Site icon Vistara News

Theerthahalli News | ಕವಿ ಮನೆಯಲಿ ಯುವ ಮನಸ್ಸುಗಳ ಕಲರವ ಎಬ್ಬಿಸಿದ ವಿವೇಕ ಯಾತ್ರೆ

Mass competition kuppali kavi mane Kuvempu

ತೀರ್ಥಹಳ್ಳಿ: ಕುಪ್ಪಳಿಯ ಕವಿ ಮನೆಯ ಹೇಮಾಂಗಣದಲ್ಲಿ ವಿವೇಕ ಯಾತ್ರೆಯ ಕಾರ್ಯಕ್ರಮ ನಡೆದಿದ್ದು, ಪದವಿ ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಜಿಲ್ಲಾ ಮಟ್ಟದ ಪ್ರಬಂಧ, ರಸಪ್ರಶ್ನೆ, ಭಾಷಣ, ಪುಸ್ತಕ ಪರಿಚಯ ಸ್ಪರ್ಧೆ, ಚಾಗಿಯ ಹಾಡಿನ ಸಾಮೂಹಿಕ ಸ್ಪರ್ಧೆಗಳು ಗಮನ ಸೆಳೆದವು.

ಹಿರಿಯ ಪತ್ರಕರ್ತ ಚಿಕ್ಕಮಗಳೂರಿನ ಗಿರಿಜಾ ಶಂಕರ್ ಮಾತನಾಡಿ, ಕುವೆಂಪು ಅವರು ಸಾಹಿತ್ಯದಲ್ಲಿ ಅಡಗಿರುವ ರಾಷ್ಟ್ರೀಯತೆಯ ಒಳಪದರಗಳನ್ನು ಅವರ ಕವನಗಳನ್ನು ಹೇಳುವ ಮೂಲಕ ವಿದ್ಯಾರ್ಥಿಗಳಿಗೆ ಅರ್ಥೈಸಿದರು.

ಪ್ರಜ್ಞಾ ಪ್ರವಾಹದ ಸಂಚಾಲಕ ರಘುನಂದನ್, ವಿದ್ಯಾರ್ಥಿಗಳ ಪ್ರಶ್ನೆಗೆ ಉತ್ತರಿಸುತ್ತಾ ಕನ್ನಡ ಭಾಷೆಯನ್ನು ಉಳಿಸುವ, ಬೆಳೆಸುವ ಅನೇಕ ಕಾರ್ಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ವಿವೇಕಾನಂದರ ಜನ್ಮದಿನದಂದು ಅವರ ಅಪೇಕ್ಷೆಯಂತೆ ನಮ್ಮೀ ದೇಹವನ್ನು ಮತ್ತು ಮನಸ್ಸನ್ನು ಸದೃಢವಾಗಿಟ್ಟುಕೊಳ್ಳಬೇಕೆಂದು ಸಲಹೆಗಳನ್ನು ನೀಡಿದರು.

ಇದನ್ನೂ ಓದಿ | Makar Sankranti 2023 | ಕರುನಾಡಿನ ಸುಗ್ಗಿಯ ಹಬ್ಬ ಮಕರ ಸಂಕ್ರಾಂತಿ

“ರಾಷ್ಟ್ರ ಕವಿಯ ಸಾಹಿತ್ಯದಲ್ಲಿ ರಾಷ್ಟ್ರೀಯತೆ ಮತ್ತು ಪ್ರಾದೇಶಿಕತೆಯ ಅಭಿವ್ಯಕ್ತಿ” ಕುರಿತಾಗಿ ಮಾತನಾಡಿದ ಅವರು, ರಾಷ್ಟ್ರೀಯತೆ ಮತ್ತು ಪ್ರಾದೇಶಿಕತೆ ಎರಡೂ ಹೇಗೆ, ಎಲ್ಲೆಲ್ಲಿ ಉಲ್ಲೇಖವಾಗಿವೆ. ಯಾವ ರೀತಿಯಲ್ಲಿ ಅಭಿವ್ಯಕ್ತಗೊಂಡಿವೆ? ಕುವೆಂಪು ಅವರ ಭಾವನೆಯಲ್ಲಿ ಅವೆರಡೂ ಒಂದಕ್ಕೊಂದು ಹೇಗೆ ಪೂರಕವಾಗಿದ್ದವು ಎಂಬುದನ್ನು ಬಹಳ ಸರಳವಾಗಿ ಮತ್ತು ಸುಂದರವಾಗಿ ವಿವರಿಸಿದರು.

ಇದನ್ನೂ ಓದಿ | Panchamasali Reservation | ಪದೇಪದೆ ಗಡುವು ನೀಡುವ ಸ್ವಾಮೀಜಿ, ಯತ್ನಾಳ್‌ ವಿರುದ್ಧ ಸಿ.ಸಿ ಪಾಟೀಲ್‌, ನಿರಾಣಿ ಆಕ್ರೋಶ

ಯುವ ಕವಿ, ಪತ್ರಕರ್ತೆ ತನ್ಮಯಿ, ಕುವೆಂಪು ಅವರ ಸಾಹಿತ್ಯದಲ್ಲಿ ರಾಷ್ಟ್ರೀಯತೆಯ ವಿಷಯದ ಘೋಷ್ಠಿಯ ನಿರ್ವಾಹಕರಾಗಿ ಕಾರ್ಯ ನಿರ್ವಹಿಸಿದರು. ವಿಕಾಸ ಟ್ರಸ್ಟ್ ಸಹಕಾರದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಟ್ರಸ್ಟ್‌ ವ್ಯವಸ್ಥಾಪಕ ವಿಶ್ವಸ್ಥ ಸಚ್ಚಿದಾನಂದ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಾಂತ ಸಹ ಕಾರ್ಯವಾಹ ಪಟ್ಟಾಭಿರಾಮ ಉಪಸ್ಥಿತರಿದ್ದರು. ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಿದರು. ಪ್ರವೀಣ್ ಮತ್ತು ವಿಜಯ್ ಗೌಡ ನಿರೂಪಿಸಿದರು.

ಇದನ್ನೂ ಓದಿ | Dharma Dangal‌ : ಕಾವೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನ ಜಾತ್ರಾ ಮಹೋತ್ಸವಕ್ಕೆ ಧರ್ಮ ದಂಗಲ್‌ ಬಿಸಿ

Exit mobile version