Site icon Vistara News

TPL Season 3: ಟಿಪಿಎಲ್‌ 3 ಟೀಂ ಲೋಗೋ ಲಾಂಚ್; ಜನವರಿಯಲ್ಲಿ ಕಿರುತೆರೆ ಕಲಾವಿದರ ಕ್ರಿಕೆಟ್ ಟೂರ್ನಿ

TPL Season 3 Logo Launched

ಬೆಂಗಳೂರು: ಕ್ರಿಕೆಟ್‌ಗೂ, ಸಿನಿಮಾಗೂ ಒಂದು ನಂಟು ಇದ್ದೇ ಇದೆ. ಕಲಾವಿದರು ಸಹ ಕ್ರಿಕೆಟ್ ಆಡಲು ಇಷ್ಟ ಪಡುತ್ತಾರೆ. 2024ರ ಜನವರಿಯಲ್ಲಿ ಟೆಲಿವಿಷನ್ ಪ್ರೀಮಿಯರ್ ಲೀಗ್ -3 ನಡೆಯಲಿದೆ. ಹೀಗಾಗಿ ಬೆಂಗಳೂರಿನ ಎಂಎಂ ಲೆಗಸಿಯಲ್ಲಿ ಟಿಪಿಎಲ್ ಸೀಸನ್-3 (TPL Season 3) ಟೀಂ ಲೋಗೋ ಬಿಡುಗಡೆ ಮಾಡಲಾಯಿತು.

ಕಲಾವಿದರು ಮತ್ತು ತಂತ್ರಜ್ಞರ ಬದುಕಿಗೆ ಆಸರೆಯಾಗುವ ಉದ್ದೇಶದಿಂದ ಎನ್ 1 ಕ್ರಿಕೆಟ್ ಅಕಾಡೆಮಿಯ ಬಿ.ಆರ್.ಸುನೀಲ್ ಕುಮಾರ್ ಅವರ ನೇತೃತ್ವದಲ್ಲಿ ಟೆಲಿವಿಷನ್ ಪ್ರೀಮಿಯರ್ ಲೀಗ್ ನಡೆಯುತ್ತಿದೆ. ಈಗಾಗಲೇ ಯಶಸ್ವಿಯಾಗಿ ಎರಡು ಸೀಸನ್ ಮುಗಿದಿದ್ದು, ಮೂರನೇ ಸೀಸನ್ ಜನವರಿ ತಿಂಗಳಲ್ಲಿ ಆರಂಭವಾಗಲಿದೆ. ಕಾರ್ಯಕ್ರಮದಲ್ಲಿ ವೀರಶೈವ ವೇದಿಕೆ ರಾಷ್ಟ್ರೀಯ ಅಧ್ಯಕ್ಷ ಜಯಂತ್ ಕುಮಾರ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಹುಬ್ಬಳ್ಳಿಯಲ್ಲಿ TPL ಸೀಸನ್ 3

ಬಳಿಕ ಮಾತನಾಡಿದ ಜಯಂತ್ ಕುಮಾರ್ ಅವರು, TPL ಸೀಸನ್ 3 ಕಾರ್ಯಕ್ರಮ ಹುಬ್ಬಳ್ಳಿಯಲ್ಲಿ ಜನವರಿ 24 ರಿಂದ 28ರವರೆಗೆ 5 ದಿನ ಜರುಗಲಿದೆ. ಈ TPL ಸೀಸನ್‌ಗೆ ನಮ್ಮ ಸಂಪೂರ್ಣ ಬೆಂಬಲ ಹಾಗೂ ಯಾವುದೇ ಸಹಾಯ ಮಾಡಲು ನಾನು ಸಿದ್ಧ. ಮುಂದಿನ ಕಾರ್ಯಕ್ರಮದಲ್ಲಿ ಕೇಂದ್ರ ಹಾಗೂ ರಾಜ್ಯ ಸಚಿವರು ಭಾಗವಹಿಸಲಿದ್ದಾರೆ ಎಂದು ಆಯೋಜಕರಾದ ಸುನೀಲ್ ಕುಮಾರ್ ಬಿ.ಆರ್. ಅವರಿಗೆ ಹೇಳಿದರು.

ಇದನ್ನೂ ಓದಿ | Rakshit Shetty: ʻಸಪ್ತ ಸಾಗರದಾಚೆ ಎಲ್ಲೋʼ ಭಾಗ 2 ರಿಲೀಸ್‌ ಡೇಟ್‌ ಅನೌನ್ಸ್‌!

ಟಿಪಿಎಲ್ ಆಯೋಜಕ ಸುನಿಲ್ ಕುಮಾರ್ ಬಿ. ಆರ್ ಮಾತನಾಡಿ, ಟೂರ್ನಿಯಲ್ಲಿ ಒಟ್ಟಾರೆ 10 ತಂಡಗಳು ಭಾಗಿಯಾಗಲಿದ್ದು, 150 ಫ್ಲೇಯರ್ಸ್ ಇರಲಿದ್ದಾರೆ. ಒಂದು ತಂಡದಲ್ಲಿ 15 ಜನ ಇರುತ್ತಾರೆ. ಒಂದು ಗ್ರೂಪ್‌ಗೆ 4 ಲೀಗ್ ಮ್ಯಾಚ್ ಇರುತ್ತದೆ. ಲೀಗ್ ಮ್ಯಾಚ್ ಬಳಿಕ ಸೆಮಿ ಫೈನಲ್, ಫೈನಲ್ ಇರುತ್ತದೆ. ಒಟ್ಟು 23 ಪಂದ್ಯ ಇರಲಿದೆ. ಹುಬ್ಬಳ್ಳಿಯಲ್ಲಿ ಈ ಬಾರಿ ಕ್ರಿಕೆಟ್ ಪಂದ್ಯಾವಳಿ ನಡೆಯಲಿದ್ದು, ಜನವರಿ 24 ರಿಂದ 28ರವೆಗೆ ಪಂದ್ಯ ನಡೆಯಲಿ ಎಂದು ತಿಳಿಸಿದರು.

10 ತಂಡಗಳು ಭಾಗಿ

ಅಶ್ವಸೂರ್ಯ ರೈಡರ್ಸ್, ಗೋಲ್ಡನ್ ಈಗಲ್, KKR ಮೀಡಿಯಾ ಹೌಸ್, ಖುಷಿ 11, AVR tuskers, ರಾಸು ವಾರಿಯರ್, ಭಜರಂಗಿ ಬಾಯ್ಸ್, The bull squad, Insane Cricket team, GLR ವಾರಿಯರ್ಸ್ ಎಂಬ 10 ತಂಡಗಳು ಭಾಗಿಯಾಗಲಿದ್ದು, ಒಟ್ಟು 102 ಸೆಲೆಬ್ರಿಟಿಗಳು ಈ ಕಾರ್ಯಕ್ರಮಕ್ಕೆ ಸಾಥ್ ಕೊಡಲಿದ್ದಾರೆ. ಈ 10 ತಂಡಗಳಿಗೂ ಅಂಬಾಸಡರ್ ಹಾಗೂ ಓನರ್‌ಗಳಿರಲಿದ್ದಾರೆ. ಎ. ವಿ. ಆರ್ ಗ್ರೂಪ್ಸ್‌ನ ಎಚ್.ವೆಂಕಟೇಶ್ ರೆಡ್ಡಿ ಹಾಗೂ ಅರವಿಂದ್ ವೆಂಕಟೇಶ್ ರೆಡ್ಡಿ ಟೈಟಲ್ ಸ್ಪಾನ್ಸರ್ ಮಾಡಿದ್ದಾರೆ. ಟಿಪಿಎಲ್‌ ಸೀಸಿನ್‌ 3 ಬ್ರ್ಯಾಂಡ್ ಅಂಬಾಸಿಡರ್ ಆಗಿ ನಟಿ ರಾಗಿಣಿ ದ್ವಿವೇದಿ ಆಯ್ಕೆಯಾಗಿದ್ದಾರೆ.

ತಂಡಗಳ ನಾಯಕ ಮತ್ತು ಮಾಲೀಕರು

ಇದನ್ನೂ ಓದಿ | Shiva Rajkumar: ಶಿವರಾಜ್‌ಕುಮಾರ್‌ ಅಭಿನಯದ ಘೋಸ್ಟ್‌ ಸಿನಿಮಾ ಕಲೆಕ್ಷನ್‌ ಎಷ್ಟು?

ಈ ಬಾರಿಯ ಟೆಲಿಮಿಷನ್ ಪ್ರೀಮಿಯರ್ ಲೀಗ್ ಸೀಸನ್-3ನಲ್ಲಿ ಮಾಧ್ಯಮದವರಿಗೂ ಅವಕಾಶ ನೀಡಲಾಗಿದೆ. ಈ ಬಾರಿ ಪಂದ್ಯಾವಳಿ ವಿಶೇಷ ಎಂದರೆ ಎನ್ 1 ಕ್ರಿಕೆಟ್ ಅಕಾಡೆಮಿಯಿಂದ ಮ್ಯಾನ್ ಆಫ್ ದಿ ಸಿರೀಸ್ ಪಟ್ಟ ಪಡೆದವರಿಗೆ ಕಾರು, ಆರೆಂಜ್ ಕ್ಯಾಪ್ ಹೋಲ್ಡರ್ (batsman), ಪರ್ಪಲ್ ಕ್ಯಾಪ್ ಹೋಲ್ಡರ್(bowler) ಪಡೆದವರಿಗೆ ಬೈಕ್ ಕೊಡಲಾಗುತ್ತದೆ.

Exit mobile version