ಬಸವಕಲ್ಯಾಣ: ಲಾರಿ (Lorry), ಟಿಪ್ಪರ್ ಲಾರಿಗಳನ್ನು ಕಳವು (Theft) ಮಾಡುತಿದ್ದ ಅಂತಾರಾಜ್ಯ ಕಳ್ಳರನ್ನು ((Interstate thieves) ಬಂಧಿಸುವಲ್ಲಿ ಇಲ್ಲಿಯ ಗ್ರಾಮೀಣ ಠಾಣೆ ಪೊಲೀಸರ ತಂಡ ಯಸ್ವಿಯಾಗಿದೆ.
ಮಹಾರಾಷ್ಟ್ರದ ಸೊಲ್ಲಾಪೂರ ಜಿಲ್ಲೆಯ ಮೋಹಳ ತಾಲೂಕಿನ ಪೇಣೂರ ಗ್ರಾಮದ ನಿವಾಸಿ ಲಕ್ಷ್ಮಣ್ ಚವಾರೆ, ಅಬಾ ದತ್ತಾತ್ರಿ ಡೋಕೆ ಹಾಗೂ ಲಾತೂರ ಜಿಲ್ಲೆಯ ಪಂಡರಾಪೂರ ತಾಲೂಕಿನ ಫುಲ್ ಚಿಂಚೋಳಿ ಗ್ರಾಮದ ನಿವಾಸಿ ಹರಿ ವಸಂತ ಪ್ರಕ್ಷಾಳೆ ಬಂಧಿತ ಆರೋಪಿಗಳಾಗಿದ್ದಾರೆ.
ಕಳೆದ ಜೂನ್ 27 ರಂದು ತಾಲೂಕಿನ ಹಳ್ಳಿ ಗ್ರಾಮದ ಸಮೀಪದ ಪೆಟ್ರೋಲ್ ಬಂಕ್‌ವೊಂದರ ಬಳಿ 10 ಚಕ್ರದ ಟಿಪ್ಪರ್ ಲಾರಿ ನಿಲ್ಲಿಸಿ ಅದರ ಚಾಲಕ ಮನೆಗೆ ತೆರಳಿದ್ದ. ಈ ವೇಳೆ ಕಳ್ಳರು ಟಿಪ್ಪರ್ ಲಾರಿ ಕಳವು ಮಾಡಿಕೊಂಡು ನಾಪತ್ತೆಯಾಗಿದ್ದರು.
ಇದನ್ನೂ ಓದಿ: Selfie Craze : ಸೆಲ್ಫಿ ಸಂಭ್ರಮದಲ್ಲಿ ಕೊಚ್ಚಿಹೋದ ಯುವಕ; ಅಕ್ಕನ ಮದುವೆಗೆ ಮುನ್ನ ತಮ್ಮನೇ ಇಲ್ಲವಾದ!
ಈ ಕುರಿತು ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರ ತಂಡ ಎಸ್ಪಿ ಚನ್ನಬಸವಣ್ಣ ಲಂಗೋಟಿ ಅವರ ಮಾರ್ಗದರ್ಶನದಲ್ಲಿ ಮಂಠಾಳ ವೃತ್ತ ಸಿಪಿಐ ವಿಜಯಕುಮಾರ, ಗ್ರಾಮೀಣ ಪೊಲೀಸ್ ಠಾಣೆ ಪಿಎಸ್‌ಐ ಅಂಬ್ರೀಷ್ ವಾಗ್ಮೋಡೆ, ಕ್ರೈಂ ಪಿಎಸ್‌ಐ ಬಸವರಾಜ ಕೋಡಗೆ ಅವರನ್ನೊಳಗೊಂಡ ಪೊಲೀಸರ ತಂಡ ಕಾರ್ಯಚರಣೆ ನಡೆಸಿ, ಕಳ್ಳರನ್ನು ಪತ್ತೆ ಮಾಡಿ ಅವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅಹಲ್ಯಬಾಯಿ ವೃತ್ತದ ಬಳಿ ಟಿಪ್ಪರ್ ಲಾರಿ ಇರುವ ಬಗ್ಗೆ ಮಾಹಿತಿ ಪಡೆದು 35 ಲಕ್ಷ ರೂ. ಮೌಲ್ಯದ ಟಿಪ್ಪರ್ ಲಾರಿ ಜಪ್ತಿ ಮಾಡಿಕೊಳ್ಳುವ ಜತೆಗೆ ಮೂವರು ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ: Viral Video : ಅಪ್ಪ ನಾನೀಗ ಡಾಕ್ಟರ್ ಎಂದ ಮಗಳು! ಭಾವುಕರಾದ ತಂದೆ!
ಬಂಧಿತ ಆರೋಪಿಗಳು ಕಲಬುರ್ಗಿ ಸೇರಿದಂತೆ ವಿವಿಧ ಕಡೆಗಳಲ್ಲಿ ಒಟ್ಟು 4 ಲಾರಿ ಕಳವು ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.