Site icon Vistara News

Koppala News: ಕುಮ್ಮಟದುರ್ಗದ ಕೋಟೆಯಲ್ಲಿ 400 ಅಡಿ ಎತ್ತರದಲ್ಲಿ ಗಾಳಿಪಟದಂತೆ ಹಾರಾಡಿದ ತಿರಂಗ

Tiranga flying like a kite at a height of 400 feet in Kummadadurga fort at Gangavathi

ಗಂಗಾವತಿ: ಕ್ಷೇತ್ರದ ವ್ಯಾಪ್ತಿಯ ನಿಸರ್ಗ ನಿರ್ಮಿತ ಗಂಡುಗಲಿ ಕುಮಾರರಾಮನ ಕುಮ್ಮಟದುರ್ಗದ ಕೋಟೆಯಲ್ಲಿ (Kummadadurga fort) ಸಮಾನ ಮನಸ್ಕ ಯುವಕರ ತಂಡವು ತಿರಂಗವನ್ನು (National Flag) ಗಾಳಿಪಟದಂತೆ (kite) ಬಾನೆತ್ತರಕ್ಕೆ ಹಾರಿಸುವ ಮೂಲಕ ಗಮನ ಸೆಳೆದಿದ್ದಾರೆ.

ಗಾಳಿಪಟ ಹಾರಿಸುವಲ್ಲಿ ಪರಿಣಿತರಾದ ಪ್ರಸನ್ನ ಮಿಶ್ರಿಕೋಟೆ ನೇತೃತ್ವದಲ್ಲಿ ಜಿ.ಆರ್. ಅರ್ಜುನ್‌ (ದ್ರೋಣ್), ರಮೇಶ, ಹರನಾಯಕ ಮತ್ತು ವಾದಿರಾಜ ದೇಸಾಯಿ ಎಂಬುವವರು ವಿಭಿನ್ನ ಯತ್ನ ಮಾಡಿದ್ದಾರೆ.

ಸ್ವತಂತ್ರ್ಯೋತ್ಸವದ ಅಂಗವಾಗಿ ಕುಮ್ಮಟದುರ್ಗದಲ್ಲಿ ಮೂರು ಮೀಟರ್ ಅಗಲದ ಬಟ್ಟೆಯಲ್ಲಿ ವಿಶೇಷವಾಗಿ ವಿನ್ಯಾಸ ಮಾಡಿಸಲಾದ ತ್ರಿವರ್ಣ ಧ್ವಜವನ್ನು ನೆಲದಿಂದ 400 ಅಡಿ ಎತ್ತರದಲ್ಲಿ ವಿಶೇಷ ಸಾಧನ ಬಳಿಸಿ ಗಾಳಿಪಟದಲ್ಲಿ ಹಾರಿಸಲಾಗಿದೆ.

ಇದನ್ನೂ ಓದಿ: Independence Day 2023 : ಭಾರತದ ಹೆಮ್ಮೆಯಿದು ತ್ರಿವರ್ಣ; ನಮ್ಮ ಧ್ವಜದ ಕುರಿತ ಈ ಸಂಗತಿಗಳು ತಿಳಿದಿರಲಿ…

ಈ ತ್ರಿವರ್ಣ ಧ್ವಜದ ಗಾಳಿಪಟವನ್ನು ಕೋಟೆಯ ಎತ್ತರದ ಗಿರಿಶಿಖರದಿಂದ ಹಾರಿಸಲಾಯಿತು, ಇದು ಸುತ್ತಮುತ್ತಲಿನ ಜನರ ಗಮನ ಸೆಳೆಯಿತು.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಯುವಕ ಅರ್ಜುನ್, ಕುಮ್ಮಟದುರ್ಗದಲ್ಲಿ ಕೇವಲ ಪ್ರಯೋಗ ಮಾಡಲಾಗಿದೆ. ಆಗಸ್ಟ್ 15ರಂದು ಗಂಗಾವತಿಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣದ ಬಳಿಕ ತಾಲೂಕು ಕ್ರೀಡಾಂಗಣದಲ್ಲಿ ತ್ರಿವರ್ಣ ಧ್ವಜವನ್ನು ಗಾಳಿಪಟದಂತೆ ಎತ್ತರಕ್ಕೆ ಹಾರಿಸಲಾಗುತ್ತಿದೆ ಎಂದರು.

Exit mobile version