Site icon Vistara News

Tourists Rescued : ಪಿಂಡ ಪ್ರದಾನಕ್ಕೆ ಬಂದ ಯುವಕ ಸಮುದ್ರಪಾಲು; ರಕ್ಷಣೆ ಮಾಡಿದ್ದೆ ರೋಚಕ

Drowned in sea rescued

ಕಾರವಾರ: ವ್ಯಕ್ತಿಯೊಬ್ಬರು ಹುಬ್ಬಳ್ಳಿಯಿಂದ ಗೋಕರ್ಣಕ್ಕೆ ಬಂದಿದ್ದರು. ಆತ್ಮೀಯರೊಬ್ಬರನ್ನು ಕಳೆದುಕೊಂಡಿದ್ದ ಅವರು ಪಿಂಡ ಪ್ರದಾನ ಮಾಡಲು ಬಂದಿದ್ದರು. ಸಮುದ್ರಕ್ಕೆ ಇಳಿದು ಪಿಂಡ ಪ್ರದಾನ ಮಾಡಬೇಕೆಂದಾಗ ಅಲೆಗಳ ಹೊಡೆತಕ್ಕೆ ಸಿಲುಕಿ ಸಮುದ್ರ ಪಾಲಾಗಿದ್ದರು. ಅಯ್ಯೋ ಇನ್ನೇನು ನನ್ನ ಜೀವ ಹೋಯ್ತು ಎನ್ನುವಾಗಲೇ ಅಲ್ಲಿದ್ದ ಜೀವ ರಕ್ಷಕರು ಸಮುದ್ರಕ್ಕೆ ಜಿಗಿದು ವ್ಯಕ್ತಿಯನ್ನು (Tourists Rescued) ರಕ್ಷಿಸಿದ್ದಾರೆ.

ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣ ಮುಖ್ಯ ಕಡಲತೀರದಲ್ಲಿ ಈ ಘಟನೆ ನಡೆದಿದೆ. ಹುಬ್ಬಳ್ಳಿಯ ಎಲ್.ವಿ.ಪಾಟೀಲ್ ಪ್ರಾಣಾಪಾಯದಿಂದ ಪಾರಾದವರು. ಹುಬ್ಬಳ್ಳಿಯಿಂದ ಗೋಕರ್ಣಕ್ಕೆ ಪಿಂಡ ಪ್ರದಾನ ಮಾಡಲು ಬಂದಿದ್ದರು. ಸಮುದ್ರಕ್ಕೆ ಇಳಿದಾಗ ಅಲೆಗಳ ಅಬ್ಬರಕ್ಕೆ ಸಿಲುಕಿ ಮುಳುಗುತ್ತಿದ್ದರು.

ಇದನ್ನು ಗಮನಿಸಿದ ಶಿವಪ್ರಸಾದ ಅಂಬಿಗ, ಲೋಕೇಶ ಹರಿಕಂತ್ರ ಎಂಬುವವರು ಕೂಡಲೇ ಸಮುದ್ರಕ್ಕೆ ಜಿಗಿದು ಸಮುದ್ರಪಾಲಾಗಿದ್ದ ಎಲ್‌.ವಿ ಪಾಟೀಲ್‌ನನ್ನು ರಕ್ಷಣೆ ಮಾಡಿದ್ದಾರೆ. ಆಪತ್ಭಾಂದವರಾಗಿ ಬಂದ ಇಬ್ಬರು ಲೈಫ್‌ಗಾರ್ಡ್‌ಗಳಿಗೆ ಪಾಟೀಲ್‌ ಧನ್ಯವಾದವನ್ನು ತಿಳಿಸಿದ್ದಾರೆ. ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಪ್ರವಾಸಿಗನ ಜೀವ ಉಳಿಸಿದ ಲೈಫ್‌ ಗಾರ್ಡ್‌ಗಳು

ಇದನ್ನೂ ಓದಿ: Bidar News : ನೀರಿನ ಹೊಂಡದಲ್ಲಿ ಕಾಲು ಜಾರಿ ಬಿದ್ದು ಬಾಲಕರಿಬ್ಬರು ದುರ್ಮರಣ!

ಗೋಕರ್ಣ ಕಡಲಲ್ಲಿ ಮುಳುಗುತ್ತಿದ್ದ ಒಂದೇ ಕುಟುಂಬದ 7 ಮಂದಿ ರಕ್ಷಣೆ

ಕಾರವಾರ: ಗೋಕರ್ಣ ಕಡಲ ತೀರದ (Gokarna coast) ಜೀವ ರಕ್ಷಕ ಪಡೆ ಯುವಕರು ಏಳು ಮಂದಿಯ ಪ್ರಾಣವನ್ನು ರಕ್ಷಿಸಿದ್ದಾರೆ (Seven people Rescued). ಒಂದೇ ಕುಟುಂಬದ ಪ್ರವಾಸಿಗರು ನೀರಿನಲ್ಲಿ ಕೊಚ್ಚಿ ಹೋಗುವ ಅಪಾಯದಲ್ಲಿ ಸಿಲುಕಿದಾಗ ಅವರ ರಕ್ಷಣೆ (Tourists Rescued) ಮಾಡಲಾಗಿದೆ.

ಹುಬ್ಬಳ್ಳಿಯ ಕುಟುಂಬವೊಂದು ಗೋಕರ್ಣಕ್ಕೆ ಪ್ರವಾಸ ಬಂದಿತ್ತು. ಸಮುದ್ರವನ್ನು ಕಂಡೊಡನೆ ಎಲ್ಲರೂ ಖುಷಿಯಿಂದ ಕುಣಿದಾಡಿದ್ದರು. ಹಾಗೆ ನೀರಿಗೆ ಇಳಿದು ಆಟವಾಡುತ್ತಾ ಆಟವಾಡುತ್ತಾ ಮುಂದಕ್ಕೆ ಸಾಗಿದ್ದರು. ಕೊನೆಗೆ ನೀರಿನಲ್ಲಿ ಮುಳುಗಲು ಆರಂಭಿಸಿದಾಗ ಒಬ್ಬರನ್ನೊಬ್ಬರು ರಕ್ಷಿಸುವ ಪ್ರಯತ್ನ ಮಾಡಿದರು. ಕೊನೆಗೆ ಎಲ್ಲರೂ ಮುಳುಗುವ ಆಪಾಯಕ್ಕೆ ಒಳಗಾದರು. ಆಗ ರಕ್ಷಣೆಗೆ ಧಾವಿಸಿದ ಲೈಫ್‌ ಗಾರ್ಡ್‌ಗಳು ಎಲ್ಲ ಏಳು ಮಂದಿಯನ್ನು ನೀರಿನಿಂದ ಮೇಲೆತ್ತಿ ತಂದರು.

ಹುಬ್ಬಳ್ಳಿಯಿಂದ ಬಂದಿದ್ದ ಪ್ರವಾಸಿಗರ ತಂಡದಲ್ಲಿದ್ದ ಪರಶುರಾಮ(44), ರುಕ್ಮಿಣಿ (38), ಧೀರಜ್ (14), ಅಕ್ಷರ(14), ಖುಷಿ (13), ದೀಪಿಕಾ (12), ನಂದಕಿಶೋರ (10) ಅವರೇ ಸಮುದ್ರದಲ್ಲಿ ಮುಳುಗುವ ವೇಳೆ ರಕ್ಷಣೆ ಮಾಡಲ್ಪಟ್ಟವರು. ಇವರು ಒಂದು ತಂಡವಾಗಿ ಗೋಕರ್ಣಕ್ಕೆ ಬಂದಿದ್ದರು. ನೀರಲ್ಲಿ ಈಜಲು ತೆರಳಿದ ವೇಳೆ ಅಲೆಗಳಿಗೆ ಸಿಲುಕಿ ಮುಳುಗುವ ಹಂತದಲ್ಲಿದ್ದಾಗ ಲೈಫ್‌ಗಾರ್ಡ್ ಸಿಬ್ಬಂದಿ ಶಿವಪ್ರಸಾದ ಅಂಬಿಗ, ಲೋಕೇಶ್ ಹರಿಕಾಂತ ಅವರು ರಕ್ಷಣೆ ಮಾಡಿದರು. ಒಂದೇ ಕುಟುಂಬದ ಬೇರೆ ಬೇರೆ ಕವಲುಗಳಿಗೆ ಸೇರಿದ ಈ ಹಿರಿಯರು ಮತ್ತು ಮಕ್ಕಳು ತಮ್ಮ ಜೀವ ರಕ್ಷಣೆ ಮಾಡಿದ ರಕ್ಷಕರಿಗೆ ಧನ್ಯವಾದ ಹೇಳಿದರು. ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಸೆ. 18ರಂದು ಐವರನ್ನು ರಕ್ಷಿಸಲಾಗಿತ್ತು

ಸೆ. 18ರಂದು ಕೂಡಾ ಇದೇ ರೀತಿ ಗೋಕರ್ಣದ ಸಮುದ್ರದಲ್ಲಿ (Gokarna Beach‌) ಈಜಲು ಹೋಗಿ ಮುಳುಗುತ್ತಿದ್ದ ಐವರು ಪ್ರವಾಸಿಗರನ್ನು ರಕ್ಷಣೆ ಮಾಡಲಾಗಿತ್ತು. ಋತುರಾಜ್ (26), ಶ್ರೀಖಾಂಚು ಗುಪ್ತಾ (28), ಪ್ರಶಾಂತ ಚಂದ್ರಶೇಖರ್ (28), ಆರುಷಿ ಬನ್ಸಾಲ್ (27), ರೀತು ಪರ್ಹಾದಾಸ್ ರಕ್ಷಣೆಗೊಳಗಾದ ಪ್ರವಾಸಿಗರು ಎಂದು ಗುರುತಿಸಲಾಗಿದೆ. ಇವರು ಬೆಂಗಳೂರಿನ‌ ಉದ್ಯೋಗಿಗಳಾಗಿದ್ದು, ಗಣೇಶ ಚತುರ್ಥಿಗೆ (Ganesh Chaturthi) ರಜೆ ಇರುವ ಹಿನ್ನೆಲೆಯಲ್ಲಿ ಗೋಕರ್ಣಕ್ಕೆ ಪ್ರವಾಸಕ್ಕೆಂದು ಬಂದಿದ್ದರು.

ಸಮುದ್ರದಲ್ಲಿ ಆಟವಾಡಲು ಇಳಿದಿದ್ದ ಇವರು ಅಲೆಗಳ ಹೊಡೆತಕ್ಕೆ ಸಿಲುಕಿ ದಡಕ್ಕೆ ಬರಲಾಗದೆ ಎಲ್ಲರೂ ಮುಳುಗುವ ಸ್ಥಿತಿಯಲ್ಲಿದ್ದರು. ಈ ವೇಳೆ ಸಹಾಯಕ್ಕಾಗಿ ಕೂಗಿಕೊಂಡಿದ್ದಾರೆ. ಅಲ್ಲೇ ಸಮೀಪ ಇದ್ದ ಲೈಫ್‌ಗಾರ್ಡ್ ಸಿಬ್ಬಂದಿಯು ಕೂಡಲೇ ಸಮುದ್ರಕ್ಕೆ ಜಿಗಿದು ಎಲ್ಲ ಪ್ರವಾಸಿಗರನ್ನು ರಕ್ಷಣೆ ಮಾಡಿದ್ದಾರೆ. ಇವರಲ್ಲಿ ಇಬ್ಬರು ಪ್ರವಾಸಿಗರು ತೀವ್ರ ಅಸ್ವಸ್ಥಗೊಂಡಿದ್ದರು. ಅಸ್ವಸ್ಥಗೊಂಡಿದ್ದ ಪ್ರವಾಸಿಗರನ್ನು ಕೂಡಲೇ ಗೋಕರ್ಣ ಪ್ರಾಥಮಿಕ ಸಮುದಾಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿತ್ತು.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version