ಗಂಗಾವತಿ: ವ್ಯಕ್ತಿಯೊಬ್ಬರು ತಮ್ಮ ಮನೆಯಲ್ಲಿರಿಸಿದ್ದ ಎರಡು ಲಕ್ಷ ರೂಪಾಯಿ ಮೊತ್ತದ ನಗದು ಹಣ ಕಳ್ಳತನವಾಗಿದೆ (Theft of Rs 2 lakh) ಎಂದು ಗ್ರಾಮೀಣ ಠಾಣೆಗೆ ದೂರು ದಾಖಲಿಸಿದ 24 ಗಂಟೆಯಲ್ಲಿ ಪೊಲೀಸರು ಪ್ರಕರಣವನ್ನು ಬೇಧಿಸಿ ಆರೋಪಿಯನ್ನು ಬಂಧಿಸುವಲ್ಲಿ (Accused arrested) ಯಶಸ್ವಿಯಾಗಿದ್ದಾರೆ.
ಗಂಗಾವತಿ ಗ್ರಾಮೀಣ ಠಾಣಾ ವ್ಯಾಪ್ತಿಯ ಶ್ರೀರಾಮನಗರದಲ್ಲಿ ಈ ಘಟನೆ ನಡೆದಿದ್ದು, ಎರಡು ಲಕ್ಷ ರೂಪಾಯಿ ಕಳ್ಳತನ ಮಾಡಿದ್ದ ಆರೋಪಿ ಪೇಟಿಂಗ್ ಕೆಲಸಗಾರ ವೆಂಕಟೇಶ ಶರಣಪ್ಪ ಪೂಜಾರಿ ಎಂಬುವವನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ವಿವರ
ಶ್ರೀರಾಮನಗರದ ವೆಲ್ಡಿಂಗ್ ಶಾಪ್ ಮಾಲೀಕ ಅಮರೇಶ ಷಣ್ಮುಖಪ್ಪ ಎಂಬುವವರು ಎರಡು ಲಕ್ಷ ರೂಪಾಯಿ ನಗದು ಮೊತ್ತವನ್ನು ತಮ್ಮ ಮನೆಯ ತಿಜೋರಿಯಲ್ಲಿ ಭದ್ರವಾಗಿಟ್ಟು, ಕುಟುಂಬ ಸದಸ್ಯರೆಲ್ಲಾ ಸೇರಿಕೊಂಡು ಯಮನೂರಪ್ಪ ಜಾತ್ರೆಗೆ ತೆರಳಿದ್ದಾರೆ.
ಇದನ್ನೂ ಓದಿ: Gold Rate Today: ಏರಿಳಿಯದ ಬಂಗಾರದ ಬೆಲೆ, ಬೆಂಗಳೂರಲ್ಲಿ ಹೀಗಿದೆ ದರ
ಜಾತ್ರೆ ಮುಗಿಸಿಕೊಂಡು ವಾಪಾಸ್ ಮನೆಗೆ ಬಂದು ನೋಡಿದಾಗ ತಿಜೋರಿ ಬಾಗಿಲು ತೆಗೆದಿದ್ದು, ಎರಡು ಲಕ್ಷ ಮೊತ್ತದ ನಗದು ಹಣ ಕಳ್ಳತನವಾದ ಬಗ್ಗೆ ಗಮನಕ್ಕೆ ಬಂದಿದೆ. ಕೂಡಲೆ ಗ್ರಾಮೀಣ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ.
ಪ್ರಕರಣದ ವಿಚಾರಣೆ ನಡೆಸಿದ ಪೊಲೀಸರು, ಪಕ್ಕದ ಮನೆಯ ವೆಂಕಟೇಶನ ಚಲನವಲನದ ಮೇಲೆ ಸಂದೇಹಗೊಂಡು ವಿಚಾರಣೆಗೊಳಪಡಿಸಿದಾಗ ಹಣ ಕದ್ದಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಸಿದ್ದಾರೆ.
ಇದನ್ನೂ ಓದಿ: Weather Report : ತಿಂಗಳಾಂತ್ಯದವರೆಗೆ ರಾಜ್ಯದಲ್ಲಿ ತುಂತುರು ಮಳೆ
ಡಿವೈಎಸ್ಪಿ ಸಿದ್ದಲಿಂಗಪ್ಪನಗೌಡ ಪಾಟೀಲ್ ನೇತೃತ್ವದಲ್ಲಿ ಗ್ರಾಮೀಣ ಪಿಐ ಮಂಜುನಾಥ ಹಾಗೂ ಸಿಬ್ಬಂದಿ ಪ್ರಕರಣ ಭೇದಿಸಿದ್ದಾರೆ. ಪ್ರಕರಣ ನಡೆದ ಕೇವಲ 24 ಗಂಟೆಯಲ್ಲಿ ಕಳ್ಳನನ್ನು ಬಂಧಿಸಿರುವುದಕ್ಕೆ ಎಸ್ಪಿ ಯಶೋಧಾ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.