Site icon Vistara News

ಟ್ರಾಫಿಕ್‌ ರೂಲ್ಸ್‌ ಉಲ್ಲಂಘಿಸದಿರಿ, ದಂಡ ಇನ್ನೂ ಹೆಚ್ಚಿಸಲಾಗಿದೆ!

ಸಂಚಾರಿ ನಿಯಮ ಉಲ್ಲಂಘನೆ

ಬೆಂಗಳೂರು: ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಸೂಚನೆ ಮೇರೆಗೆ 91 ಸಂಚಾರ ನಿಯಮಗಳ‌ ದರ ಪರಿಷ್ಕರಿಸಿ ಆದೇಶ ಸಂಚಾರ ಪೊಲೀಸ್‌ ವಿಭಾಗ ಆದೇಶ ಹೊರಡಿಸಿದೆ.

ಪ್ರಮುಖ ಸಂಚಾರ ನಿಯಮ ಉಲ್ಲಂಘನೆಗೆ ದಂಡದ ಮೊತ್ತ ಎಷ್ಟು?

  1. ಅಜಾಗರೂಕತೆಯಿಂದ ಚಾಲನೆ: 1000 ರೂ.
  2. ಅತಿ ವೇಗದ ಚಾಲನೆ: 2ಡಬ್ಲೂ/3ಡಬ್ಲೂ/ಎಲ್‌ಎಮ್‌ವಿ: 1000 ರೂ.
  3. ಎಮ್‌ಜಿವಿ/ಎಮ್‌ಪಿವಿ/ಎಚ್‌ಜಿವಿ/ಎಚ್‌ಪಿವಿ ಮತ್ತು ಇತರೆ: 2000 ರೂ.
  4. ರಸ್ತೆ ಮಧ್ಯದಲ್ಲಿ ವಾಹನ ನಿಲ್ಲಿಸಿದರೆ: 1000 ರೂ.
  5. ರಿಕ್ಷಾ ಚಾಲಕರು ಸಮವಸ್ತ್ರ ಧರಿಸದೇ ಇದ್ದರೆ: 500 ರೂ.
  6. ಡಿ.ಸಿ ಆದೇಶ ಉಲ್ಲಂಘನೆ: ನ್ಯಾಯಾಲಯದಿಂದ ದಂಡ
  7. ಕರ್ಕಶ ಹಾರ್ನ್: 500 ರೂ.
  8. ಅಮಲು ಪದಾರ್ಥ ಸೇವನೆ: ನ್ಯಾಯಾಲಯದಿಂದ ದಂಡ
  9. ಹೆಡ್ ಲೈಟ್ ಇಲ್ಲದೇ ವಾಹನ ಚಾಲನೆ: 500 ರೂ.
  10. ಕಣ್ಣು ಕುಕ್ಕುವ ಹೆಡ್‌ ಲೈಟ್: 500 ರೂ.
  11. ಸರಕು ವಾಹನದಲ್ಲಿ ಜನರನ್ನು ಸಾಗಿಸಿದರೆ: ನ್ಯಾಯಾಲಯದಿಂದ ದಂಡ, ಡಿಎಲ್‌, ಪರ್ಮಿಟ್‌, ಆರ್‌ ಸಿ ಕ್ಯಾನ್ಸಲ್
  12. ಕ್ಯಾಬಿನ್‌ನಲ್ಲಿ ಜನ: 200 ರೂ. ಪ್ರತಿ ಪ್ರಯಾಣಿಕರಿಗೆ
  13. ಚಾಲಕ ಹಸಿಮೀನು ಹೇರಿ ವಾಹನ ಸಾಗಿಸಿದರೆ: 500 ರೂ.
  14. ಪರವಾನಗಿ ನಿಬಂಧನೆ ಉಲ್ಲಂಘನೆ ಮಾಡಿದರೆ: ನ್ಯಾಯಾಲಯದಿಂದ ದಂಡ
  15. ಪೊಲೀಸ್‌ ನೋಟಿಸ್‌ಗೆ ಸಹಿ ಹಾಕದಿರುವುದು/ ಅಸಭ್ಯ ವರ್ತನೆ: 2000 ರೂ.
  16. ವಾಹನವನ್ನು ಬಸ್‌ ತಂಗುದಾಣದಲ್ಲಿ ನಿಲ್ಲಿಸಿದರೆ: 1000 ರೂ.
  17. ಡಿ.ಎಲ್‌ ಇಲ್ಲದೇ ವಾಹನ ಚಾಲನೆ: 2w & 3w-1000 ರೂ., ಎಲ್‌ಎಮ್‌ವಿ -2000 ರೂ, ಇತರೆ 5000 ರೂ.
  18. ಡಿ/ಎಲ್‌ ಪರಿಶೀಲನೆಗೆ ತೋರಿಸದಿರುವುದು: 2w & 3w: 1000 ರೂ.
  19. ಇತರೆ ಉಲ್ಲಂಘನೆ: 5000 ರೂ.
  20. ಡಿ/ಎಲ್‌ ಇಲ್ಲದವರಿಗೆ ವಾಹನ ಚಾಲನೆಗೆ ನೀಡಿದರೆ: 2 ಡಬ್ಲೂ ಮತ್ತು 3 ಡಬ್ಲೂ: 1000 ರೂ., ಎಲ್‌ಎಮ್‌ವಿ: 2000 ರೂ, ಇತರೆ: 5000 ರೂ.
  21. ಅಪ್ರಾಪ್ತ ವಯಸ್ಸಿನವರಿಂದ ವಾಹನ ಚಾಲನೆ: ನ್ಯಾಯಾಲಯದಿಂದ ದಂಡ
  22. ಅಪ್ರಾಪ್ತ ವಯಸ್ಸಿನವರಿಗೆ ವಾಹನ ಚಾಲನೆಗೆ ನೀಡಿದರೆ: ನ್ಯಾಯಾಲಯದಿಂದ ದಂಡ (25,000 ರೂ. ದಂಡ ಮತ್ತು 3 ವರ್ಷ ಜೈಲು ಶಿಕ್ಷೆ ವಾಹನ ನೋಂದಾವಣೆ ರದ್ದು).

ಇದನ್ನೂ ಓದಿ | Fake Number Plates | ಒಂದಲ್ಲ, ಎರಡಲ್ಲ, ಮೂರು ವಾಹನಗಳಿಗೆ ಒಂದೇ ಸಂಖ್ಯೆ!

Exit mobile version