Site icon Vistara News

Theft Case: ಬೆಂಗಳೂರಲ್ಲಿ ಹೆಚ್ಚಾಯ್ತು ಚಪ್ಪಲಿ, ಶೂ ಕಳ್ಳರ ಹಾವಳಿ; ಅಪಾರ್ಟ್ಮೆಂಟ್‌ಗಳೇ ಟಾರ್ಗೆಟ್‌

#image_title

ಬೆಂಗಳೂರು: ಮನೆಯೊಳಗೆ ಇರುವ ಹಣ ಒಡವೆಗಳಿಗೆ ಕನ್ನ ಹಾಕುತ್ತಿದ್ದ ಕಳ್ಳರು ಇದೀಗ ಮನೆ ಹೊರಗೆ ಇರುವ ಚಪ್ಪಲಿ ಕದಿಯಲು (Theft Case) ಶುರು ಮಾಡಿದ್ದಾರೆ. ಚಪ್ಪಲಿ ಕಳ್ಳರ ಹಾವಳಿಗೆ ಬೆಂಗಳೂರಿಗರು ಹೈರಾಣಾಗಿದ್ದಾರೆ. ಮನೆ ಮುಂದೆ ಬಿಟ್ಟ ಪಾದರಕ್ಷೆಗಳನ್ನೂ ಬಿಡದ ಖದೀಮರು, ಗೋಣಿಚೀಲದಲ್ಲಿ ತುಂಬಿಕೊಂಡು ಪರಾರಿಯಾಗುತ್ತಿದ್ದಾರೆ.

ಸಿಸಿ ಟಿವಿಯಲ್ಲಿ ಸೆರೆಯಾಗಿರುವ ಕಳ್ಳನ ಕೃತ್ಯ

ಹತ್ತಾರು ಬಗೆಯ ಶೂಗಳು ಸುಲಭವಾಗಿ ಒಂದೇ ಕಡೆ ಸಿಗುತ್ತದೆ ಎಂಬ ಕಾರಣಕ್ಕೆ ಕಳ್ಳರು ಅಪಾರ್ಟ್ಮೆಂಟ್‌ಗಳನ್ನೇ ಟಾರ್ಗೆಟ್‌ ಮಾಡುತ್ತಿದ್ದಾರೆ. ಎಚ್ಎಸ್ಆರ್ ಲೇಔಟ್‌ನ ಅಪಾರ್ಟ್ಮೆಂಟ್ ಒಂದರಲ್ಲಿ ಕಳ್ಳನೊಬ್ಬ ಕೈ ಚಳಕ ತೋರಿದ್ದಾನೆ. ಅಪಾರ್ಟ್ಮೆಂಟ್‌ವೊಳಗೆ ಸುಲಭವಾಗಿ ಎಂಟ್ರಿ ಕೊಡುವ ಕಳ್ಳ, ಕೈನಲ್ಲೊಂದು ಅಗಲವಾದ ಬಟ್ಟೆ ಹಿಡಿದು ಸಿಕ್ಕ ಸಿಕ್ಕ ಶೂಗಳನ್ನು ಜೋಡಿಸಿಕೊಂಡು ಕದ್ದೊಯ್ಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಕಳ್ಳರು ದುಬಾರಿ ಆಗಿರುವ ಎಲ್ಲ ಬ್ರಾಂಡೆಡ್‌ ಶೂಗಳನ್ನೇ ಕದಿಯುತ್ತಿದ್ದಾರೆ. ಬಳಿಕ ಅದನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿರುವುದು ಕಂಡು ಬಂದಿದೆ. ಇತ್ತ ಜನರು ಚಪ್ಪಲಿ ಕಳವು ಎಂದು ಪೊಲೀಸ್‌ ಠಾಣೆ ಮೆಟ್ಟಿಲೇರಲ್ಲ ಎಂಬ ಕಾರಣಕ್ಕೆ ಇತ್ತೀಚೆಗೆ ಅಪಾರ್ಟ್ಮೆಂಟ್‌ಗಳನ್ನು ಟಾರ್ಗೆಟ್‌ ಮಾಡುತ್ತಿದ್ದಾರೆ. ಕಳ್ಳರ ಕೃತ್ಯಕ್ಕೆ ಅಪಾರ್ಟ್ಮೆಂಟ್‌ ನಿವಾಸಿಗಳು ಆಕ್ರೋಶಗೊಂಡಿದ್ದಾರೆ.

ಮೂವರು ಅಂತಾರಾಜ್ಯ ಡ್ರಗ್ ಪೆಡ್ಲರ್‌ಗಳ ಬಂಧನ

ಮಹದೇವಪುರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಮೂವರು ಅಂತಾರಾಜ್ಯ ಡ್ರಗ್ ಪೆಡ್ಲರ್‌ಗಳನ್ನು ಬಂಧಿಸಿದ್ದಾರೆ. ರಾಜೀಬ್ ಸರ್ಕಾರ್, ಡಿ ಪಟ್ನಾಯಕ್, ಬಹರುಲ್ ಇಸ್ಲಾಂ ಬಂಧಿತ ಆರೋಪಿಗಳಾಗಿದ್ದಾರೆ. ನಗರದ ವಿವಿಧ ಕಡೆ ಗಾಂಜಾ ಮಾರಾಟ ಮಾಡುತ್ತಿದ್ದರು. ಖಚಿತ ಮಾಹಿತಿ ಆಧರಿಸಿ ದಾಳಿ ಮಾಡಿದ ಮಹದೇವಪುರ ಠಾಣೆ ಪೊಲೀಸರು, ಆರೋಪಿಗಳಿಂದ 25 ಕೆ.ಜಿ ಗಾಂಜಾವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: Karnataka Elections 2023 : ಮತದಾರರಿಗೆ ಹಂಚಲು ಒಯ್ಯುತ್ತಿದ್ದ 16 ಲಕ್ಷ ರೂ. ಮೌಲ್ಯದ 5000 ಸೀರೆ ವಶ

ಸೂಕ್ತ ದಾಖಲೆ ಇಲ್ಲದ ತಂಬಾಕು ಸೀಜ್‌

ಲಕ್ಷಾಂತರ ರೂ. ಮೌಲ್ಯದ ತಂಬಾಕು ಸೀಜ್

ಗದಗ ಜಿಲ್ಲೆಯ ಮುಂಡರಗಿ ಪಟ್ಟಣದ ಕೊಪ್ಪಳ ರಸ್ತೆಯ ಚೆಕ್ ಪೋಸ್ಟ್‌ನಲ್ಲಿ ಸೂಕ್ತವಾದ ದಾಖಲೆ ಇಲ್ಲದ ಕಾರಣಕ್ಕೆ 1 ಲಕ್ಷ 84 ಸಾವಿರ ರೂಪಾಯಿ ಮೌಲ್ಯದ ತಂಬಾಕನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಶಿರಾಜ್ ನಾಗರಕಟ್ಟಿ ಎಂಬಾತ ಸೂಕ್ತವಾದ ದಾಖಲೆ ಇಲ್ಲದೆ ಗದಗದಿಂದ ಕೊಪ್ಪಳ ಕಡೆಗೆ ತಂಬಾಕನ್ನು ಸಾಗಾಟ ಮಾಡಲು ಯತ್ನಿಸಿದ್ದ. ಗದಗ ಎಸ್‌ಪಿ ಬಿ.ಎಸ್. ನೇಮಗೌಡ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಶಿರಹಟ್ಟಿ ಹಾಗೂ ಮುಂಡರಗಿ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲು ಮಾಡಿಕೊಳ್ಳಲಾಗಿದೆ.

ರಾಜ್ಯದ ಪ್ರಮುಖ ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version