Site icon Vistara News

Theft Case | ಮಧ್ಯರಾತ್ರಿ ಎಲೆಕ್ಟ್ರಿಕ್‌ ಅಂಗಡಿಗೆ ನುಗ್ಗಿದ ಕಳ್ಳ; ಮೊಬೈಲ್‌ ಕಳ್ಳರನ್ನು ಬಂಧಿಸಿದ ಪೊಲೀಸರು

ಬೆಂಗಳೂರು/ಶಿವಮೊಗ್ಗ: ಶಿವಮೊಗ್ಗದ ಸಾಗರ ತಾಲೂಕಿನಲ್ಲಿರುವ ಆವಿನಹಳ್ಳಿಯಲ್ಲಿರುವ ಎಲೆಕ್ಟ್ರಿಕಲ್ಸ್ ಅಂಗಡಿಗೆ ನುಗ್ಗಿ ಕಳ್ಳನೊಬ್ಬ (Theft Case) ಕೈಚಳಕ ತೋರಿಸಿದ್ದಾನೆ. ಮಧ್ಯರಾತ್ರಿ ಹೆಂಚು ತೆಗೆದು ಅಂಗಡಿಯೊಳಗೆ ನುಗ್ಗಿದ್ದು, ಕ್ಯಾಶ್ ಬಾಕ್ಸ್ ಒಳಗಿಟ್ಟಿದ್ದ 8 ಸಾವಿರ ರೂ. ನಗದನ್ನು ಎಗರಿಸಿದ್ದಾನೆ. ಆವಿನಹಳ್ಳಿಯ ರಮೇಶ್ ಎಂಬುವವರಿಗೆ ಸೇರಿದ ಎಲೆಕ್ಟ್ರಿಕಲ್ ಅಂಗಡಿಯಲ್ಲಿ ಕಳ್ಳತನ ಮಾಡಿದ್ದು ಎಲ್ಲ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.

ಮೊಬೈಲ್‌ ಕಳ್ಳರ ಬಂಧನ
ಬೆಂಗಳೂರಿನ ಆಗ್ನೇಯ ವಿಭಾಗದ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಮೊಬೈಲ್ ಕಳ್ಳತನ ಮಾಡುತ್ತಿದ್ದವರನ್ನು ಬಂಧಿಸಿದ್ದಾರೆ. ಬಿಎಂಟಿಸಿ ಬಸ್‌ಗಳಲ್ಲಿ ಸಂಚರಿಸುವ ಪ್ರಯಾಣಿಕರನ್ನು ಟಾರ್ಗೆಟ್‌ ಮಾಡುತ್ತಿದ್ದ ಖರ್ತನಾಕ್‌ ಕಳ್ಳರು ಮೊಬೈಲ್ ದೋಚುತ್ತಿದ್ದರು.

ಆರೋಪಿಗಳಿಂದ ವಿವಿಧ ಕಂಪನಿಗೆ ಸೇರಿದ 150 ಮೊಬೈಲ್ ಫೋನ್‌ಗಳನ್ನು ವಶಕ್ಕೆ ಪಡೆಯಲಾಗಿದೆ. 50 ಸಾವಿರ ರೂಪಾಯಿ ನಗದು ದೋಚಿದ್ದ ಕಾರಣಕ್ಕೆ ಸದ್ದುಗುಂಟೆ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಕೇಸ್ ಆಧರಿಸಿ ಪೊಲೀಸರು ತನಿಖೆ ನಡೆಸಿ ನಾಲ್ವರು ಆರೋಪಿಗಳನ್ನು ಬಂಧಿಸಿದಾಗ, ಕಳ್ಳತನದ ಕೃತ್ಯ ಬಯಲಾಗಿದೆ. ಕಳೆದ 6 ತಿಂಗಳಿನಿಂದ ಬೆಂಗಳೂರಿನ ಹಲವು ಏರಿಯಾದಲ್ಲಿ ಕಳ್ಳತನ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

ಇದನ್ನೂ ಓದಿ | Young man drowned | ಕಣ್ಣೂರು ಸಮುದ್ರದಲ್ಲಿ ಈಜಲು ತೆರಳಿದ್ದ ಮಡಿಕೇರಿ ಯುವಕ ಸಾವು; ಶಬರಿಮಲೆಗೆ ತೆರಳಿದ್ದವನು ಸಮುದ್ರಪಾಲು

Exit mobile version