Site icon Vistara News

Tomato Price : ಟೊಮ್ಯಾಟೋಗೆ 2 ಲಕ್ಷ ರೂ. ಖರ್ಚು ಮಾಡಿ 9 ಲಕ್ಷ ಲಾಭ ಮಾಡಿದ ಚಿಕ್ಕೋಡಿ ರೈತ!

Tomatto seed

ಚಿಕ್ಕೋಡಿ: ಇಲ್ಲಿನ ಹೆಬ್ಬಾಳ ಗ್ರಾಮದ ಯುವ ರೈತರೊಬ್ಬರು (Chikkodi Farmer) ಟೊಮ್ಯಾಟೊ(Tomato Price) ಬೆಳೆದು ಲಕ್ಷ ಲಕ್ಷ ಸಂಪಾದಿಸಿದ್ದಾರೆ. ಈ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ.

ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಹೆಬ್ಬಾಳ ಗ್ರಾಮದ ಮಹೇಶ ಹಿರೇಮಠ ಅಭೂತಪೂರ್ವ ಸಾಧನೆ ಮಾಡಿದ ಯುವ ರೈತ. ಬಿಎ ಪದವೀಧರ (BA graduate) ಆಗಿರುವ ಮಹೇಶ್ ಹಿರೇಮಠ, ಜಮೀನು ಇದ್ದರೂ ಕೆಲಸ ಇಲ್ಲ ಅನ್ನೋ ನಿರುದ್ಯೋಗಿಗಳಿಗೆ ಮಾದರಿಯಾಗಿದ್ದಾರೆ.

ಹೆಬ್ಬಾಳ ಗ್ರಾಮದ ರೈತ ಮಹೇಶ ಹಿರೇಮಠ

20 ಗುಂಟೆಯಲ್ಲಿ ಟೊಮ್ಯಾಟೊ ಬೆಳೆದು 11 ಲಕ್ಷ ರೂಪಾಯಿಯನ್ನು ಸಂಪಾದನೆ ಮಾಡಿದ್ದಾರೆ. ಒಟ್ಟಾರೆಯಾಗಿ ಎರಡು ಲಕ್ಷ ರೂಪಾಯಿ ಖರ್ಚು ಮಾಡಿದ್ದು, 9 ಲಕ್ಷ ರೂಪಾಯಿ ಆದಾಯ ಗಳಿಸಿದ್ದಾರೆ. ಮಾರ್ಚ್ ತಿಂಗಳಲ್ಲಿ 20 ಗುಂಟೆಯಲ್ಲಿ 3700 ಟೊಮ್ಯಾಟೊ ಸಸಿಯನ್ನು ಇವರು ನಾಟಿ ಮಾಡಿದ್ದರು.

ಇದನ್ನೂ ಓದಿ: Video Viral : ಸೈದಾಪುರದಲ್ಲಿ ಸೀರೆ ಕದ್ದ ನಾರಿಯರಿಗೆ ಧರ್ಮದೇಟು!

ಹನಿ ನೀರಾವರಿ ಬಳಕೆ

ವೈಜ್ಞಾನಿಕ ಕೃಷಿ, ಹನಿ ನೀರಾವರಿ ಮೂಲಕ ಇವರು ಟೊಮ್ಯಾಟೊವನ್ನು ಬೆಳೆದಿದ್ದಾರೆ. ಕಳೆದ 45 ದಿನಗಳಿಂದ ಟೊಮ್ಯಾಟೊ ಕೊಯ್ಲನ್ನು ಆರಂಭಿಸಿದ್ದರು. ಫಸಲು ಬರುತ್ತಿದ್ದಂತೆ ಟೊಮ್ಯಾಟೊಗೆ ಬಂಗಾರದ ಬೆಲೆ ಸಿಕ್ಕಿದೆ. 45 ದಿನಗಳಲ್ಲಿ 20 ಟನ್ 400 ಕೆಜಿಯಷ್ಟು ಟೊಮ್ಯಾಟೊ ಇಳುವರಿಯನ್ನು ಇವರು ಪಡೆದುಕೊಂಡಿದ್ದಾರೆ. ಸಂಕೇಶ್ವರ ಎಪಿಎಂಸಿಗೆ ಟೊಮ್ಯಾಟೊ ಸರಬರಾಜು ಮಾಡಿದ್ದಾರೆ.

Exit mobile version