Site icon Vistara News

Theerthahalli News | ಜೀಪ್‌ಗೆ ಮರಳು ತುಂಬಿ ಸುಳ್ಳು ಕೇಸ್‌ ದಾಖಲಿಸಿದ ಪೊಲೀಸ್ ಅಧಿಕಾರಿ: ಅಮಾನತಿಗೆ ಕಿಮ್ಮನೆ ರತ್ನಾಕರ್ ಪಟ್ಟು

Kimmane Ratnakar protest police officer theerthahalli

ತೀರ್ಥಹಳ್ಳಿ: ತೀರ್ಥಹಳ್ಳಿ (Theerthahalli News) ತಾಲೂಕಿನ ಹೆದ್ದೂರು ಸಮೀಪ ಮನೆಯ ಮುಂಭಾಗ ನಿಲ್ಲಿಸಿದ್ದ ಪಿಕಪ್ ವಾಹನಕ್ಕೆ ಪೊಲೀಸ್ ಅಧಿಕಾರಿಯೊಬ್ಬರು ಮರಳು ತುಂಬಿಸಿ ಪೊಲೀಸ್ ಠಾಣೆಗೆ ತಂದು ಆ ಮನೆಯವರ ವಿರುದ್ಧ ಕೇಸ್ ದಾಖಲಿಸಿದ್ದಾರೆ. ಇಂತಹ ಪೊಲೀಸ್ ಅಧಿಕಾರಿಯನ್ನು ಕೂಡಲೇ ಅಮಾನತು ಮಾಡಬೇಕೆಂದು ಕಿಮ್ಮನೆ ರತ್ನಾಕರ್ ವಾಗ್ದಾಳಿ ನಡೆಸಿದರು.

ಮಾಳೂರು ಪೊಲೀಸ್ ಠಾಣೆಯ ಎದುರು ಸೋಮವಾರ (ಜ.೯) ಪ್ರತಿಭಟನೆ ನಡೆಸಿ ಮಾತನಾಡಿದ ಅವರು, ಪೊಲೀಸ್ ಅಧಿಕಾರಿಗಳು ಇಷ್ಟ ಬಂದಂತೆ ವರ್ತಿಸುತ್ತಿದ್ದಾರೆ. ಬಿಜೆಪಿ ಪಕ್ಷದಿಂದ ಮರಳನ್ನು ರಾಜಾರೋಷವಾಗಿ ಸಾಗಿಸಿದರೂ ಇವರಿಗೆ ಕಾಣಿಸುವುದಿಲ್ಲ. ಆದರೆ ನಮ್ಮ ಮೇಲೆ ಸುಮ್ಮನೆ ಸ್ವಯಂಪ್ರೇರಿತ ಕೇಸ್ ದಾಖಲು ಮಾಡುತ್ತಾರೆ. ಈ ವರ್ತನೆ ಸರಿಯಲ್ಲ ಎಂದರು.

ಇದನ್ನೂ ಓದಿ | Forced Conversion | ಬಲವಂತದ ಮತಾಂತರ ದೇಶಕ್ಕೆ ಅಪಾಯ, ಇದಕ್ಕೆ ರಾಜಕೀಯ ಬಣ್ಣ ಬೇಡ: ಸುಪ್ರೀಂ ಕೋರ್ಟ್

ʻʻಇತ್ತೀಚೆಗೆ ಹೆದ್ದೂರು ಸಮೀಪ ಪವರ್ ಮ್ಯಾನ್ ಒಬ್ಬರು ಮಧ್ಯಾಹ್ನದ ವೇಳೆ ಸಾವಿಗೀಡಾದರೂ ಸಂಜೆಯವರೆಗೂ ಅಲ್ಲಿಗೆ ಪೊಲೀಸರು ಭೇಟಿ ನೀಡಿಲ್ಲ. ನಾನು ನನ್ನ ಕೈಯಲ್ಲಿದ್ದ ಐದು ಸಾವಿರ ರೂ. ಕೊಟ್ಟು ಬಂದಿದ್ದೆ. ಅದರಲ್ಲಿ ಒಂದು ಸಾವಿರ ರೂ. ಪೊಲೀಸರು ಕೇಳುತ್ತಾರಂತೆ. ಕಂಪ್ಲೇಂಟ್ ಕೊಡದಿದ್ದರೆ ತೆಗೆದುಕೊಳ್ಳುವುದಿಲ್ಲವಂತೆ. ಅದೇ ನಮ್ಮ ಕಾರ್ಯಕರ್ತರ ಮೇಲೆ ದೇವರು ಕೂಡ ಕಂಪ್ಲೇಂಟ್ ಕೊಡದಿದ್ದರೂ ಸುಮೊಟೊ ಕಂಪ್ಲೇಂಟ್ ದಾಖಲಿಸುತ್ತೀರಾ ? ಪೊಲೀಸ್ ಇಲಾಖೆ ಬಾಡಿಗೆಗೆ ಇದೆಯಾʼʼ ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ | Siddaramaiah Vs BJP : ನಿಜವಾಗದ ಬಿಜೆಪಿ ಕನಸು; ಕೋರ್ಟ್‌ ತಡೆಯಿಂದ ಬಿಡುಗಡೆಯಾಗದ ಸಿದ್ದು ನಿಜಕನಸು!

ಹೆದ್ದೂರು ಬಳಿ ಮರಳು ತುಂಬಲು ಜ್ಞಾನೇಂದ್ರ ಹೇಳಿದ್ದ ಅಥವಾ ನೀವೇ ತುಂಬಿದ್ದ ನನಗೆ ಗೊತ್ತಾಗಬೇಕು. ಆರಗದಲ್ಲಿ 14 ಜನ ಮರಳನ್ನು ಹೊಡೆಯುತ್ತಾ ಇದ್ದಾರೆ. ಅವರನ್ನು ಯಾರೂ ಹಿಡಿಯಲ್ಲ. ಅದೇ ನಾನು ಮಂತ್ರಿ, ಎಂ ಎಲ್ ಎ ಆದಾಗ ಜ್ಞಾನೇಂದ್ರ ಮರಳು ದಂಡೆಯನ್ನೇ ಬಿಟ್ಟು ಹೊರಗೆ ಬರುತ್ತಿರಲಿಲ್ಲ. ಆಗಿನ ಸಮಯದಲ್ಲಿ ನಾನು ಆನೆ ಹಿಡಿಯಲಿಲ್ಲ ಅಂತ ಕೂಗುತ್ತಿದ್ದರು. ಈಗ ಆನೆ ಆಗುಂಬೆ, ಮುಗುಡ್ತಿ, ಶೆಡ್ಗಾರ್, ಕೊನೆಗೆ ಕುರುವಳ್ಳಿಗೂ ಬಂತು. ಆರಗ ಜ್ಞಾನೇಂದ್ರ ನಾಪತ್ತೆಯಾಗಿದ್ದಾರೆ. ಪುಣ್ಯಕ್ಕೆ ತಾಲೂಕು ಕಚೇರಿ ಒಂದಕ್ಕೆ ಆನೆ ಬಂದಿಲ್ಲ ಎಂದು ಹಾಸ್ಯ ಚಟಾಕಿ ಹಾರಿಸಿದರು.

ಗೃಹ ಇಲಾಖೆಗೆ ರಾಜೀನಾಮೆ ಕೊಡಿ

ಸ್ಯಾಂಟ್ರೋ ರವಿ ಬಳಿ ಜ್ಞಾನೇಂದ್ರ ಅವರು ಹಣವನ್ನು ತೆಗೆದುಕೊಂಡಿದ್ದಾರೆ ಎಂದು ಎಚ್ ಡಿ ಕೆ ವಿಡಿಯೊವೊಂದನ್ನು ಬಿಟ್ಟಿದ್ದಾರೆ. ಇನ್ನು ವಿಡಿಯೋ ಬಿಡ್ತೀನಿ ಅಂತಾನೂ ಹೇಳಿದ್ದಾರೆ. ಹಾಗಾಗಿ ಆರಗ ಜ್ಞಾನೇಂದ್ರ ಅವರು ರಾಜೀನಾಮೆ ಕೊಡುವುದು ಒಳ್ಳೆಯದು. ಈಗಾಗಲೇ ಭ್ರಷ್ಟಾಚಾರ, ಪಿಎಸ್ಐ ನೇಮಕಾತಿ ವಿಚಾರದಲ್ಲಿ ಆರೋಪವಿದೆ. ಹೀಗಾಗಿ ಗೃಹ ಇಲಾಖೆಗೆ ಆರಗ ಜ್ಞಾನೇಂದ್ರ ರಾಜೀನಾಮೆ ಕೊಡುವುದು ಒಳ್ಳೆಯದು ಎಂದರು.

ಇದನ್ನೂ ಓದಿ | Vikas Purohit | ಮೆಟಾ ಭಾರತದ ಜಾಗತಿಕ ಉದ್ಯಮ ಸಮೂಹಕ್ಕೆ ವಿಕಾಸ್‌ ಪುರೋಹಿತ್‌ ನಿರ್ದೇಶಕ

Exit mobile version