ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆಯ ಬಾಕಿ ದಂಡ (Traffic Fine) ಪಾವತಿಗೆ ಸಂಚಾರ ಪೊಲೀಸ್ ಇಲಾಖೆಯಿಂದ ನೀಡಿರುವ ಶೇ. 50 ರಿಯಾಯಿತಿ ಆಫರ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಶೇ. 50 ರಿಯಾಯಿತಿಗೆ ಕೊನೆಯ ದಿನವಾದ ಶನಿವಾರ (ಫೆ.11) ರಾಜಧಾನಿಯಲ್ಲಿ 9,45,887 ಪ್ರಕರಣಗಳಿಲ್ಲಿ ಬರೋಬ್ಬರಿ 31,26,76, 500 ರೂಪಾಯಿ ಸಂಗ್ರಹವಾಗಿದೆ.
ವಾಹನ ಸವಾರರಿಂದ ಹತ್ತು ದಿನಗಳಲ್ಲಿ 41,20,626 ಕೇಸ್‌ಗಳಲ್ಲಿ ಒಟ್ಟು 120,76,46,161 ರೂಪಾಯಿ ದಂಡ ವಸೂಲಿ ಮಾಡಲಾಗಿದೆ. ಕೊನೆಯ ದಿನ ಶನಿವಾರ ರಾತ್ರಿ 11 ಗಂಟೆಯಾದರೂ ಮಾಗಡಿ ರಸ್ತೆ ಠಾಣೆ ಸೇರಿ ಹಲವು ಸಂಚಾರ ಪೊಲೀಸ್ ಠಾಣೆಗಳ ಮುಂದೆ ಬಾಕಿ ದಂಡ ಪಾವತಿಸಲು ವಾಹನ ಸವಾರರು ಸಾಲುಗಟ್ಟಿ ನಿಂತಿರುವುದು ಕಂಡುಬಂತು.
ಮಾಗಡಿ ಸಂಚಾರ ಪೊಲೀಸ್ ಠಾಣೆಯಲ್ಲಿ ದಂಡ ರಾತ್ರಿ 11.15ಕ್ಕೆ ಕೌಂಟರ್ ಮುಚ್ಚಿದ್ದರಿಂದ ದಂಡ ಪಾವತಿಗೆ ಬಂದ ಜನರು ಆಕ್ರೋಶ ಹೊರಹಾಕಿದರು. 12 ಗಂಟೆಯವರೆಗೂ ಸಮಯವಿದ್ದರೂ 11 .15ಕ್ಕೆ ಕ್ಲೋಸ್ ಮಾಡಿದ್ದಾರೆ. ಇನ್ನೂ ಸ್ವಲ್ಪ ದಿನ ದಂಡ ಪಾವತಿ ಅವಧಿ ವಿಸ್ತರಿಸಬೇಕು ಎಂದು ಮನವಿ ಮಾಡಿದರು.
ಇದನ್ನೂ ಓದಿ | Aero India 2023: ಯಲಹಂಕ ವಾಯುನೆಲೆಯಲ್ಲಿ ಫೆ.13ರಿಂದ ಏರೋ ಇಂಡಿಯಾ ಪ್ರದರ್ಶನ; ಪಿಎಂ ಮೋದಿ ವಿಶೇಷ ಆಕರ್ಷಣೆ!