Site icon Vistara News

Traffic Fine: ಸಂಚಾರ ನಿಯಮ ಉಲ್ಲಂಘನೆ; ರಾಜಧಾನಿಯಲ್ಲಿ 2ನೇ ದಿನ 6.8 ಕೋಟಿ ರೂಪಾಯಿ ಬಾಕಿ ದಂಡ ವಸೂಲಿ

Traffic fine

#image_title

ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆಯ ಬಾಕಿ ದಂಡ ಪಾವತಿಸಲು ಸಂಚಾರ ಪೊಲೀಸ್‌ ಇಲಾಖೆ ಶೇ.50 ರಿಯಾಯಿತಿ ಆಫರ್‌ ನೀಡಿರುವ ಹಿನ್ನೆಲೆಯಲ್ಲಿ ಜುಲ್ಮಾನೆ (Traffic fine) ಪಾವತಿಸಲು ವಾಹನ ಸವಾರರು ಮುಗಿಬಿದ್ದಿದ್ದಾರೆ. ರಾಜ್ಯದಾದ್ಯಂತ ದಂಡ ಪಾವತಿಸಲು ಅವಕಾಶವಿದೆ. ಆದರೆ, 2ನೇ ದಿನ ಬೆಂಗಳೂರಿನಲ್ಲೇ ಬರೋಬ್ಬರಿ 6,80,72,500 ರೂಪಾಯಿ ದಂಡ ವಸೂಲಿಯಾಗಿದೆ.

ಶನಿವಾರ ಬೆಳಗ್ಗಿನಿಂದ ಸಂಜೆ 5 ಗಂಟೆಯವರೆಗೆ ವಿವಿಧ ಆ್ಯಪ್ ಹಾಗೂ ವೆಬ್‌ಸೈಟ್‌ಗಳಿಂದ ದಂಡ ವಸೂಲಿ ಮಾಡಲಾಗಿದೆ. ಇದರಲ್ಲಿ ಪಿಡಿಎ ಮೂಲಕ 114685 ಪ್ರಕರಣಗಳಿಂದ 2,72,45,400 ಕೋಟಿ ರೂಪಾಯಿ, ಪೇಟಿಎಂ ಆ್ಯಪ್‌ನಿಂದ 1,06,980 ಕೇಸ್‌ಗಳಲ್ಲಿ 3, 27,81,350 ಕೋಟಿ ರೂಪಾಯಿ, ಟಿಎಂಸಿ ಕೇಂದ್ರದಲ್ಲಿ 724 ಪ್ರಕರಣಗಳಿಗೆ 1,86,800 ರೂಪಾಯಿ, ಬೆಂಗಳೂರು ಒನ್ ಕೇಂದ್ರದಲ್ಲಿ 30,131 ಕೇಸ್‌ಗಳಿಗೆ 78,58,950 ರೂಪಾಯಿ ವಸೂಲಿಯಾಗಿದ್ದು, ಒಟ್ಟು 2,52,520 ಪ್ರಕರಣಗಳಲ್ಲಿ 6,80,72,500 ಕೋಟಿ ರೂಪಾಯಿ ಬಾಕಿ ದಂಡ ವಸೂಲಿಯಾಗಿದೆ.

ಇದನ್ನೂ ಓದಿ | Traffic Fine: ಓವರ್‌ ಸ್ಪೀಡ್‌ಗಾಗಿ ಟ್ರಾಫಿಕ್ ಫೈನ್ ಕಟ್ಟಿದ ಶಾಸಕ ಎಲ್‌. ನಾಗೇಂದ್ರ; ಇವರಿಗೂ ಸಿಕ್ತು ಶೇ. 50 ರಿಯಾಯ್ತಿ!

ಹಾಗೆಯೇ ಮೊದಲ ದಿನ ಶುಕ್ರವಾರ 2,01,828 ಪ್ರಕರಣಗಳಲ್ಲಿ 5,61,45,000 ರೂ. ದಂಡ ಸಂಗ್ರಹವಾಗಿತ್ತು. ಎರಡು 2 ದಿನದಲ್ಲಿ (ಫೆ.3 ಮತ್ತು 4 ರಂದು) 4,77,298 ಪ್ರಕರಣಗಳಲ್ಲಿ ಒಟ್ಟು 13,81,13,621 ರೂಪಾಯಿ ಸಂಗ್ರಹವಾಗಿದೆ. ಸಂಚಾರ ನಿಯಮ ಉಲ್ಲಂಘನೆಯ ಬಾಕಿ ದಂಡ ಪಾವತಿಸಲು ಫೆ.11ರವರೆಗೆ ಅವಕಾಶ ನೀಡಲಾಗಿದೆ. ಈ ಅವಧಿಯೊಳಗೆ ಬಾಕಿ ದಂಡ ಪಾವತಿಸಿದವರಿಗೆ ಶೇ.50 ರಿಯಾಯಿತಿ ಸಿಗಲಿದೆ.

ರಾಜ್ಯಾದ್ಯಂತ ಸಂಚಾರ ನಿಯಮ ಉಲ್ಲಂಘನೆ ಮಾಡಿರುವ ವಾಹನ ಸವಾರರಿಂದ ಒಟ್ಟು 530 ಕೋಟಿ ರೂಪಾಯಿ ಬಾಕಿ ಉಳಿದಿದ್ದು, ಈ ಪೈಕಿ ಬೆಂಗಳೂರು ಮಹಾನಗರವೊಂದರಲ್ಲೇ 500 ಕೋಟಿ ರೂಪಾಯಿ ಬಾಕಿ ದಂಡ ವಸೂಲಿಯಾಗಬೇಕಿದೆ.

Exit mobile version