ಬೆಂಗಳೂರು: ದಸರೆ, ದೀಪಾವಳಿಯಂಥ ಪ್ರಮುಖ ಹಬ್ಬಗಳಿಗೆ ರಾಜಧಾನಿಯಲ್ಲಿರುವ ಜನರು ತಮ್ಮ ತವರು ಊರುಗಳಿಗೆ ಹೋಗುವ ಧಾವಂತದಲ್ಲಿರುತ್ತಾರೆ. ಈ ಸಂದರ್ಭವನ್ನು ಬಳಸಿಕೊಳ್ಳುವ ಖಾಸಗಿ ವಾಹನ, ಬಸ್ಸುಗಳ ಮಾಲೀಕರು ಯದ್ವತದ್ವಾ ಟಿಕೆಟ್ ದರ (Ticket Fare) ಹೆಚ್ಚಿಸಿ ಶೋಷಣೆಗಿಳಿಯುತ್ತಾರೆ. ಈಗ ಗಣೇಶ ಹಬ್ಬದ ಹಿನ್ನೆಲೆಯಲ್ಲೂ ಖಾಸಗಿ ಬಸ್ ಮಾಲೀಕರು ಟಿಕೆಟ್ ದರ ಹೆಚ್ಚಿಸಿದ್ದಾರೆ ಎಂದು ದೂರು ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಭಾನುವಾರ ಸಾರಿಗೆ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ, ಪರಿಶೀಲನೆ ನಡೆಸಿದರು.
ಸಾಮಾನ್ಯ ದರಕ್ಕಿಂತ ಮೂರು ಪಟ್ಟು ಹೆಚ್ಚು ಟಿಕೆಟ್ ದರವನ್ನು ಹೆಚ್ಚಿಸಲಾಗಿದೆ ಎಂಬ ದೂರು ಪ್ರಯಾಣಿಕರಿಂದ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ, ಸಾರಿಗೆ ಇಲಾಖೆ ಜಂಟಿ ಆಯುಕ್ತರ ನಿರ್ದೇಶನ್ವಯದ ಮೇರೆಗೆ ಅಧಿಕಾರಿಗಳು ಬೆಂಗಳೂರಿನ ಮೆಜೆಸ್ಟಿಕ್, ಆನಂದ್ ರಾವ್ ಸರ್ಕಲ್ ಮತ್ತು ರೇಸ್‌ಕೋರ್ಸ್ ರಸ್ತೆಗಳಿಗೆ ತೆರಳಿ ಖಾಸಗಿ ಬಸ್‌ಗಳನ್ನು ಪರಿಶೀಲಿಸಿದರು. ಟಿಕೆಟ್ ದರವನ್ನು ಹೆಚ್ಚಿಸಲಾಗಿದೆಯೇ ಎಂಬುದನ್ನು ತಪಾಸಣೆ ಮಾಡಿದರು.
ನಿಗದಿತ ದರಕ್ಕಿಂತ ಹೆಚ್ಚಿನ ಮೊತ್ತವನ್ನು ವಸೂಲಿ ಮಾಡುತ್ತಿದ್ದರೆ ಅಂಥ ಬಸ್ ಮಾಲೀಕರು ಅಥವಾ ಸಂಸ್ಥೆಗಳ ವಿರುದ್ಧ ಪ್ರಕರಣ ದಾಖಲಿಸಿ ಪರವಾನಗಿ ರದ್ದು ಮಾಡಲಾಗುವುದು ಎಂದು ಕೆ ಆರ್ ಪುರಂ ಆರ್‌ಟಿಒ ಪ್ರಭಾರ ಸಾರಿಗೆ ಅಧಿಕಾರಿ ಪ್ರಕಾಶ್ ಅವರು ತಿಳಿಸಿದ್ದಾರೆ
ಎರಡು ಪಟ್ಟು, ಮೂರು ಪಟ್ಟು ಟೆಕಿಟ್ ದರ ವಸೂಲಿಯನ್ನು ನಿಯಮ ಬಾಹಿರ ಎಂದು ಪರಿಗಣಿಸಲಾಗುತ್ತದೆ. ಹಾಗೆಯೇ ನಿಯಮ ಬಾಹಿರ ಲಗೇಜ್ ವಿರುದ್ಧವೂ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಆ.26ರಿಂದಲೇ ಅಧಿಕಾರಿಗಳು ಮೆಜೆಸ್ಟಿಕ್, ಪಾರ್ಲೆ ಟೋಲ್, ದೇವಹಹಳ್ಳಿ, ಹೊಸರೂ ರಸ್ತೆಗಳಲ್ಲಿ ಟಿಕೆಟ್ ದರ ಹೆಚ್ಚಳ ಸಂಬಂಧ ಪರಿಶೀಲನೆ ಮಾಡುತ್ತಿದ್ದಾರೆ. ಈವರೆಗೆ ಹಲವು ಪ್ರಕರಣಗಳನ್ನು ದಾಖಲಿಸಿದ್ದಾರೆ.
ಇದನ್ನೂ ಓದಿ | ಗಣೇಶನ ಹಬ್ಬಕ್ಕೆ ಊರಿಗೆ ಹೋಗ್ಬೇಕಾ? ಟಿಕೆಟ್ ಸಿಕ್ಕಿಲ್ಲ ಅಂತ ಬೇಜಾರಾಗ್ಬೇಡಿ, KSRTCಯಿಂದ 500 ಹೆಚ್ಚುವರಿ ಬಸ್