Site icon Vistara News

Koppala News: ಗಂಗಾವತಿ; ವಾಣಿ ವೀರಭದ್ರೇಶ್ವರ ದೇವಸ್ಥಾನದ ಶಿವಲಿಂಗ ಕದ್ದೊಯ್ದ ಕಳ್ಳರು

Thieves stole Shivalinga from Vani Veerabhadreshwara temple in Gangavathi

ಗಂಗಾವತಿ: ತಾಲೂಕಿನ ಮಲ್ಲಾಪುರ ಗ್ರಾಮದ ಸಮೀಪ ಇರುವ ಪುರಾತನ ಕಾಲದ ವಾಣಿ ವೀರಭದ್ರೇಶ್ವರ ದೇವಸ್ಥಾನದ (Vani Veerabhadreshwara temple) ಗರ್ಭಗುಡಿಯಲ್ಲಿದ್ದ ಶಿವಲಿಂಗವನ್ನು (Shivalinga) ಖದೀಮರು (Thieves) ಕದ್ದೊಯ್ದ ಘಟನೆ ಗುರುವಾರ ಬೆಳಕಿಗೆ ಬಂದಿದೆ.

ನಿರ್ಜನ ಹಾಗೂ ಬೆಟ್ಟದ ಕಡಿದಾದ ಪ್ರದೇಶದಲ್ಲಿರುವ ಪೌರಾಣಿಕ ಹಿನ್ನೆಲೆಯ ವಾಣಿ ವೀರಭದ್ರೇಶ್ವರ ದೇವಸ್ಥಾನದಲ್ಲಿ ಕಳೆದ ಹಲವು ದಶಕದಿಂದ ಶಿವಲಿಂಗಕ್ಕೆ ನಿತ್ಯ ಪೂಜೆ ಸಲ್ಲಿಸಲಾಗುತ್ತಿದೆ. ಬೆಳಗ್ಗೆ ಅರ್ಚಕ ಪೂಜೆ ಸಲ್ಲಿಸಿ ಮಧ್ಯಾಹ್ನದ ಹೊತ್ತಿಗೆ ಮರಳಿ ಗಂಗಾವತಿಗೆ ಬರುತ್ತಾರೆ.

ಎಂದಿನಂತೆ ಬೆಳಗ್ಗೆ ಅರ್ಚಕರು ಪೂಜೆಗೆ ತೆರಳಿದ ಸಂದರ್ಭದಲ್ಲಿ ಘಟನೆ ಬೆಳಕಿಗೆ ಬಂದಿದ್ದು, ಕೂಡಲೇ ಗಂಗಾವತಿ ಗ್ರಾಮೀಣ ಠಾಣೆಗೆ ಆಗಮಿಸಿ ದೂರು ಸಲ್ಲಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: Asia Cup 2023: ಯೋ-ಯೋ ಟೆಸ್ಟ್​ ಪಾಸ್​ ಆದ ನಾಯಕ ರೋಹಿತ್​,ಹಾರ್ದಿಕ್​

ಐತಿಹಾಸಿಕ ಪೌರಾಣಿಕ ಹಿನ್ನಲೆ

ಭೌಗೋಳಿಕವಾಗಿ ಅತ್ಯಂತ ಪ್ರಾಶಸ್ತ್ಯದ ಸ್ಥಳ ಹಾಗೂ ಪ್ರಾಕೃತಿಕವಾಗಿ ಏಳುಬೆಟ್ಟಗಳಿಂದ ಸುತ್ತುವರೆಯಲ್ಪಟ್ಟ ಗಂಗಾವತಿಯ ಸುತ್ತಲೂ ಹತ್ತಾರು ಪೌರಾಣಿಕ ಮಹತ್ವದ ಹಿನ್ನಲೆಯ ಸ್ಥಳಗಳಿವೆ. ಈ ಪೈಕಿ ವಾಣಿ ವೀರಭದ್ರೇಶ್ವರವೂ ಒಂದು.

ಹಂಪಿಯಲ್ಲಿರುವ ವಿರೂಪಾಕ್ಷೇಶ್ವರ ದೇವರ ವಿಗ್ರಹ ಸ್ಥಾಪಿಸುವ ಸಂದರ್ಭದಲ್ಲಿಯೇ ವಿಜಯನಗರದ ಅಷ್ಟದಿಕ್ಕುಗಳಲ್ಲಿ ಒಂದೊಂದು ಶಿವಲಿಂಗು ಪ್ರತಿಷ್ಠಾಪನೆ ಮಾಡಲಾಗಿದ್ದು, ಈ ಪೈಕಿ ಹಂಪಿಯ ದಕ್ಷಿಣ ದಿಕ್ಕಿನಲ್ಲಿ ವಾಣಿ ವೀರಭದ್ರೇಶ್ವರವೂ ಒಂದು ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Chandrayaan -3 : ರೋವರ್​ ಚಂದ್ರನ ಮೇಲೆ ಅನ್ವೇಷಣೆ ಮಾಡಲು ಹೊರಟ ವಿಡಿಯೊ ಬಿಡುಗಡೆ ಮಾಡಿದ ಇಸ್ರೊ

ದೇಗುಲದ ಐತಿಹಾಸಿಕ ಹಿನ್ನಲೆಯ ಬಗ್ಗೆಯೂ ಸ್ಕಂದ ಪುರಾಣ ಮತ್ತು ಶಿವಪುರಾಣದಲ್ಲಿ ಉಲ್ಲೇಖವಾಗಿದೆ. ನಿಧಿಯ ಆಸೆಗಾಗಿ ದುಷ್ಕರ್ಮಿಗಳು ಶಿವಲಿಂಗುವನ್ನು ಕದ್ದೊಯ್ದಿರಬಹುದು ಎಂದು ಶಂಕೆ ವ್ಯಕ್ತಪಡಿಸಲಾಗಿದೆ.

Exit mobile version