ಗಂಗಾವತಿ: ನಗರದ ನಾನಾ ಪ್ರದೇಶಗಳಲ್ಲಿ ನಡೆದಿದ್ದ ಕಳ್ಳತನ ಪ್ರಕರಣಗಳನ್ನು (Theft Case) ಬೇಧಿಸುವಲ್ಲಿ ಯಶಸ್ವಿಯಾಗಿರುವ ಗಂಗಾವತಿ ನಗರ ಠಾಣಾ ಪೊಲೀಸರು, ನಾಲ್ಕು ಜನ ಆರೋಪಿಗಳನ್ನು (Accused) ಬಂಧಿಸಿ, ಬಂಧಿತರಿಂದ 8.85 ಲಕ್ಷ ಮೌಲ್ಯದ ಚಿನ್ನಾಭರಣ (Gold jewelery) , 4 ಬೈಕ್‌ಗಳನ್ನು (Bikes) ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಗಳನ್ನು ನಗರದ ನಾನಾ ಪ್ರದೇಶದಲ್ಲಿನ ನಿವಾಸಿಗಳಾದ ತರಕಾರಿ ವ್ಯಾಪಾರಿ ಖಾಜಾ ಹುಸೇನ್‌ಸಾಬ, ಕಾರು ಚಾಲಕ ಗೌಸ್‌ಪಾಷಾ ಜಾವೀದಲಿ, ಪಿಒಪಿ ಕೆಲಸಗಾರ ಹಸೀಸ್ ಶೆಕ್ಷಾವಲಿ, ಹಾಗೂ ಗ್ಯಾರೇಜ್ ಕೆಲಸಗಾರ ಸೋಹೆಲ್ ಜಾಫರ್‌ಸಾಬ್ ಎಂಬುವವರನ್ನು ಬಂಧಿಸಲಾಗಿದೆ.
ನಗರದಲ್ಲಿ ನಡೆದಿದ್ದ ನಾಲ್ಕು ಮನೆಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಂದ 105.9 ಗ್ರಾಂ ತೂಕದ 6.35 ಲಕ್ಷ ಮೌಲ್ಯದ ಬಂಗಾರದ ಆಭರಣ, 3 ಕೆಜಿ 885 ಗ್ರಾಂ ತೂಕದ ಅಂದಾಜು 2.5 ಲಕ್ಷ ಮೌಲ್ಯದ ಬೆಳ್ಳಿಯ ಸಾಮಾಗ್ರಿಗಳನ್ನು ವಶಕ್ಕೆ ಪಡೆಯಲಾಗಿದೆ.
ಅಲ್ಲದೇ ನಾನಾ ಕಡೆಗಳಲ್ಲಿ ಕಳ್ಳತನ ಮಾಡಿದ್ದ ಮತ್ತು ಕಳ್ಳತನದ ಸಂದರ್ಭದಲ್ಲಿ ಉಪಯೋಗಿಸಿಕೊಳ್ಳುತ್ತಿದ್ದ ನಾಲ್ಕು ಬೈಕ್ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಡಿವೈಎಸ್ಪಿ ಸಿದ್ದಲಿಂಗಪ್ಪಗೌಡ ಪೊಲೀಸ್ ಪಾಟೀಲ್ ತಿಳಿಸಿದ್ದಾರೆ.