Site icon Vistara News

Theft Case : ಒಂದುವರೆ ವರ್ಷದ ನಂತರ ಮನೆ ಕಳವು ಆರೋಪಿಗಳು ಅರೆಸ್ಟ್‌; ಬಂಧಿಸಲು ಹೋದಾಗ ಹೈಡ್ರಾಮಾ

Theft case in kadaba

ಕಡಬ (ದಕ್ಷಿಣ ಕನ್ನಡ): ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನಲ್ಲಿ ವರ್ಷಗಳ ಹಿಂದೆ‌ ನಡೆದ ಕಳ್ಳತನ ಪ್ರಕರಣವನ್ನು (Theft case) ಪೊಲೀಸರು ಭೇದಿಸಿದ್ದಾರೆ. ಕಡಬದಲ್ಲಿ ಅಟೋಮೊಬೈಲ್ ಬಿಡಿ ಭಾಗಗಳ ಅಂಗಡಿ ಮಾಲೀಕರಾಗಿರುವ (Automobile Shop owner) ವರ್ಗೀಸ್ (ಶಾಜನ್) ಎಂಬವರ ಮನೆಗೆ ನುಗ್ಗಿ ಚಿನ್ನಾಭರಣ ಕಳವು (Gold ornaments theft) ಮಾಡಲಾಗಿತ್ತು. ಕಳವು ಮಾಡಿದ ಆರೋಪಿಗಳನ್ನು ಸುಮಾರು ಒಂದುವರೆ ವರ್ಷಗಳ ನಂತರ ಕಡಬ ಪೊಲೀಸರು ಬಂಧಿಸಿದ್ದಾರೆ (Thieves arrested after one and half years).

ಪೇರಡ್ಕ ಪೆಲತ್ರಾಣೆ ನಿವಾಸಿ ಸದ್ದಾಂ ಮತ್ತು ಮೀನಾಡಿ ನಿವಾಸಿ ತಾಜುದ್ದೀನ್ ಬಂಧಿತ ಆರೋಪಿಗಳು. ಇವರಲ್ಲಿ ಸದ್ದಾಂ ಎಂಬಾತನು ಈ ಹಿಂದೆ ನಡೆದ ಅಪ್ರಾಪ್ತ ಬಾಲಕಿಯ ಅತ್ಯಾಚಾರ ಪ್ರಕರಣ ಸೇರಿದಂತೆ ಹಲವು ಪ್ರಕರಣಗಳ ಆರೋಪಿಯಾಗಿದ್ದಾನೆ.ಈತನ ಮೊಬೈಲ್ ಸಿಡಿಆರ್ ಆಧಾರದಲ್ಲಿ ಕಳ್ಳತನ ಪ್ರಕರಣ ಪತ್ತೆಹಚ್ಚಲಾಗಿದೆ.

ಆವತ್ತು ಆ ಮನೆಯಲ್ಲಿ ನಡೆದಿದ್ದೇನು?

2021ರ ಡಿಸೆಂಬರ್ 13ರಂದು ಶಾಜನ್ ಹಾಗೂ ಪತ್ನಿ ಎಂದಿನಂತೆ ಬೆಳಿಗ್ಗೆ 8:45 ಗಂಟೆಯ ಸಮಯ ಮನೆಗೆ ಬೀಗ ಹಾಕಿ ಮಕ್ಕಳನ್ನು ಶಾಲೆಗೆ ಕಳುಹಿಸಿ ತಮ್ಮ ಕೆಲಸಕ್ಕೆ ಹೊರಟಿದ್ದರು. ಈ ಸಮಯದಲ್ಲಿ ಮನೆಯಲ್ಲಿ ಕಳ್ಳತನ ನಡೆದಿತ್ತು.

ಶಾಜನ್‌ ಅವರು ಸಂಜೆ ಸುಮಾರು 4:45 ವೇಳೆಗೆ ಮನೆಗೆ ಬಂದು ಮನೆಯ ಎದುರಿನ ಬೀಗವನ್ನು ತೆರೆದು ಮನೆಯೊಳಗೆ ನೋಡುವಾಗ ಮನೆಯ ಹಿಂಭಾಗದ ಬಾಗಿಲನ್ನು ಒಡೆದಿರುವುದು ಗಮನಕ್ಕೆ ಬಂದಿದೆ. ಈ ಸಮಯದಲ್ಲಿ ಮನೆಯಲ್ಲಿ ಕಳ್ಳತನ ನಡೆದಿರುವುದು ಗಮನಕ್ಕೆ ಬಂದಿತ್ತು.

ಸುಮಾರು 24 ಗ್ರಾಂ ತೂಕದ ಚಿನ್ನದ ಸರ, 8 ಗ್ರಾಂ ತೂಕದ ಚಿನ್ನದ ಸರ, 6ಗ್ರಾಂ ತೂಕದ ಚಿನ್ನದ ಬೆಂಡೋಲೆ, ಮಕ್ಕಳ ಬೆಂಡೋಲೆಗಳು ಸೇರಿದಂತೆ ಅಂದಾಜು ರೂಪಾಯಿ 1.50 ಲಕ್ಷ ಮೌಲ್ಯದ ಸುಮಾರು 41 ಗ್ರಾಂ ಚಿನ್ನಾಭರಣ ಕಳವು ಮಾಡಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಕಡಬ ಪೊಲೀಸ್ ಠಾಣೆಯಲ್ಲಿ ಅ.ಸಂ 0150/2021ರಂತೆ ಕಳವು ಪ್ರಕರಣ ದಾಖಲಾಗಿತ್ತು.

ಇದೀಗ ಆರೋಪಿಗಳನ್ನು ಬಂಧಿಸಿದಾಗ ಕಳ್ಳತನವಾದ 41 ಗ್ರಾಂ ಚಿನ್ನದಲ್ಲಿ 17 ಗ್ರಾಂ ಚಿನ್ನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅದನ್ನು ಮನೆಯವರಿಗೆ ಹಸ್ತಾಂತರ ಮಾಡಿದ್ದಾರೆ. ಉಳಿದ ಚಿನ್ನಾಭರಣ ಪತ್ತೆಯಾಗಬೇಕಿದೆ.

Two arrested in Theft case in kadaba

ಪೊಲೀಸರು ಬಂಧಿಸಲು ಹೋದಾಗ ಆರೋಪಿ ಮನೆಯಲ್ಲಿ ಹೈಡ್ರಾಮ

ಆರೋಪಿ ಸದ್ದಾಂ ಹೇಳಿಕೆ ನೀಡಿದಂತೆ ಕಳ್ಳತನಕ್ಕೆ ಆರೋಪಿಗಳು ಬಳಸಿದ್ದ ಜೀಪನ್ನು ವಶಕ್ಕೆ ಪಡೆಯಲು ಕಡಬ ಪೊಲೀಸರು ಆರೋಪಿ ಸದ್ದಾಂನ ಮನೆಗೆ ಹೋದಾಗ ಮನೆಯಲ್ಲಿನ ಮಹಿಳೆಯರು ಮಕ್ಕಳೊಂದಿಗೆ ಪೊಲೀಸರನ್ನು ಅಡ್ಡಗಟ್ಟಿದ್ದಾರೆ. ಮನೆಗೆ ಮಹಿಳಾ ಪೊಲೀಸರೊಂದಿಗೆ ಬರುವಂತೆ ಗಲಾಟೆ ಮಾಡಿ, ಜೀಪನ್ನು ಬಿಟ್ಟು ಕೊಡದ ಘಟನೆಯೂ ನಡೆದಿದೆ. ಅಂತಿಮವಾಗಿ ಪೊಲೀಸರು ಸದ್ದಾಂನನ್ನು ಹಿಡಿದುಕೊಂಡು ಬಂದಿದ್ದಾರೆ.

ಇದನ್ನೂ ಓದಿ: Murder Case : ದೇಗುಲದಲ್ಲಿ ಪತ್ನಿ ಕಣ್ಣೆದುರೇ ಗಂಡನ ಕೊಲೆ ಕೇಸಿಗೆ ಟ್ವಿಸ್ಟ್ ; ಮುಹೂರ್ತ ಇಟ್ಟದ್ದೇ ಹೆಂಡತಿ?

Exit mobile version