ್ರಾಯ ಸಂಗ್ರಹಿಸಬಹುದಾಗಿತ್ತು. ಅಲ್ಲದೆ, ಸೇವಾ ನಿಯಮ ಉಲ್ಲಂಘನೆಯಾಗಿದ್ದರೆ ಕಾನೂನು ಬದ್ಧವಾಗಿಯೇ ಕ್ರಮ ಕೈಗೊಳ್ಳಲು ಬೇಕಾದಷ್ಟು ದಾರಿಗಳಿವೆ. ಅವರು ಪೂರ್ವಗ್ರಹ ಪೀಡಿತವಲ್ಲದಿದ್ದರೆ ಇಂದಿನ ಪ್ರತಿಭಟನಾ ಸಭೆಯಲ್ಲಿ ಸಾರ್ವಜನಿಕರ ಎದುರು ನಿಂತು ಉತ್ತರಿಸುವ ಮೂಲಕ ಸತ್ಯವೇನೆಂದು ತಿಳಿಸಬೇಕಾಗಿತ್ತು. ಆದರೆ, ಕೇವಲ ಇಬ್ಬರು ಸದಸ್ಯರ ಹಿತಾಸಕ್ತಿಗಾಗಿ ಪಂಚಾಯಿತಿ ವ್ಯವಸ್ಥೆಯನ್ನು ಬಲಿಕೊಟ್ಟಿದ್ದಾರೆ. ಇದು ಖಂಡನೀಯ. ಸಂಬಂಧಪಟ್ಟ ಅಧಿಕಾರಿಗಳು ಇವರ ವಿರುದ್ಧ ಕ್ರಮ ಜರುಗಿಸಬೇಕು” ಎಂದು ಹೇಳಿದ್ದಾರೆ.

ಇದನ್ನೂ ಓದಿ: Jacqueline Fernandez: ಜಾಕ್ವೆಲಿನ್‌ಗೆ ವ್ಯಾಲೆಂಟೈನ್ಸ್​ ವಿಶ್ ಮಾಡಿದ ವಂಚಕ ಸುಕೇಶ್‌ ಚಂದ್ರಶೇಖರ್! 

ಗ್ರಾಮ ಪಂಚಾಯಿತಿ ಸದಸ್ಯ ಅಣ್ಣಪ್ಪ ಮಾತನಾಡಿ, “ಹಲವಾರು ತಿಂಗಳಿನಿಂದ ಅಧ್ಯಕ್ಷರು ಯಾವುದೇ ಕಡತ ಹಾಗೂ ಬಿಲ್ಲುಗಳಿಗೆ ಸಹಿ ಮಾಡದೆ ಜನ ಹಾಗೂ ಸಿಬ್ಬಂದಿಗಳ ಆಕ್ರೋಶವನ್ನು ಪಿಡಿಒ ಮೇಲೆ ತಿರುಗಿಸುವಂತ ತಂತ್ರ ಮಾಡುತ್ತಿದ್ದಾರೆ. ಗ್ರಾಮ ಸಭೆ ಹಾಗೂ ಸಾಮಾನ್ಯ ಸಭೆ ಕರೆಯದೆ ಜನತೆಯು ಬವಣೆ ಪಡುತ್ತಿದ್ದಾರೆ. ವರ್ಗ 1, 15ನೇ ಹಣಕಾಸು, ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ, ಕುಡಿಯುವ ನೀರು ಪೂರೈಕೆ, ಬೀದಿ ದೀಪ ನಿರ್ವಹಣೆಗೆ ಕ್ರಿಯಾ ಯೋಜನೆ ಸಿದ್ಧವಾಗದ ಕಾರಣ ಅನುಷ್ಠಾನಗೊಂಡಿಲ್ಲ. ಇದಕ್ಕೆ ನೇರ ಹೊಣೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿದ್ದಾರೆ. ಅಧಿಕಾರ ದುರುಪಯೋಗವಾದ ಕಾರಣ ಇವರನ್ನು ವಜಾಗೊಳಿಸಬೇಕು” ಎಂದು ಆಗ್ರಹಿಸಿದರು.

ಇದನ್ನೂ ಓದಿ: Actress Samantha : ಪತಿಯಿಂದ ದೂರವಾಗಿರುವ ಸಮಂತಾಗೆ ಬಂತು ಪ್ರೇಮಿಗಳ ದಿನದ ಗಿಫ್ಟ್! ಯಾರು ಕಳುಹಿಸಿದ್ದು?

ಗ್ರಾಮ ಪಂಚಾಯಿತಿ ಸದಸ್ಯೆ ಸುಧಾ ಕೃಷ್ಣಕುಮಾರ್ ಮಾತನಾಡಿ, “ಅಧ್ಯಕ್ಷರ ಅಧಕ್ಷ ಆಡಳಿತ ಫಲವಾಗಿ ಚುನಾಯಿತ ಸದಸ್ಯರು ಗ್ರಾಮಗಳಲ್ಲಿ ಜನರಿಂದ ತಪ್ಪಿಸಿಕೊಂಡು ಹೋಗುವ ಸನ್ನಿವೇಶ ಸೃಷ್ಟಿಯಾಗಿದೆ. ಕಾರಣ ಯಾವುದೇ ಸಭೆಗಳು ನಡೆಯುತ್ತಿಲ್ಲ. ಇದರಿಂದ ಜನತೆಯ ಸಣ್ಣಪುಟ್ಟ ಅರ್ಜಿಗಳು ವಿಲೇವಾರಿ ಮಾಡುತ್ತಿಲ್ಲ. ಕುಡಿಯುವ ನೀರಿನ ಸಮಸ್ಯೆ ಗ್ರಾಮದ ವ್ಯಾಪ್ತಿಯಲ್ಲಿ ತಾಂಡವವಾಡುತ್ತಿದೆ. ಬೀದಿ ದೀಪ ಕೆಟ್ಟು ನಿಲ್ಲುತ್ತಿದೆ. ಆದರೆ ಪ್ರತಿಯೊಂದು ಸಭೆಯ ಆರಂಭದಲ್ಲಿ ಜನತೆಯ ಸಮಸ್ಯೆಗಳ ಕುರಿತು ಮಾತನಾಡುವುದನ್ನು ಬಿಟ್ಟು ಪಿಡಿಒ ಇಲ್ಲಿಂದ ವರ್ಗಾವಣೆಯಾಗದ ಹೊರತು ತಾವು ಯಾವುದೇ ಕಡತಗಳಿಗೆ ಸಹಿ ಹಾಕುವುದಿಲ್ಲ ಎನ್ನುತ್ತಾರೆ” ಎಂದು ಆರೋಪಿಸಿದರು.

ಇದನ್ನೂ ಓದಿ: Chetan Sharma: ಟಿ20ಯಲ್ಲಿ ರೋಹಿತ್‌, ಕೊಹ್ಲಿ ಆಟ ಮುಗಿದಿದೆ; ಚೇತನ್​ ಶರ್ಮಾ

ತಾಲೂಕು ಯುವ ಜೆಡಿಎಸ್ ಅಧ್ಯಕ್ಷ ತಲಬಿ ರಾಘವೇಂದ್ರ ಮಾತನಾಡಿ, “ಮೇಲಿನ ಕುರುವಳ್ಳಿ ಗ್ರಾಮ ಪಂಚಾಯಿತಿ ಟಿ.ಎಸ್. ರಾಮೇಗೌಡ, ಮುನ್ನೂರು ಜಗನ್ನಾಥ ಪೂಜಾರಿ, ಕುರುವಳ್ಳಿ ಅನಿಲ್ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾಗ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿತ್ತು. ಆದರೆ ಈಗ ಜನ ದಂಗೆ ಏಳುವಂತಹ ಸ್ಥಿತಿ ನಿರ್ಮಾಣವಾಗಿರುವುದು ವಿಷಾದನೀಯ. ಪಂಚಾಯಿತಿಯ ಇಂದಿನ ದುಸ್ಥಿತಿಗೆ ಕೆಲವೇ ಸದಸ್ಯರು ಕಾರಣವಾಗುತ್ತಿರುವುದು ಎಲ್ಲರಿಗೂ ಗೊತ್ತಾಗುತ್ತಿದೆ. ಹುಣಸವಳ್ಳಿಯಲ್ಲಿ ಸದಸ್ಯರೊಬ್ಬರ ಚಿತಾವಣೆ ಮೇರೆಗೆ ಅಕ್ರಮ ಮರಳು ದಂಧೆ ನಿರಾತಂಕವಾಗಿ ನಡೆಯುತ್ತಿದೆ. ಒಂದೇ ಹಕ್ಕುಪತ್ರ ತೋರಿಸಿ ಎಕರೆಗಟ್ಟಲೆ ಬೆಲೆ ಬಾಳುವ ಸರ್ಕಾರಿ ಜಾಗವನ್ನು ಬೇಲಿ ಸುತ್ತಿ ಮಾರಾಟ ಮಾಡಲಾಗುತ್ತಿದೆ” ಎಂದು ಹೇಳಿದರು.

ಇದನ್ನೂ ಓದಿ: Karnataka Election: ನಾನು ಪ್ರಚಾರಕ್ಕೆ ಬಳಸಲು ಜನರಿಂದ ಹಣ ಕೇಳಿದ್ದೇನೆ: ಸುನೀಲ್‌ ಕುಮಾರ್‌ಗೆ ಮುತಾಲಿಕ್‌ ತಿರುಗೇಟು

ಮಹಿಳಾ ಮುಖಂಡರಾದ ಪವಿತ್ರ ಮಾತನಾಡಿ, “ಹಿಂದಿನ ಪಿಡಿಒ ಇದ್ದಾಗ ನಮ್ಮ ಮನೆಯ ನಲ್ಲಿ ನೀರಿನ ಸಂಪರ್ಕಕ್ಕಾಗಿ ಶಾಸಕರಾದ ಆರಗ ಜ್ಞಾನೇಂದ್ರ ಅವರ ಹತ್ತಿರ ಹೋಗಬೇಕಾದ ಪರಿಸ್ಥಿತಿ ಇತ್ತು. ಆದರೆ ಈಗಿನ ಪಿಡಿಒ ಕಾನೂನು ಬದ್ಧವಾದ ಯಾವುದೇ ಕೆಲಸವನ್ನೂ ಸ್ವಲ್ಪವೂ ವಿಳಂಬ ಮಾಡದೆ ಮಾಡುತ್ತಿದ್ದಾರೆ. ಅವರ ಮೇಲೆ ಕೆಲವರು ಮಾಡುತ್ತಿರುವ ಆರೋಪ ಸಂಪೂರ್ಣ ಸ್ವಹಿತಾಸಕ್ತಿಯಿಂದ ಕೂಡಿದೆ” ಎಂದು ಹೇಳಿದರು.

ಇದನ್ನೂ ಓದಿ: BJP Karnataka: ಮಾರ್ಚ್ 1ರಿಂದ ಬಿಜೆಪಿ ರಥಯಾತ್ರೆ: ಸರ್ಕಾರದ ವಿವಿಧ ಯೋಜನೆಗಳನ್ನು ಜನರಿಗೆ ತಿಳಿಸಿ ಎಂದ ಸಿಎಂ ಬಸವರಾಜ ಬೊಮ್ಮಾಯಿ

ಕಸಬಾ ಸೊಸೈಟಿ ಅಧ್ಯಕ್ಷ ರಾಜ್ ಕಮಲ್, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಲಕ್ಷ್ಮೀ ಉಮೇಶ್, ಹೊರಬೈಲು ಕೃಷ್ಣಮೂರ್ತಿ, ಮುತ್ತುಗುಂಡಿ ಆದರ್ಶ ಸೇರಿದಂತೆ ಅನೇಕರು ಈ ಸಂದರ್ಭದಲ್ಲಿ ಮಾತನಾಡಿದರು. ಮೇಲಿನ ಕುರುವಳ್ಳಿ ಗ್ರಾಮ ಪಂಚಾಯಿತಿಯ ಎಲ್ಲ ಭಾಗಗಳಿಂದ ಸಾರ್ವಜನಿಕರು ಪ್ರತಿಭಟನೆಗೆ ಆಗಮಿಸಿದ್ದರು.

ಪ್ರತಿಭಟನೆಯಲ್ಲಿ ರಮ್ಯ ಅನಿಲ್, ನಾಗರಾಜ್ ಕುಲಾಲ್, ಚಿತ್ರಾ, ಹೊರಬೈಲು ಪೂರ್ಣೇಶ್, ರೇವತಿ ಭಾಸ್ಕರ್, ನಿಶ್ಚಲ್ ಜಾದೂಗಾರ್, ಅನಿತಾ ರಾಜ್, ಸುಮಿತ್ರಾ ಸತೀಶ್, ಹೊರಬೈಲು ನಾಗರಾಜ್, ವಿನಯ್ ಆಚಾರ್, ಕೋಮನೆ ದಿನೇಶ್, ಪ್ರಶಾಂತ್, ತಲಬಿ ಅಮರ್, ಗಿರಿಜಾ, ಸರಸ್ವತಿ, ಲಿಂಗರಾಜ್, ಮೇಲಿನ ಕುರುವಳ್ಳಿ ಮಂಜುನಾಥ್, ಪಾವನ ಆದರ್ಶ ಮುಂತಾದವರು ಭಾಗವಹಿಸಿದ್ದರು.

ಇದನ್ನೂ ಓದಿ: Uniform, shoe row : ಸಮವಸ್ತ್ರ, ಶೂ ವಿತರಣೆ ಮಾಹಿತಿ ನೀಡದ ಸರ್ಕಾರ; ಅಧಿಕಾರಿಯನ್ನು ಜೈಲಿಗಟ್ಟಿದರೆ ಸರಿ ಹೋಗ್ತದೆ ಎಂದ ನ್ಯಾಯಮೂರ್ತಿಗಳು

Exit mobile version